ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸಸಿ ನಡುವ  ಕಾರ್ಯಕ್ರಮ

Ravi Talawar
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಸಸಿ ನಡುವ  ಕಾರ್ಯಕ್ರಮ
WhatsApp Group Join Now
Telegram Group Join Now
ಬಳ್ಳಾರಿ ಅ 05. ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಿಸ್ವಾರ್ಥ ಸೇವೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದು ಪುಣ್ಯ ಕಾರ್ಯಗಳಲ್ಲಿ ಒಂದಾಗಿದೆ. ನಮ್ಮಲ್ಲಿರುವ ಒಂದು ಭಾಗವನ್ನು ದೇವರಿಗೆ ನೀಡುವ ಮೂಲಕ, ನಾವು ಭಗವಂತನಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವುದು ಒಂದು ಮಹತ್ತರವಾದ ಪುಣ್ಯದ ಕೆಲಸವಾಗಿದೆ  ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲುಕ  ಯೋಜನಾಧಿಕಾರಿ ಸತೀಶ್ ಅವರು ತಿಳಿಸಿದರು.
ಬಳ್ಳಾರಿಯ 4 ನೆ ವಾರ್ಡಿನ ಜಗದಾಂಭ ಕಾಲನಿಯ ಬನ್ನಿ ಮಹಂಕಾಳಿ ದೇವಸ್ಥಾನಕ್ಕೆ ಭೇಟಿ‌ ನೀಡಿ ಮಾತನಾಡಿದ ಅವರು ನಮ್ಮ ಜೀವನದಲ್ಲಿ ಭಗವಂತನ ಉಪಸ್ಥಿತಿಯನ್ನು ಆಸ್ವಾಧಿಸಬಹುದು. ಈ ಅಭ್ಯಾಸವು ಹೃದಯ, ಮನಸ್ಸು ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ. ಇದು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ದಾನವೆಂದರೆ ಕೇವಲ ಭೌತಿಕ ತ್ಯಾಗವಲ್ಲ, ಇದು ಭಗವಂತನಿಗೆ ನಿಮ್ಮ ಭಕ್ತಿ ಮತ್ತು ಸಮರ್ಪಣೆಯ ಅಭಿವ್ಯಕ್ತಿಯಾಗಿದೆ.
ನಿರ್ಗತಿಕರಿಗೆ, ಬಡವರಿಗೆ ದಾನ ಮಾಡುವುದರಿಂದ ಹೇಗೆ ನಮ್ಮ ಪುಣ್ಯ ವೃದ್ಧಿಯಾಗುತ್ತದೆಯೋ ಹಾಗೇ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದರಿಂದಲೂ ಪುಣ್ಯದ ಫಲ ಹೆಚ್ಚಾಗುತ್ತದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸುಮಾರು 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೆ 2012-2025 ಇಲ್ಲಿ ವರೆಗೆ ಒಟ್ಟು 222 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು  ₹ 3 ಕೋಟಿ 49 ಲಕ್ಷ ಸಹಾಯಧನವನ್ನು ಮಂಜೂರಾತಿ ಮಾಡಿರುತ್ತಾರೆ.
ನಮ್ಮ ಬಳ್ಳಾರಿ ತಾಲೂಕಿನಲ್ಲಿ ಇದು ವರೆಗೂ  50 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ₹ 68 ಲಕ್ಷದ 35 ಸಾವಿರ ರೂ ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾತಿ ಆಗಿದೆ ಎಂದು ತಿಳಿಸಿದರು.
ಅವರು ದೇವಸ್ಥಾನದ ಪ್ರಾಂಗಣದಲ್ಲಿ ಸಸಿ‌ ನೆಡುವ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದ‌ ನಂತರ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಕಟ್ಟಡದ ಜೀರ್ಣೋದ್ಧಾರಕ್ಕೆ ಸಹಾಯವನ್ನು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಕಾಲನಿಯ ನಿವಾಸಿಗಳು ಅವರನ್ನು ತುಂಬು ಹೃದಯದಿಂದ ಗೌರವಿಸಿ ಸನ್ಮಾನಿಸಿ ಸತ್ಕರಿಸಿದರು. ಈ ಕಾರ್ಯಕ್ರಮದಲ್ಲಿ ಕಾಲನಿಯ ನಿವಾಸಿಗಳೆಲ್ಲರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article