ನಿಲ್ಲದ ಪಡಿತರ ಅಕ್ರಮ ದಂಧೆ; ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ

Ravi Talawar
ನಿಲ್ಲದ ಪಡಿತರ ಅಕ್ರಮ ದಂಧೆ; ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ
WhatsApp Group Join Now
Telegram Group Join Now
ಆರೋಪಿತರು ಯಾರೆಂದು ಗೊತ್ತಿಲ್ಲ !!! ಅಕ್ಕಿ ಮೌಲ್ಯದ ಗೊತ್ತಿಲ್ಲ!! ಆಹಾರ ಇಲಾಖೆ ಅಧಿಕಾರಿಗಳ ಕಥೆ ಎಲ್ಲಿಗೆ ಬಂತು??!!
ಬಳ್ಳಾರಿ ಅ 07. ತೋರಣಗಲ್ಲು ಪೊಲೀಸ್ ಠಾಣಾ ಸರಹದ್ದಿನ ಜಿ.ಬಸಾಪುರ ಗ್ರಾಮದಿಂದ ರಾಮಸಾಗರ ಗ್ರಾಮಕ್ಕೆ ಹೋಗುವ ಬಲಭಾಗದ ರಸ್ತೆಯಿಂದ ಅಂದಾಜು 250 ರಿಂದ 300 ಮೀಟ‌ರ್ ಅಂತರದಲ್ಲಿ ಸರ್ಕಾರದ ಜಮೀನಿನಲ್ಲಿ, ಅಂದಾಜು, 388ಪಾಕೆಟ್,4.46,ಲಕ್ಷ ರೂ ಮೌಲ್ಯದ, ಬಡವರ ಪಡಿತರ ಅಕ್ಕಿಯನ್ನು ಸ್ಟಾಕ್ ಮಾಡಿದ್ದಾರೆ.
 ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಅಕ್ಕಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಎ. ಪ್ರದೀಪ್ ಕುಮಾರ್, ಆಹಾರ ನಿರೀಕ್ಷಕರು ಸಂಡೂರು,ಬಾಗದ ಅವರು ಆಗಿದ್ದು, ಅಕ್ರಮ ಪಡಿತರ ದಂದೆಯಲ್ಲಿ ಇವರ ಕೈ ವಾಡ ಇದೇ ಎಂದು, 9663451846 ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇಷ್ಟು ಬಹಿರಂಗವಾಗಿ, ಅಕ್ರಮ ದಂದೆ ನಡೆಯಲು, ಅಧಿಕಾರಿಗಳ ಮೌನವೇ ಕಾರಣವಾಗಿದೆ. ಪೊಲೀಸ್‌ ಪ್ರಕರಣದಲ್ಲಿ ದಂದೆಯ ಮಾಲೀಕರು ಯಾರು ?ಅಕ್ಕಿ ಯಾರದ್ದೂ ಎಂದು ಗೊತ್ತಿಲ್ಲ ಎಂದು ದಾಖಲೆ ಆಗಿದೆ.
05/10/2025 ರಂದು ಸಂಜೆ 05-30ಪಿರ್ಯಾದಿದಾರರಾದ ಎ, ಪ್ರದೀಪ್ ಕುಮಾ‌ರ್, ಆಹಾರ ನಿರೀಕ್ಷಕರು ತಾಲೂಕು ಕಛೇರಿ ಸಂಡೂರು ರವರು ಠಾಣೆಯಲ್ಲಿ
ಹಾಜರಾಗಿ ಗಣಕೀಕರಿಸಿದ ದೂರು ನೀಡಿದ್ದು, ಸಾರಾಂಶ ಈ ದಿನ ದಿನಾಂಕ: 05/10/2025 ರಂದು ಪಿರ್ಯಾದಿದಾರರು
ಸಂಡೂರಿನ ತಮ್ಮ ಮನೆಯಲ್ಲಿದ್ದಾಗ ಮಧ್ಯಾಹ್ನ 04-30 ಗಂಟೆ ಸುಮಾರಿಗೆ ತೋರಣಗಲ್ಲು ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ರೇವಣಸಿದ್ದಪ್ಪ ರವರು ತನಗೆ ತಿಳಿಸಿದ್ದಾರೆ ಎಂದು,ತೋರಣಗಲ್ಲು ಪೊಲೀಸ್ ಠಾಣಾ ಸರಹದ್ದಿನ ಜಿ.ಬಸಾಪುರ ಗ್ರಾಮದಿಂದ ಒಂದುವರೆ ಕಿ.ಮೀ ಅಂತರದಲ್ಲಿ ರಾಮಸಾಗರ ಗ್ರಾಮಕ್ಕೆ ಹೋಗುವ ಬಲಭಾಗದ ರಸ್ತೆಯಿಂದ ಅಂದಾಜು 250ರಿಂದ 300 ಮೀಟ‌ರ್ ಅಂತರದಲ್ಲಿ ಸರ್ಕಾರದ ಜಮೀನಿನಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಣೆಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದಾಗಿ  ಖಚಿತ ಮಾಹಿತಿ ಬಂದಿರುತ್ತದೆಂದು ಸರ್ಕಾರದ ವಿವಿಧ ಯೋಜನೆಗಳಡಿಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಧಾಳಿ ಮಾಡುವ ಬಗ್ಗೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಮಧ್ಯಾಹ್ನ 04-35 ಗಂಟೆಗೆ ಮಾನ್ಯ ತಹಸೀಲ್ದಾರರು, ಸಂಡೂರು ರವರ ಗಮನಕ್ಕೆ ತಂದಿದ್ದು, ಅವರು ತೋರಣಗಲ್ಲು ಪೊಲೀಸ್‌ ಠಾಣೆಗೆ ಹೋಗಿ ಪ್ರಕರಣವನ್ನು ದಾಖಲಿಸಿ ಪೊಲೀಸರೊಂದಿಗೆ ಜಂಟಿಯಾಗಿ ಧಾಳಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಪಿರ್ಯಾದಿದಾರರಿಗೆ
ಸೂಚಿಸಿರುತ್ತಾರೆ.
ದಿನಾಂಕ 05/10/2025 ರಂದು ಸಂಜೆ 05-30 ಕ್ಕೆ ಪಿರ್ಯಾದಿಯು ತೋರಣಗಲ್ಲು ಪೊಲೀಸ್ ಠಾಣೆಗೆ ಹಾಜರಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಸಾಗಾಣಿಕೆ ಮಾಡುತ್ತಿರುವ ಮತ್ತು ಮಾಲೀಕರ ಅಕ್ಕಿ ತುಂಬಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯಿದೆ -1955 ಕಲಂ 3 ಹಾಗೂ 7 ರ ರೀತ್ಯಾ ಕಾನೂನು ಕ್ರಮ ಜರುಗಿಸುವಂತೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ. ಆಹಾರ ಇಲಾಖೆ ಅವರು ಬಹುತೇಕ, ಪ್ರಕರಣಗಳು, ಆಗಿದ್ದು, ಎಲ್ಲವು ಮುಚ್ಚಿಕೊಡು ಹೋಗುತಾ ಇದ್ದಾರೆ. ಈ ಕಥೆ ಏನು ರೂಪ ಪಡೆದುಕೊಳ್ಳತ್ತದೆ ಎಂದು ಕಾದು ನೋಡಬೆಕಾಗಿದೆ.
WhatsApp Group Join Now
Telegram Group Join Now
Share This Article