ಜಾತಿ ಗಣತಿ ಗೊಂದಲದ ಗೂಡು; ಇನ್ನೂ ಸಮೀಕ್ಷೆಯೇ ಶುರುವಾಗಿಲ್ಲ: ಛಲವಾದಿ ನಾರಾಯಣಸ್ವಾಮಿ

Ravi Talawar
ಜಾತಿ ಗಣತಿ ಗೊಂದಲದ ಗೂಡು; ಇನ್ನೂ ಸಮೀಕ್ಷೆಯೇ ಶುರುವಾಗಿಲ್ಲ: ಛಲವಾದಿ ನಾರಾಯಣಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್​ 07: ಜಾತಿಗಣತಿ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಸರ್ಕಾರ ತಪ್ಪು ಅಂಕಿ-ಅಂಶಗಳನ್ನ ನೀಡುತ್ತಿದೆ. ಬೆಂಗಳೂರಲ್ಲಿ ಇನ್ನೂ ಸರಿಯಾಗಿ ಸಮೀಕ್ಷೆಯೇ ಶುರುವಾಗಿಲ್ಲ ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಆರೋಪಿಸಿದ್ದಾರೆ. ಬಿಜೆಪಿ ಜಾತಿ ಗಣತಿ ವಿರೋಧಿ ಅಲ್ಲ. ಆದರೆ ಜಾತಿಗಳನ್ನು ಒಡೆಯುವ ಕೆಲಸ ಸಿಎಂ ಮಾಡುತ್ತಿದ್ದಾರೆ. ಲಿಂಗಾಯತರಿಗೆ ಇಲ್ಲದ ಉಸಾಬರಿ ಸಿದ್ದರಾಮಯ್ಯಗೆ ಯಾಕೆ? ಇವರೇನು ಧರ್ಮಗುರುಗಳಾ ಇಂದು ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಪ್ರಸನ್ನಾನಂದ ಸ್ವಾಮೀಜಿ ಬಂದಿಲ್ಲ. ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ಕೈವಾಡ ಇದೆ. ವಾಲ್ಮೀಕಿ ಸಮುದಾಯದ ನಾಯಕ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಕಾರಣ ಇಡೀ ಸಮುದಾಯ ನಿಮ್ಮ ವಿರುದ್ಧ ತಿರುಗಿ ಬಿದ್ದಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Share This Article