“ವಾಲ್ಮೀಕಿಯವರು ಬರೆದ ರಾಮಾಯಣ ಇಡಿ ದೇಶಕ್ಕೆ ಮಾದರಿಯಾಗಿದೆ”

Pratibha Boi
“ವಾಲ್ಮೀಕಿಯವರು ಬರೆದ ರಾಮಾಯಣ ಇಡಿ ದೇಶಕ್ಕೆ ಮಾದರಿಯಾಗಿದೆ”
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
WhatsApp Group Join Now
Telegram Group Join Now

ಮಹಾಲಿಂಗಪುರ: ಶ್ರೀರಾಮನ ಜೀವನ ಚರಿತ್ರೆ ರಾಮಾಯಣ ಬರೆದ ಮಹಾನ್ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಅವರ ಭಾವ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಸಂಸ್ಕೃತ ಭಾ?ಯ ಮೊದಲ ಆದ್ಯ ಕವಿಯಾಗಿ ರಾಮಾಯಣ ಮಹಾಕಾವ್ಯ ಬರೆದು ಅಗ್ರಗಣ್ಯರೆನಿಸಿದ್ದಾರೆ, ವಾಲ್ಮೀಕಿಯವರು ಬರೆದ ರಾಮಾಯಣ ಇಡಿ ದೇಶಕ್ಕೆ ಮಾದರಿಯಾಗಿದೆ. ಅಲ್ಲದೆ ರಾಮಾಯಣ ಓದಿದ ಎಷ್ಟೋ ಜನರ ಜೀವನ ಮಾದರಿಯಾಗಿ ನಡೆದು ಬಂದ ಎಷ್ಟೋ ಘಟನೆಗಳನ್ನು ಇಂದಿಗೆ ನೋಡಬಹುದಾಗಿದೆ. ಇಂಥ ಮಹಾತ್ಮ ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ಎಲ್ಲರೂ ಅರಿತುಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಂಡಾಗ ಮಾತ್ರ ಇಂಥ ಜಯಂತಿ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ,ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಶಿವಬಸು ಗೌಂಡಿ,ಅಧಿಕಾರಿಗಳಾದ ಸಿ ಎಸ್ ಮಠಪತಿ, ಎಂ. ಎಂ. ಮುಗಳಖೋಡ, ಎಂ. ಕೆ. ದಳವಾಯಿ, ಶಿವಾನಂದ ಚೌದರಿ, ಲಕ್ಷ್ಮಿಬಾಯಿ ಪರೀಟ,ರಾಮು ಮಾಂಗ ಸೇರಿದಂತೆ ಹಲವರು ಇದ್ದರು.

WhatsApp Group Join Now
Telegram Group Join Now
Share This Article