ಬಳ್ಳಾರಿ. ಅ. 04. : ನವರಾತ್ರಿ ಪ್ರಯುಕ್ತ ಪಟೇಲ್ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಎದುರುಗಡೆ ಇರುವ ಬನ್ನಿ ಮಹಾಕಾಳಮ್ಮ ದೇವಸ್ಥಾನದಲ್ಲಿ
ಬಾಲಾಜಿ ಯುವಕ ಸಂಘದಿಂದ ಮಹಾಕಾಳಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಅನ್ನದಾನ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.
ಬಾಲಾಜಿ ಯುವಕ ಸಂಘದ ಅಧ್ಯಕ್ಷರಾದ ರಾಜೇಶ್ ಅವರ ನೇತೃತ್ವದಲ್ಲಿ ಇಂದು ಬನ್ನಿ ಮಹಾ ಕಾಳಮ್ಮ ದೇವಿಯ ವಿಶೇಷ ಪೂಜೆ ಕಾರ್ಯಕ್ರಮಗಳು ಮತ್ತು ನೆರೆದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ನಡಸಾಲಾಯಿತು.
ಸತತವಾಗಿ ಕಳೆದ 25 ವರ್ಷಗಳಿಂದ ಬಾಲಾಜಿ ಯುವಕ ಸಂಘದ ರಾಜೇಶ್ ಮತ್ತು ಅವರ ತಂಡ ವಿಜಯದಶಮಿ ಮತ್ತು ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಸಾದ ವಿತರಣೆಯನ್ನು ನಡೆಸುತ್ತಾ ಬಂದಿರುತ್ತಾರೆ ಅದೇ ರೀತಿಯಾಗಿ ಈ ವರ್ಷವೂ ಸಹ ಬಾಲಾಜಿ ಯುವಕ ಸಂಘವು ವಿಶೇಷ ಪೂಜೆ ಕಾರ್ಯಕ್ರಮಗಳೊಂದಿಗೆ ಮಹಾ ಮಂಗಳಾರತಿಯನ್ನು ದೇವಿಗೆನೆರವೇರಿಸಿ ಅನ್ನ ದಾನ ಕಾರ್ಯಕ್ರಮವನ್ನು ನಡೆಸಿದರು.