ಹುಕ್ಕೇರಿ ವಿದ್ಯುತ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮಹಾವೀರ ನೀಲಜಗಿ, ಉಪಾಧ್ಯಕ್ಷರಾಗಿ ಅಜಿತ ಮುನ್ನೊಳಿ ಅವರೋಧ ಆಯ್ಕೆ.

Ravi Talawar
ಹುಕ್ಕೇರಿ ವಿದ್ಯುತ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮಹಾವೀರ ನೀಲಜಗಿ, ಉಪಾಧ್ಯಕ್ಷರಾಗಿ ಅಜಿತ ಮುನ್ನೊಳಿ ಅವರೋಧ ಆಯ್ಕೆ.
WhatsApp Group Join Now
Telegram Group Join Now
ಹುಕ್ಕೇರಿ -ರಾಜ್ಯದ ಗಮನ ಸೆಳೆದ ಹುಕ್ಕೇರಿ ವಿದ್ಯುತ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವಾಭಿಮಾನಿ ಪೆನೆಲ್ ನ ಎಲ್ಲ 15 ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡುವ ಮೂಲಕ ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಾಜಿ ಸಚಿವ ಎ ಬಿ ಪಾಟೀಲರ ಬಣ ಗೆಲುವು ಸಾಧಿಸಿತು.
ಸಹಕಾರಿ ವಲಯದಲ್ಲಿ ಪ್ರತಿಷ್ಟೆಯಾಗಿ ಪರಿಣಿಮಿಸಿದ ಈ ಚುನಾವಣೆ ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕೀಯದಲ್ಲೂ ಬದಲಾವಣೆ ಪರ್ವಕ್ಕೆ ಮುನ್ನಡೆಯಾಗಬಹುದು ಎಂದು ಪ್ರಜ್ಞಾವಂತ ಮತ್ತು  ಸಹಕಾರಿಗಳ ಅಭಿಮತವಾಗಿದೆ.
   ಬುಧವಾರದಂದು  ನಡೆದ ಅದ್ಯಕ್ಷ ಉಪಾದ್ಯಕ್ಷ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ  ಮಹಾವೀರ ನಿಲಜಗಿ, ಉಪಾಧ್ಯಕ್ಷ ಸ್ಥಾನಕ್ಕೆ ಅಜೀತ ಮುನ್ನೋಳ್ಳಿ ತಲಾ ಒಂದೊಂದು ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರೆಂದು ಚುನಾವಣಾ ಅಧಿಕಾರಿ ಸುಭಾಷ ಸಂಪಗಾಂವಿ ತಿಳಿಸಿದರು.
ಅದ್ಯಕ್ಷರ ಆಯ್ಕೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ನೂತನ ಅದ್ಯಕ್ಷ ಮಹಾವೀರ ನಿಲಜಗಿ ತಾಲೂಕಿನ ಜನರ ಸ್ವಾಭಿಮಾನಿ ಪೆನಾಲ್ ಭರ್ಜರಿಯಾಗಿ ಜಯಗಳಿಸಿ  ನಾನು ಇಂದು ಹಿರಿಯರಾದ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ ಬಿ ಪಾಟೀಲ, ಶಾಸಕ ನಿಖಿಲ್ ಕತ್ತಿ ಅವರ ಮಾರ್ಗದರ್ಶನದಲ್ಲಿ  ವಿದ್ಯುತ ಸಂಘದ   ಅಧ್ಯಕ್ಷರಾಗಿ ಆಯ್ಕೆ ಅಗಿದ್ದು. ಜನರ  ಮತ್ತು ಹಿರಿಯ ಸಹಕಾರಿಗಳ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿ ಸಹಕಾರದೊಂದಿಗೆ ಸಂಘದ ಶ್ರೇಯೊಭಿವೃದ್ದಿಗೆ ಶ್ರಮಿಸುವದಾಗಿ ತಿಳಿಸಿದರು.
     ಉಪಾಧ್ಯಕ್ಷ ಅಜೀತ ಮುನ್ನೋಳ್ಳಿ  ಮಾತನಾಡಿ ಸಂಘದ ಚುನಾವಣೆಯಲ್ಲಿ ನಮ್ಮೆಲ್ಲರಿಗೆ ಹುಕ್ಕೇರಿ ಮತ್ತು ಯಮಕನಮರ್ಡಿ ಕ್ಷೇತ್ರದ ಜನತೆ ಮತ ನೀಡಿ ಅವಕಾಶ ಕಲ್ಪಿಸಿದ ಮಹಾ ಜನತೆಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಗೀರಿಶ ಯಾವಗಲ್, ನವೀನ ಹುಲಕುಂದ ಮತ್ತು ವ್ಯವಸ್ಥಾಪಕ ನಿರ್ದೆಶಕ ರವಿ ಪಾಟೀಲ, ಅಭಿಯಂತರ ನೇಮಿನಾಥ ಖೆಮಲಾಪುರೆ , ಸಂಘದ ಎಲ್ಲ ನಿರ್ದೆಶಕರು,ಅಧಿಕಾರಿಗಳು ಸಿಬ್ಬಂದಿ ವರ್ಗ ಮತ್ತು ಸಹಕಾರಿ ಮುಖಂಡರು ಉಪಸ್ಥಿತರಿದ್ದರು .
   ಇದೆ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮುಖಂಡರು, ಸಾರ್ವಜನಿಕರು ಸತ್ಕರಿಸಿದರು.
WhatsApp Group Join Now
Telegram Group Join Now
Share This Article