ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ – ಶಾಸಕ ಗುಡಗುಂಟಿ

Pratibha Boi
ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ – ಶಾಸಕ ಗುಡಗುಂಟಿ
WhatsApp Group Join Now
Telegram Group Join Now

ಜಮಖಂಡಿ;ನಗರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು 4-5 ತಿಂಗಳಲ್ಲಿ ಎಲ್ಲ ಪ್ರಮುಖ ರಸ್ತೆಗಳ ಅಭಿವೃದ್ಧಿ ಯಾಗಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಸೋಮವಾರ ಸಂಜೆ ನಗರದ ಮೊರೆ ಪ್ಲಾಟ್‌ನಲ್ಲಿ ನಗರೋತ್ಥಾನ ಹಂತ 4 ಯೊಜನೆಅಡಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರ ದಿಂದ 25 ಕೋಟಿರೂ.ಗಳ ಅನುದಾನ ಬಿಡುಗಡೆಯಾಗಿದ್ದು ಲೋಕೋಪಯೋಗಿ ಇಲಾಖೆ, ನಗರಸಭೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಮಾನವಾಗಿ ಅನುದಾನ ನೀಡಲಾಗಿದೆ ಇದರಿಂದ ನಗರದ ಪ್ರಮುಖ ರಸ್ತೆಗಳು, ಗ್ರಾಮಾಂತರ ಪ್ರದೇಶದ ಸಾವಳಗಿ, ಗೋಠೆ, ತೊದಲಬಾಗಿ ಮುಂತಾದ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಸುಮಾರು ಐದು ತಿಂಗಳು ಗಳ ಅವಧಿಯಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದು ತಿಳಿಸಿದರು. ಜಮಖಂಡಿ ನಗರ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ ಅದಕ್ಕಾಗಿ ಸಂಬಂಧ ಪಟ್ಟ ಇಲಾಖೆಯ ಸಚಿವರಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.

ನಗರೋತ್ಥಾನ ಹಂತ 4 ಯೊಜನೆಅಡಿ ವಾರ್ಡ ನಂ.31 ಹುಡ್ಕೊಕಾಲನಿಯಲ್ಲಿ ಡಾಂಬರ ರಸ್ತೆ ನಿರ್ಮಾಣ, ಅಂಗವಿಕಲ ಸ್ನೇಹಿ ಉದ್ಯಾನವನ ಅಭಿವೃದ್ಧಿ, ವಾರ್ಡ 30ರ ಟೀಚರ್ಸ್ ಕಾಲನಿಯ ಉದ್ಯಾನವನ ಅಭಿವೃದ್ಧಿ, ವಾರ್ಡ 1 ಉದ್ಯಾನವನ ಅಭಿವೃದ್ಧಿ, ವಾರ್ಡ 3 ರ ಸಮುದಾಯ ಭವನಕ್ಕೆ ಕಬ್ಬಿಣದ ಮೆಲ್ಛಾವಣಿ ನಿರ್ಮಾಣ, ವಾರ್ಡ, 7 ಕತಾಟೆ ಬಡಾವಣೆಯಲ್ಲಿ ಅಂಗವಿಕಲ ಸ್ನೇಹಿ ಉದ್ಯಾನವನ ಅಭಿವೃದ್ಧಿ, ನಗರದ ದೇಸಾಯಿವೃತ್ತ ದಿಂದ ದೀಪದ ರಸ್ತೆಯ ಮಧ್ಯದಲ್ಲಿ ಅಲಂಕಾರಿಕ ವಿದ್ಯುತ್‌ದೀಪ ಅಳವಡಿಕೆ, ವಾರ್ಡ 15 ರಲ್ಲಿ ಭಕ್ತಕನಕದಾಸ ಸಮುದಾಯ ಭವನದ ಎದುರಿನ ರಸ್ತೆಗೆ ಫೇವರ್ಸ ಅಳವಡಿಸುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸುಮಾರು 275.25 ಲಕ್ಷ ರೂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಪೌರಾಯುಕ್ತ ಜ್ಯೋತಿಗಿರೀಶ, ನಗರಸಭೆ ಸದಸ್ಯ ಕುಶಾಲ ವಾಘಮೋರೆ, ಮುಖಂಡರಾದ ಅಜಯ ಕಡಪಟ್ಟಿ ರಾಜಾಸಾಬ ಕಡಕೋಳ, ಶ್ರೀಧರ ಕಂಬಿ, ವಿನಾಯಕ ಪವಾರ, ರಾಜು ತಳಗಿಹಾಳ, ರಾಜು ಚಿಕನಾಳ, ಪರಶುರಾಮ ವಾಳೆಣ್ಣವರ, ಮೋಹನ ಇಂಗಳೆ, ನಾನಾ ಮೊರೆ, ಮುಂತಾದವರಿದ್ದರು

WhatsApp Group Join Now
Telegram Group Join Now
Share This Article