ಸುಡುಗಾಡು ಸಿದ್ದರ ಸಮಾಜ ಪರಿವರ್ತನೆಯ ಹಾದಿಯಲ್ಲಿ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು

Ravi Talawar
ಸುಡುಗಾಡು ಸಿದ್ದರ ಸಮಾಜ ಪರಿವರ್ತನೆಯ ಹಾದಿಯಲ್ಲಿ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು
WhatsApp Group Join Now
Telegram Group Join Now
ಘಟಪ್ರಭಾ: ಅಲೆಮಾರಿ ಜನಾಂಗದ ಜನರು  ಇಪ್ಪತ್ತು ವರುಷಗಳ ಹಿಂದೆ ಅನಕ್ಷರತೆ, ಬಡತನದಿಂದ ಬಳಲುತ್ತಿದ್ದರು ಆದರೆ ಕಾಲ ಬದಲಾದಂತೆ ಅನಕ್ಷರತೆ, ಬಡತನ ಕಡಿಮೆ ಆಗಿ ಸುಶಿಕ್ಷಿತರಾಗಿ ಉದ್ಯೋಗ ಹಾಗೂ ನೌಕರಸ್ಥರಾಗುತ್ತಿರುವದು ಅತ್ಯಂತ ಸಂತೋಷದ ವಿಷಯ,ಈ ರೀತಿಯಾಗಿ ಸುಡುಗಾಡು ಸಿದ್ದರ ಸಮಾಜ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ  ಎಂದು ಘಟಪ್ರಭಾದ ಗುಬ್ಬಲಗುಡ್ಡ  ಕೆಂಪಣ್ಣಾ ಸ್ವಾಮಿ ಮಠದ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
     ಅವರು ಘಟಪ್ರಭಾದ ಸುಡುಗಾಡು ಸಿದ್ದರ ಸಮಾಜದವರು ಆಯೋಜಿಸಿದ್ದ ಶ್ರೀ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
       ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಘಟಪ್ರಭಾದ ಪೋಲೀಸ್ ಇನ್ಸಪೆಕ್ಟರ್ ಎಚ್ ಡಿ ಮುಲ್ಲಾ ಮಾತನಾಡಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಂಪ್ರದಾಯ ಸಂಸ್ಕೃತಿ, ಕಲಿಸುವದರ ಜೊತೆಗೆ ಹಿರಿಯರಿಗೆ ಗೌರವ ಕೊಡುವದನ್ನು ಕಲಿಸಬೇಕು, ವಯೋವೃದ್ಧರನ್ನು ಸಾಕಿ ಸಲುಹುವ ಬಗ್ಗೆ ಜಾಗೃತಿ ಮೂಡಿಸುವ  ಕೆಲಸ ಮಾಡಬೇಕು ಎಂದು ನುಡಿದರು.
    ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಮಾತನಾಡಿ ಸುಡುಗಾಡು ಸಿದ್ದರ ಸಮಾಜದ ಜನರು ಸುಶಿಕ್ಷಿತ ರಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿ ನಾಡು ನುಡಿಯ ಸೇವೆ ಮಾಡುವ ಜೊತೆಗೆ ಸಾರ್ವಜನಿಕ ರಂಗದಲ್ಲಿ ಸಹ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಆಗಿದೆ ಎಂದು ನುಡಿದರು,    ವೇದಿಕೆಯಲ್ಲಿ ಘಟಪ್ರಭಾದ ಹಿರಿಯರಾದ  ಡಿ ಎಂ ದಳವಾಯಿ, ಗಣ್ಯ ಉದ್ದಿಮೆದಾರರು ಹಾಗೂ ಗುತ್ತಿಗೆದಾರರಾದ ಜಯಶೀಲ ಶೆಟ್ಟಿ, ಶಂಕರಲಿಂಗ ಅಂತರಗಂಗಿ,ನಿವೃತ್ತ ಪಿ ಎಸ್ ಐ ಚನ್ನಬಸಪ್ಪ ಕರಬಣ್ಣವರ, ಡಾ ವಿರೇಶ ವಾಲಿ, ಸುಡುಗಾಡು ಸಿದ್ದರ ಸಮಾಜದ ಹಿರಿಯರು, ಮತ್ತು ವೀರಣ್ಣ ಸಂಗಮನವರ, ಆನಂದ ಪತಾಗಿರಿ, ದುರ್ಗಾಜಿ ಕೋಮಾರಿ ಸೇರಿದಂತೆ ಹಲವಾರು ಮುಖಂಡರು  ಹಾಜರಿದ್ದರು.
WhatsApp Group Join Now
Telegram Group Join Now
Share This Article