ಧಾರವಾಡ : ಧಾರವಾಡ ಹೊಸ ಬಸ್ಸ ನಿಲ್ದಾಣ ಹತ್ತಿರ ಇರುವ ಶ್ರೀ ಗಣೇಶ ಮಂದಿರದಿಂದ ಪ್ರಾರಂಭವಾದ ಪಾದಯಾತ್ರೆಯು ಕ್ರಷಿ ವಿಶ್ವವಿದ್ಯಾಲಯದ, ಎರ್ ಟೆಕ್, ನರೇಂದ್ರ, ಮಂಗಳಗಟ್ಚಿ ಮಾರ್ಗವಾಗಿ ಶ್ರೀ ಕುರುಬಗಟ್ಟಿ ಹನುಮಂತ ದೇವಸ್ಥಾನ ಮಧ್ಯಾಹ್ನ ತಲುಪಿ ಶಾಸ್ತ್ರೂಕ್ತ ಪೂಜೆ, ಅಭಿಷೇಕ, ಶ್ರೀರಾಮ ಸ್ತೂತ್ರ, ವಿಷ್ಣು ಸಹಸ್ರ ನಾಮ,ಹನುಮಾನ ಚಾಲೀಸಾ , ಆರತಿ, ಮಂತ್ರ ಪುಷ್ಪ ಪಠಿಸಿ ಮಹಾ ಪ್ರಸಾದ ಮೂಲಕ ಪಾದಯಾತ್ರೆಯ ಕಾರ್ಯಕ್ರಮ ಅಂತ್ಯ ಗೂಂಡಿತು. ದತ್ತ ಪಾದಯಾತ್ರೆಯ ಸಂಸ್ಥಾಪಕ ಅಧ್ಯಕ್ಷ ಆನಂದ ಕುಲಕಣಿ೯ ನೇತೃತ್ವ ವಹಿಸಿದ್ದರು.
ಪಾದಯಾತ್ರೆ ಯಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ದಾರಿ ಉದ್ದಕ್ಕೂ ರಾಮನಾಮ, ಹನುಮನ ಭಜನೆ ಮಾಡುತ್ತ ಕುರುಬಗಟ್ಟಿಗೆ ತಲುಪಿದರು, ಮಂಜುನಾಥ ಕುಲಕರ್ಣಿ,ವಿಜಯ ಇನಾಮದಾರ,ಅರವಿಂದ ನವಲಗುಂದ, ಆರ್ ಡಿ ಹುಲಕೋಟಿ,ಸುಬ್ಬಣ್ಣ ಜೋಗಳೆಕರ, ರಾಜು ವಾಳ್ವೇಕರ, ಚಿದಂಬರ ವಾಳ್ವೇಕರ, ರವಿ ಕುಲಕರ್ಣಿ, ಸಂಜೀವ ದಿಕ್ಷೀತ, ಮುಂತಾದವರಿದ್ದರು,