ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ವತಿಯಿಂದ ಮಾನವೀಯತೆಯ ಮರುಸ್ಥಾಪನೆ ಅಭಿಯಾನ

Ravi Talawar
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ವತಿಯಿಂದ ಮಾನವೀಯತೆಯ ಮರುಸ್ಥಾಪನೆ ಅಭಿಯಾನ
WhatsApp Group Join Now
Telegram Group Join Now
ಬಳ್ಳಾರಿ,ಅ.04..: ಇಂದು ಜಗತ್ತಿನಲ್ಲಿ ಕೆಲವು ಸಮುದಾಯಗಳು ಅತಿಯಾದ ಆಸಹಿಷತೆ, ಉದ್ದೇಶಪೂರ್ವಕ ಹಿಂಸೆ ಮತ್ತು ಹೆಚ್ಚಿನ ದೃವೀಕರಣವನ್ನು ಎದುರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಭಯವನ್ನು ವರ್ದಿಕರಿಸಿ, ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ಮೂಲಕ   ಸಮುದಾಯಗಳ ಮಧ್ಯೆ  ವಿಭಜನೆಯನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಸಹನಭೂತಿ ಮತ್ತು ತಿಳುವಳಿಕೆಯು ಕಡಿಮೆಯಾಗುತ್ತಿದೆ. ಈ ಪ್ರಸಕ್ತ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ವೈಯಕ್ತಿಕ ಅಭಿವೃದ್ಧಿ ಮತ್ತು ಸಾಮೂಹಿಕ ಬದಲಾವಣೆಗೆ ಪ್ರಯತ್ನಿಸುತ್ತಿರುವ
ವಿದ್ಯಾರ್ಥಿನಿಯರ ಮತ್ತು ಯುವತಿಯರ ಸಂಘಟನೆಯಾದ “ಗರ್ಲ್ ಇಸ್ಲಾಮಿಕ್ ಆರ್ಗನೈಜೇಷನ್”, ಕರ್ನಾಟಕವು ಅರಿವು: ಮಾನವೀಯತೆ ಮರುಸ್ಥಾಪನೆ ಎಂಬ ಶೀರ್ಷಿಕೆಯ ಆಡಿಯಲ್ಲಿ, ಅ.02 ರಿಂದ 12 ಅಕ್ಟೋಬರ್ 2025 ವರೆಗೆ ರಾಜ್ಯ-ವ್ಯಾಪ್ತಿ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದು ಬಳ್ಳಾರಿ ಸ್ಥಾನಿಕ ಘಟಕದ ಅಧ್ಯಕ್ಷೆ ಜವೇರಿಯ ತಿಳಿಸಿದರು.
ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಅರಿವು” ಅಭಿಯಾನ ಪರಸರ ತಿಳುವಳಿಕೆ, ನಗರದ ಧೈರ್ಯ ಮತ್ತು ಮೌಲ್ಯಗಳನ್ನು ಮರಳಿ ಪಡೆಯಲು ಎತ್ತಲಾದ ಸಾಮೂಹಿಕ ಧ್ವನಿಯಾಗಿದೆ. ಇದು ಭಯಕ್ಕಿಂತ ನಂಬಿಕೆಗೆ, ದ್ವೇಷಕ್ಕಿಂತ ಕರುಣೆಗೆ, ಅಸಡ್ಡೆ ಕ್ಕಿಂತ ಕ್ರಮಕ್ಕೆ ಆದ್ಯತೆಯನ್ನು ನೀಡಬೇಕೆಂಬ ಸಂಕಲ್ಪವಾಗಿದೆ. “ಅರಿವು” ಸಮಾಜದ ನೈತಿಕ ಪ್ರಜ್ಞೆಯನ್ನು ಅವಲೋಕನ, ಸುಧಾರಣೆ ಮತ್ತು ಸೇವೆಯ ಮೂಲಕ ಪುನಃ ಸಜೀವಗೊಳಿಸಲು ಪ್ರಯತ್ನಿಸುತ್ತಿದೆ. ಸಕಲ ಧರ್ಮಿಯರ ಸಹಯೋಗದೊಂದಿಗೆ ಅಂತರ್ಧಮೀಯರ ಸಂವಾದವನ್ನು ಬೆಳೆಸುವುದು. ಮಾನವೀಯ ಸಮಸ್ಯೆಗಳನ್ನು
ಪರಿಹರಿಸುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ಉಂಟುಮಾಡುವುದು. ಸಂವಾದ, ಪರಸ್ಪರ ಬೆಂಬಲ ಮತ್ತು ಸಾಮಾಜಿಕ ಸುಧಾರಣೆಗಾಗಿ ವೇದಿಕೆಗಳನ್ನು ಹುಟ್ಟು ಹಾಕುವುದು. ಮಾನವೀಯ ಕಾರ್ಯ ಚಟುವಟಿಕೆಗಳ ಮೂಲಕ ಇಸ್ಲಾಮಿನ ಸಂದೇಶವನ್ನು ಜೀವಂತಗೊಳಿಸುವುದು ಅಭಿಯಾನದ ಉದ್ದೇಶಗಳಾಗಿವೆ ಎಂದು
ತಿಳಿಸಿದರು. ಈ ಅಭಿಯಾನದ ಅಂಗವಾಗಿ ಪ್ರೌಢಶಾಲೆ, ಕಾಲೇಜುಗಳಲ್ಲಿ ಸ್ಪರ್ಧೆ ಹಾಗೂ ಉಪನ್ಯಾಸ, ವೈಯಕ್ತಿಕ ಮತ್ತು ಸಾಮೂಹಿಕ ಭೇಟಿಗಳು, ಅಂತ‌ರ್ ‘ಧರ್ಮೀಯರ ಸಂವಾದಗಳು, ಮಾನಸಿಕ ಆರೋಗ್ಯ ಕಾರ್ಯಗಾರಗಳು, ಕಲೆ, ಕವನ ಮತ್ತು ಪೋಸ್ಟರ್ ಸ್ಪರ್ಧೆಗಳು, ರಿಲೆ ಮತ್ತು ಜಾಗೃತೆ ವಿಡಿಯೋಗಳು, ಪುಸ್ತಕ ಮತ್ತು ಕರಪತ್ರಿಕೆಗಳ
ವಿತರಣೆ, ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು ಸೇರಿದಂತೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಆಯೋಜಿಸಲಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಾನಿಯ, ಬಿಲ್ಕಿಸ್, ರೋಯಾ, ಸಮಿರಾ, ಮೇಹ ಜಬೀನ್, ಪರ್ವಿನ್, ಶಾಹೀನ್, ನಾಜೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article