ಇನಾಮದಾರ ಸಕ್ಕರೆ ಕಾರಖಾನೆಯ ದ್ವಿತೀಯ ಬಾಯ್ಲರ ಪ್ರದೀಪಣಾ ಹಾಗೂ ಕೇನ ಕ್ಯಾರಿಯರ್‌ ಪೂಜಾ ಸಮಾರಂಭ

Ravi Talawar
ಇನಾಮದಾರ ಸಕ್ಕರೆ ಕಾರಖಾನೆಯ ದ್ವಿತೀಯ ಬಾಯ್ಲರ ಪ್ರದೀಪಣಾ ಹಾಗೂ ಕೇನ ಕ್ಯಾರಿಯರ್‌ ಪೂಜಾ ಸಮಾರಂಭ
WhatsApp Group Join Now
Telegram Group Join Now
ಮರಕುಂಬಿ: ಇನಾಮದಾರ ಶುಗರ್ಸ ಲಿ., ಹಿರೇಕೊಪ್ಪ ಮರಕುಂಬಿ ಸಕ್ಕರೆ ಕಾರ್ಖಾನೆಯಲ್ಲಿ ದ್ವೀತೀಯ ವರ್ಷದ ಬಾಯ್ಲರ್‌ ಪ್ರದೀಪಣಾ ಪೂಜಾ ಹಾಗೂ ಕೇನ್‌ ಕ್ಯಾರಿಯರ್‌ ಪೂಜಾ ಕಾರ್ಯಕ್ರಮವನ್ನು ಬುಧವಾರ ದಿನಾಂಕ 01.10.2025 ರಂದು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಮಹಾಗಣಪತಿ,ಸರಸ್ವತಿ ಹಾಗೂ ಲಕ್ಷ್ಮೀ ಪೂಜೆಯನ್ನು ವೇದಮೂರ್ತಿ ದಯಾನಂದ ಮುಪ್ಪಯ್ಯನವರಮಠ ಹಾಗೂ ಸಂಗಡಿಗರು ನೇರವೇರಿಸಿದರು. ಸದರಿ ಕಾರ್ಯಕ್ರಮದಲ್ಲಿ ಮುರಗೋಡದ ಶ್ರೀ  ನೀಲಕಂಠ ಸ್ವಾಮಿಜಿಗಳು, ಬೈಲಹೊಂಗಲ ಮೂರುಸಾವಿರಮಠದ ಪರಮಪೂಜ್ಯರಾದ ಪ್ರಭು ನೀಲಕಂಠ ಸ್ವಾಮಿಗಳು,ಇಂಚಲ ಸಾಧುಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಸ್ವಾಮಿಜಿಗಳು, ಸಂಗೋಳ್ಳಿಯ ಹಿರೇಮಠದ ಶಿವಾಚಾರ್ಯ ಸ್ವಾಮಿಜಿ, ಹೂಲಿಅಜ್ಜನಮಠದ ಉಮೇಶ್ವರ ಶಿವಾಚಾರ್ಯಸ್ವಾಮಿಜಿಗಳ ಸಾನಿಧ್ಯದಲ್ಲಿ ಪೂಜಾ ನೇರವೇರಿಸಲಾಯಿತು.
ಸದರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಳಿಯ ಉದ್ದಿಮೆದಾರರು, ಯುವಮುಖಂಡರು ಹಾಗೂ ಕಾರ್ಖಾನೆಯ ನಿರ್ದೇಶಕರಾದ ವಿಜಯ ಮೆಟಗುಡ್ಡ ಅವರು ಮಾತನಾಡಿ, ಇನಾಮದಾರ ಸಕ್ಕರೆ ಕಾರ್ಖಾನೆ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡು ಪ್ರಾಯೋಗಿಕ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿ ಸುಮಾರು 3.67 ಮೆಟ್ರಿಕ್‌ ಟನ್‌ ಕಬ್ಬು ನುರಿಸಿ ಕಬ್ಬು ಪೂರೈಸಿದ ಸುತ್ತಲಿನ ರೈತಭಾಂದವರಿಗೆ ನಿಗದಿತ ಅವಧೀಯಲ್ಲಿ ಕಬ್ಬಿಣ ಬಿಲ್ಲು ಬಟವಟೆ ಮಾಡಿ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗಿದೆ ಎಂದು ತಿಳಿಸಿದರು. ಮುಂದುವರೆದು ಈ ಸಂದರ್ಭದಲ್ಲಿ ಸದರಿ ಕಾರ್ಖಾನೆಯ ಕಾರ್ಯಾರಂಭ ಮಾಡಲು ಶ್ರಮಿಸಿದ ದಿ. ಡಿ. ಬಿ ಇನಾಮದಾರ ಹಾಗೂ ಕಾರ್ಖಾನೆಯ ಅಧ್ಯಕ್ಷರಾದ ಡಾ ಪ್ರಭಾಕರ ಕೋರೆ ಅವರ ಶ್ರಮ ಹಾಗೂ ಸಹಕಾರವನ್ನು ಸ್ಮರಿಸಿದರು. ಅದೇ ರೀತಿ ಕಾರ್ಖಾನೆಯಲ್ಲಿ ಸ್ಥಳಿಯ ಯುವಕರಿಗೆ ಆಧ್ಯತೆ ನೀಡಲಾಗಿದ್ದು, ಕಾರ್ಮಿಕರಿಗೆ ಆರೋಗ್ಯ ಕಾರ್ಡ (ಹೆಲ್ತ್‌ ಕಾರ್ಡ) ವಿತರಿಸಿದ್ದು ಅದೇ ರೀತಿ ಕಬ್ಬು ಪೂರೈಸಿದ ರೈತ ಭಾಂದವರಿಗೂ ಕೂಡ ಹೆಲ್ತ್‌ ಕಾರ್ಡ, ರೈತರಿಗೊಸ್ಕರ ಯಾತ ನೀರಾವರಿ, ಹನಿ ನೀರಾವರಿ ಒಳ್ಳೆಯ ಕಬ್ಬೀಣ ಸಸಿಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುತ್ತಲಿನ ರೈತ ಭಾಂದವರೂ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯ ಹಾಗೂ ರೈತ ಭಾಂದವರ ಏಳಿಗೆಗಾಗಿ ಸಹಕರಿಸಬೇಕೆಂದು ಕೋರಿದರು.
ತದನಂತರ ಇನೋರ್ವ ಕಾರ್ಖಾನೆಯ ನಿರ್ದೇಶಕರಾದ  ವಿಕ್ರಮ ಇನಾಮದಾರ ಅವರು ಮಾತನಾಡಿ ಕಳೆದ ಹಂಗಾಮಿಗಿಂತ ಈ ಬಾರಿಯ ಹಂಗಾಮು ಅತಿ ಉತ್ಕೃಷ್ಟ ರೀತಿಯಲ್ಲಿ ನಡೆಯುತ್ತದೆ ನಮ್ಮ ದ್ಯೇಯ ರೈತರ ಹಿತಾಶಕ್ತಿಯನ್ನು ಕಾಪಾಡಿಕೊಂಡು ರೈತರನ್ನು ಸಮಾಜದ ಒಳ್ಳೆಯ ಸ್ಥಾನಮಾನದಲ್ಲಿ ನೋಡುವುದಾಗಿದೆ ಎಂದರು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ ನೀಲಕಂಠ ಸ್ವಾಮಿಜಿಗಳು ಆಶಿರ್ವಚನ ನೀಡಿದರು. ಬೈಲಹೊಂಗಲ ಪ್ರಭು ನೀಲಕಂಠ ಸ್ವಾಮಿಜಿಗಳು ರೈತರ ಎಳಿಗೆ ಹಾಗೂ ಹಿತದೃಷ್ಠಿಯಿಂದ ಈ ಕಾರ್ಖಾನೆಯು ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದೆ ಹಾಗೂ ಕಾರ್ಖಾನೆಯು ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಹೊಂದಲಿ ಎಂದರು. ತದ ನಂತರ ಇಂಚಲ ಮಠದ ಶ್ರೀಗಳು ಮಾತನಾಡಿ ದಿ. ಡಿ.ಬಿ ಇನಾಮದಾರ ಅವರನ್ನು ನೇನಿಸಿಕೊಂಡು ಅವರ ಚಿಂತನೆಯಂತೆ ಡಾ ಪ್ರಭಾಕರ ಕೋರೆ ಅವರ ಸಹಕಾರದಿಂದ  ವಿಜಯ ಮೆಟಗುಡ್ಡ ಹಾಗೂ ವಿಕ್ರಮ ಇನಾಮದಾರ ಅವರು ಅಚ್ಚುಕಟ್ಟಾಗಿ ಕಾರ್ಖಾನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ, ಭಗವಂತ ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಟ್ಟು ಈ ಭಾಗದ ರೈತಭಾಂದವರನ್ನು ಮುಂದಿನ ಹಂತಕ್ಕೆ ಕರೆದುಕೊಂಡು ಹೋಗಬೇಕೆಂದು ಸಲಹೆ ಇತ್ತರು. ಸಂಗೊಳ್ಳಿ ಹಿರೇಮಠದ ಶ್ರೀಗಳು ಮಾತನಾಡಿ ಈ ಭಾಗದ ರೈತರ ಹಿತದೃಷ್ಠಿಯಿಂದ ಪ್ರಾರಂಭವಾದ ಕಾರ್ಖಾನೆಯು ದ್ವಿತೀಯ ವರ್ಷದ ಕೇನ ಕ್ಯಾರಿಯರ ಪೂಜೆ ಹಾಗೂ ಬಾಯ್ಲರ ಪ್ರದೀಪಣಾ ಪೂಜೆಯನ್ನು ಮಾಡಿದ್ದಾರೆ ಕಾರ್ಖಾನೆಯು ಸಿಬ್ಬಂದಿಗಳ ಜೊತೆ ಹಾಗೂ ರೈತ ಭಾಂದವರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ನಡೆಯುತ್ತಾ ಬಂದಿದೆ ಇದು ತುಂಬಾ ಸಂತೋಷದ ಸಂಗತಿ ಕಾರ್ಖಾನೆಯು ಇನ್ನು ಹೆಚ್ಚಿನ ಶ್ರೇಯೋಭವೃದ್ಧಯನ್ನು ಹೊಂದಲಿ ಎಂದು ಹೇಳಿದರು. ತದನಂತರ ಪ್ರಾಸ್ತವಿಕ ಮಾತನಾಡಿದ ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿಗಳಾದ ರವೀಂದ್ರ ಚ ಪಟ್ಟಣಶೆಟ್ಟಿಯವರು ಕಾರ್ಖಾನೆಯ ಸುತ್ತಮುತ್ತಲಿನ ಅಂದಾಜು 2000 ಏಕರೆಗೆ ಯಾತ ನೀರಾವರಿ ಹಾಗೂ ಹನಿ ನೀರಾವರಿ ಯೋಜನೆಯನ್ನು ಕೈಗೊಂಡಿದ್ದು ಸದರಿ ಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಹಾಗೂ  ಕಾರ್ಖಾನೆಯಲ್ಲಿ ಬರುವ ಹಂಗಾಮಿನಲ್ಲಿ ಅಂದಾಜು 150 ದಿನಗಳ ಕಬ್ಬು ನುರಿಸುವ ಯೋಜನೆ ಹಾಕಿಕೊಂಡಿದ್ದು ರೈತ ಭಾಂದವರು ಸಹಕರಿಸಲು ಕೋರಿದರು ಹಾಗೂ ಕಾರ್ಖಾನೆಯ ವತಿಯಿಂದ ಎಲ್ಲ ಕಾರ್ಮಿಕ ಸಿಬ್ಬಂದಿಗಳ ನಿಗದಿತ ಅವಧಿಯಲ್ಲಿ ವೇತನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು ಎಲ್ಲ ಸಿಬ್ಬಂದಿಗಳು ಕಾರ್ಮಿಕರು ತಮ್ಮದೇ ಕಾರ್ಖಾನೆ ಎಂದು ಕೆಲಸವನ್ನು ನಿರ್ವಹಿಸಬೇಕೆಂದು ಕರೆ ಇತ್ತರು.
ಇದೇ ಸಂದರ್ಭದಲ್ಲಿ ಕಬ್ಬು ವಿಭಾಗದ ಮುಖ್ಯಸ್ಥರಾದ ಬಿ.ಎ.ಶೇಗುಣಸಿ ಕಾರ್ಖಾನೆಯಿಂದ ಕೈಗೊತ್ತಿಕೊಂಡ ಯಾತ ನೀರಾವರಿ ಹಾಗೂ ನೀರಾವರಿ ಯೋಜನೆಯ ಪ್ರಗತಿಯನ್ನು ವಿವರಿಸಿದರು.
ಈ ಸಮಾರಂಭದಲ್ಲಿ ಹಿರಿಯರಾದ ಶ್ರೀಶೈಲ ಮೆಟಗುಡ್ಡ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಾಸನಗೌಡ ಪಾಟೀಲ್, ಪ್ರಪುಲ ಪಾಟಿಲ, ಶಿವಾನಂದ್ ಬಡ್ಡಿಮನಿ, ಗುರು ಮೆಟಗುಡ, ಸುನೀಲ ಮೆಟಗುಡ್ಡ, ಜಯರಾಜ ಮೆಟಗುಡ್ಡ, ಸುನಿಲ ಮರಕುಂಬಿ. ನಾಮದೇವ ಸಿಂಗಣ್ಣವರ ಹಾಗೂ ಕಾರ್ಖಾನೆಯ ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು ಕಾರ್ಮಿಕರು ಸುತ್ತಮುತ್ತಲಿನ ರೈತ ಬಾಂಧವರು, ಮಾದ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸದರಿ ಕಾರ್ಯಕ್ರಮವನ್ನು ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ವೀರಯ್ಯಾ ವಿರಕ್ತಿಮಠ ಅವರು ನಿರೂಪಿಸಿ ವಂದಿಸಿದರು.
WhatsApp Group Join Now
Telegram Group Join Now
Share This Article