ಧಾರವಾಡ: ಮಕ್ಕಳು ಈ ದೇಶದ ಸಂಪತ್ತು, ಮತ್ತು ಶಕ್ತಿ ಮಕ್ಕಳಲ್ಲಿ ಹುದುಗಿರುವ ಕಲೆ ಸಂಗೀತ ಮತ್ತು ಸಾಹಿತ್ಯವನ್ನು ಹೊರಹಾಕಲು ಇಂತಹ ವೇದಿಕೆಗಳು ತುಂಬಾ ಅವಶ್ಯಕ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು, ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ, ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ, ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ ಇವರು ಹಮ್ಮಿಕೊಂಡ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ, ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ, ಸರಕಾರಿ ಶಾಲೆಗಳು,ಮತ್ತು ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ, ಜನರಿಗೆ ಪರಿಚಯಯಿಸುವ ಇವರ ಸತ್ಕಾರ್ಯ ಮೆಚ್ಚುವಂತಹುದು, ಒಬ್ಬ ದೇವಸ್ಥಾನದ ಅರ್ಚಕರು ಕಥೆ ಕಾದಂಬರಿ ಬರೆದು ಲೇಖಕರಾಗಿದ್ದು ತುಂಬಾ ಒಳ್ಳೆಯ ಕಾರ್ಯ ಎಂದು ಹೆಬ್ಬಳ್ಳಿಯ ಶ್ರೀ ಮೂಗಬಸವಣ್ಣ ದೇವರ ಅರ್ಚಕರಾದ ಶ್ರೀ ಗುರು ಚರಂತಯ್ಯ ಕೊಣ್ಣೂರ ಹಿರೇಮಠ ಇವರ ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನರವರ ಕುರಿತು ಬರೆದ ಜ್ಞಾನ ಯಜ್ಞದ ಮೌನ ಮುದ್ರೆ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಧಾರವಾಡದ ಚಿಂತಕರು ಸಾಹಿತಿಗಳು ಆದ ಡಾ, ಹೇಮಾ ಪಟ್ಟಣಶೆಟ್ಟಿ ಮಾತನಾಡಿ ಶ್ರೀ ಗುರು ಚರಂತಯ್ಯ ಕೊಣ್ಣೂರ ಹಿರೇಮಠ ಇವರು ಲೂಸಿ ಸಾಲ್ಡಾನರವರ ಬಗ್ಗೆ ಈ ಕಾದಂಬರಿಯಲ್ಲಿ ಲೂಸಿ ಅವರನ್ನು ತುಂಬಾ ವರ್ಣನೆ ಮಾಡಿದ್ದಾರೆ, ಆದರೆ ಲೂಸಿ ಅವರಿಗೆ ಅವರ ಬಾಲ್ಯದಲ್ಲಿ ಆದ ನೋವಿನ ಕುರಿತು ಸ್ವಲ್ಪ ಹೇಳಬಹುದಿತ್ತು ಎಂದರು, ಧಾರವಾಡ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ಮಲ್ಲಿಕಾರ್ಜುನ ತೊದಲಬಾಗಿಯರು ಬರೆದ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎಫ್ ಸಿ ಚೇಗರಡ್ಡಿ ಮಲ್ಲಿಕಾರ್ಜುನ ತೊದಲಬಾಗಿಯವರು ಒಬ್ಬ ಜಿಲ್ಲಾ ಮಟ್ಟದ ಕೆ ಎ ಎಸ್ ಅಧಿಕಾರಿಯಾಗಿ, ಯಾವುದೇ ಸಂಕೋಚ ಇಲ್ಲದೇ ರಜಾ ದಿನಗಳಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಪರಿಸರ ಪ್ರೇಮ ತಂಡವನ್ನು ಕಟ್ಟಿಕೊಂಡು, ಬಣ್ಣದರ್ಪಣದ ಜೊತೆಗೆ ಸಸಿಗಳನ್ನು ನೆಡುವ ಇವರ ಸತ್ಕಾರ್ಯ ತುಂಬಾ ಆದರ್ಶವಾಗಿದೆ, ಇವರು ಬರೆದ ಸಾಧನೆಯ ಹಾದಿಯಲ್ಲಿ ಪುಸ್ತಕ ಮಹತ್ವದ ಯಶೋಗಾತೆಗಳನ್ನು ಹೊತ್ತು ತಂದಿದೆ, ಈ ಪುಸ್ತಕ ಮಕ್ಕಳು ಓದಬೇಕು ಎಂದರು,
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ರಮಾ ಆರ್, ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಪೆಡರೇಶನ್ ರಾಷ್ಟ್ರೀಯ ಅಧ್ಯಕ್ಷರಾದ ಡಾ, ಲತಾ ಮುಳ್ಳೂರ, ಹುಬ್ಬಳ್ಳಿಯ ಸರ್ವಧರ್ಮ ಸಮಾಜಸೇವಕರಾದ ರಮೇಶ ಮಹಾದೇವಪ್ಪನವರ ಮಾತನಾಡಿದರು, ಯುಥ್ಸ ಫೌಂಡೇಶನ್ ಅಧ್ಯಕ್ಷರಾ್ ರವಿಚಂದ್ರನ್ ದೊಡ್ಡಿಹಾಳ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಧಾರವಾಡ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ಮಲ್ಲಿಕಾರ್ಜುನ ತೊದಲಬಾಗಿ, ಹುಬ್ಬಳ್ಳಿಯ ರೈತ ಸಂಘದ ಅಧ್ಯಕ್ಷರಾದ ಮಾರುತಿ ಬೀಳಗಿ ಲೂಸಿ ಸಾಲ್ಡಾನ ಲತಾ ಮುಳ್ಳೂರ ಗುರು ತಿಗಡಿ, ಬಿಲ್ವನಿ ಸಂಸ್ಥೆಯ ಮುಖ್ಯಸ್ಥರು ಉಮಾದೇವಿ ಹಿರೇಮಠ, ಡಾ, ಭಾರತಿ ಗಾಣಿಗೇರ ಕೆ ಜಿ ದೇವರಮನಿ ಡಾ, ಪ್ರೇಮಾ ಗಿರಿಮಶೆಟ್ಟಿ ಸುರೇಶ ಮಹಾದೇವ, ಶ್ರೀನಿವಾಸ ವಾಲಿಕಾರ ಬಸವರಾಜ ಕುಡುವಕ್ಕಲಿಗೇರ, ಜ್ಯೋತಿ ಆಚಾರ್ಯ, ಯಲ್ಲಪ್ಪ ಪರಸಪ್ಪನವರ ಎಲ್ ಐ ಲಕ್ಕಮ್ಮನವರ ಪಂಡಿತ ಆವಜಿ ಸೇರಿದಂತೆ ಇತರರು ಇದ್ದರು.