ಬಳ್ಳಾರಿಯಲ್ಲಿ ಮಧ್ವಾಚಾರ್ಯರ ಜಯಂತಿ ಆಚರಣೆ

Ravi Talawar
ಬಳ್ಳಾರಿಯಲ್ಲಿ ಮಧ್ವಾಚಾರ್ಯರ ಜಯಂತಿ ಆಚರಣೆ
WhatsApp Group Join Now
Telegram Group Join Now
ಬಳ್ಳಾರಿ: 04..ಹದಿನಾಲ್ಕು ಲೋಕಗಳನ್ನು ಆಳುವ ತಂದೆ ಉಡುಪಿ ಶ್ರೀಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡು ವಿಷ್ಣು ಸಹಸ್ರನಾಮಕ್ಕೆ ಅದ್ಭುತವಾದ ಭಾಷ್ಯ ರಚನೆ ಮಾಡಿದ್ದ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ನಗರದಲ್ಲಿ ಸಡಗರ, ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಮಧ್ವಾಚಾರ್ಯರ ಸುಂದರ ದಿವ್ಯ ಚಿತ್ರಪಟ ದೊಂದಿಗೆ ನಗರದ ಶ್ರೀ ಸತ್ಯನಾರಾಯಣ ಪೇಟೆ ಮುಖ್ಯ ರಸ್ತೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ದ್ವಿ ಚಕ್ರ ವಾಹನ ಮೆರವಣಿಗೆಯೊಂದಿಗೆ ಸಂಗA ಸರ್ಕಲ್, ರಾಯಲ್ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೊಲೀಸ್ ಸ್ಟೇಷನ್, ಮೋತಿ ಸರ್ಕಲ್, ರೈಲ್ವೆ ನಿಲ್ದಾಣ ರಸ್ತೆ ಮುಖಾಂತರ ಪುನಃ ರಾಯಲ್ ಸರ್ಕಲ್ ನಿಂದ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ಸಂಪನ್ನಗೊಳಿಸಲಾಯಿತು.

ಪಂಡಿತರಾದ ಜಿತೇಂದ್ರ ಆಚಾರ್, ನವೀನ್ ಆಚಾರ್, ಹಿರಿಯ ವಕೀಲರಾದ ರಾಘವೇಂದ್ರ ಮೋಹನ್, ಬ್ರಾಹ್ಮಣ ಸುವಾಸಿನಿಯರಾದ ಶೀಲಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಡಾ. ಶ್ರೀನಾಥ್,  ಸುರೇಂದ್ರಾಚಾರ್, ಡೋಕ್ಕಿ ಗಿರಿ,  ಸಿಮೆಂಟ್ ಗಿರಿ, ಕಲ್ಲಿ, ವೆಂಕಟೇಶ್, ವಿಜಯೇಂದ್ರ, ವಿಜಯ ರಾಜೀವಾಚಾರ್, ಲಕ್ಷ್ಮೀಕಾಂತ್, ವಿಜಯ ವಿಠ್ಠಲ, ಗುರುರಾಜ ಕುಲಕರ್ಣಿ, ವಿಠ್ಠಲ ದೇಸಾಯಿ, ದೇಸಾಯಿ ಸತೀಶ್, ಶ್ಯಾಮ, ಕಾರ್ತಿಕ್, ವಿಜಯ ರಾವ್, ವಿಠ್ಠಲ್ ದೇಸಾಯಿ, ರಾಮರಾವ್ ಕುಲಕರ್ಣಿ, ಹರಿಪ್ರಸಾದ್, ವಿಜೇಂದ್ರ, ವಜ್ರಮಣಿ ಅನಿಲ್, ಹಯವದನಾಚಾರ್, ಗುರು, ಗಿರಿ, ಫಣಿ, ಬುದ್ಧ, ಅಲೂರು ಅನಂತಾಚಾರ್, ವರುಣ್, ಕಾರ್ತಿಕ್, ವಾದಿರಾಜ, ಗುರುತೇಜ, ಶಾಮ್, ಸಂತೋಷ್ ಹಾಗೂ ಎಲ್ಲಾ ಪ್ರಮುಖ ವಿಪ್ರರು ಈ ಮಧ್ಯಾಚಾರ್ಯ ಜಯಂತಿಯಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article