ಶ್ರೀಮತಿ ಸಿಂಧೂರ ಮುಹೂರ್ತ

Ravi Talawar
ಶ್ರೀಮತಿ ಸಿಂಧೂರ ಮುಹೂರ್ತ
WhatsApp Group Join Now
Telegram Group Join Now
     ಆರ್ ಅಂಡ್ ಆರ್ ಎಂಟರ್‌ಪ್ರೈಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ನಿರ್ಮಾಣ, ಆರ್.ಅನಂತರಾಜು ನಿರ್ದೇಶನ ಮಾಡುತ್ತಿರುವ ‘ಶ್ರೀಮತಿ ಸಿಂಧೂರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀಮಾರಮ್ಮ ದೇವಿ ಸನ್ನಿದಿಯಲ್ಲಿ  ನಡೆಯಿತು.
     ವಿಜಯದಶಮಿ ಶುಭದಿನದಂದು
ನಿರ್ಮಾಪಕರ ಪತ್ನಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಾಯಕನಾಗಿ ವಿಜಯರಾಘವೇಂದ್ರ, ಹಳ್ಳಿ ಹುಡುಗಿಯಾಗಿ ಪ್ರಿಯಾ ಹೆಗಡೆ ನಾಯಕ. ರೇಷ್ಮಾ.ವಿ.ಗೌಡ ಉಪನಾಯಕಿ. ವಿಲನ್‌ಗಳಾಗಿ ಪ್ರಸನ್ನಬಾಗೀನ, ಗಣೇಶ್‌ರಾವ್ ಕೇಸರ್‌ಕರ್.  ಕಾಂತಾರದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದ ಮಾನಸ ಸುಧೀರ್. ಉಳಿದಂತೆ ಮನೋಜ್, ರಿತೇಶ್, ಸ್ನೇಹಜಾದವ್ ಮುಂತಾದವರು ನಟಿಸುತ್ತಿದ್ದಾರೆ.
       ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್  ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್, ನೃತ್ಯ ಫೈವ್‌ಸ್ಟಾರ್ ಗಣೇಶ್. ಅಂದಹಾಗೆ ಚಿತ್ರದಲ್ಲಿ ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಘರು ಕೆಲಸ ಮಾಡುತ್ತಿರುವುದು ವಿಶೇಷ. ಇದೇ 23ರಿಂದ ಶೂಟಿಂಗ್‌ಗೆ ತೆರೆಳಲು ತಂಡವು ಸಿದ್ದತೆ ಮಾಡಿಕೊಂಡಿದೆ.
       ನಿರ್ದೇಶಕರು ಮಾತನಾಡಿ “ಒಂದು ಎಳೆಯ ಕತೆಯನ್ನು ನಿರ್ಮಾಪಕರು ಹೇಳಿದ್ದನ್ನು ವಿಸ್ತಾರ ಮಾಡಿಕೊಂಡು ಸನ್ನಿವೇಶಗಳನ್ನು ಸಿದ್ದಪಡಿಸಲಾಗಿದೆ. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ ಎನ್ನಬಹುದು”.
      “ಬೀದರ್ ಮೂಲದ ಮಾರುತಿ 6.4 ಅಡಿ ಎತ್ತರದ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ” ಎಂದು ಆರ್.ಅನಂತರಾಜು ಮಾಹಿತಿ ಬಿಚ್ಚಿಟ್ಟರು.
     “ಇತ್ತೀಚಿನ ದಿನಗಳಲ್ಲಿ ಎಲ್ಲಾ ತರಹದ ಚಿತ್ರಗಳು ಬರುತ್ತಿದೆ. ಫ್ಯಾಮಿಲಿ ಕಥೆಗಳು ತುಂಬಾ ವಿರಳವಾಗಿದೆ. ಯಾವುದು ಅರ್ಥವಾಗುವುದಿಲ್ಲವೋ ಅದರ ಕಡೆ ಒಲವು ಜಾಸ್ತಿ ಆಗುತ್ತದೆ. ಇದನ್ನು ಪವಾಡ, ಅದೃಷ್ಟ ಎನ್ನಬೇಕೋ ತಿಳಿಯದು. ಒಳ್ಳೆ ಸ್ಕ್ರಿಪ್ಟ್, ಪಾತ್ರ ಇದ್ದರೆ ಖಂಡಿತ ಓಕೆ ಎನ್ನುತ್ತೇನೆ. ಆ ಸಾಲಿಗೆ ಇದು ಸೇರಿದೆ. ಊರಿನ ಜವಬ್ದಾರಿಯುತ ಕುಟುಂಬದ ಮಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ವಿಜಯರಾಘವೇಂದ್ರ ಹೇಳಿದರು.
       “ಏಳೆಂಟು ವರ್ಷಗಳ ಹಿಂದೆ ’ಗ್ರೀನ್ ಸಿಗ್ನಲ್’ ಚಿತ್ರ ಮಾಡಿದ್ದೆ. ಈಗ ಸಿಂಧೂರಗೆ ಬಂಡವಾಳ ಹೂಡುತ್ತಿದ್ದೇನೆ. ಚಿನ್ನಾರಿ ಮುತ್ತ ವಿಜಯರಾಘವೇಂದ್ರ ಅವರಿಂದ ನಮ್ಮ ಸಿನಿಮಾಗೆ ವಜ್ರ ಸಿಗಲಿ” ಎಂದು ಡಿ.ಎನ್.ನಾಗೀರೆಡ್ಡಿ  ಅಭಿಲಾಷೆಯನ್ನು ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article