ಧಾರವಾಡ: ಜಯ ಮೃತ್ಯುಂಜಯ ಸ್ವಾಮೀಜಿ  ಉಚ್ಚಾಟನೆಗೆ ಖಂಡನೆ.

Ravi Talawar
ಧಾರವಾಡ: ಜಯ ಮೃತ್ಯುಂಜಯ ಸ್ವಾಮೀಜಿ  ಉಚ್ಚಾಟನೆಗೆ ಖಂಡನೆ.
WhatsApp Group Join Now
Telegram Group Join Now
ಧಾರವಾಡ: ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠದಿಂದ ಉಚ್ಛಾಟಿಸಿದ ಹಿನ್ನೆಲೆ ಧಾರವಾಡದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದ ಅಖಿಲ ಕರ್ನಾಟಕ ಕಂಬಾರ ಮತ್ತು ಬಡಿಗೇರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಆ ಪೀಠದ ಟ್ರಸ್ಟ್‌ನ ಕೆಲ ಸದಸ್ಯರು ಜಯ ಮೃತ್ಯುಂಜಯ ಸ್ವಾಮೀಜಿಗಳ ಕಾಲಿಗೆ ಬಿದ್ದು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ವಿಜಯಾನಂದ ಕಾಶಪ್ಪನವರ ವಿರುದ್ಧ ಹರಿಹಾಯ್ದ ಸದಸ್ಯರು, ಆಧಾರವಿಲ್ಲದೇ ತಮ್ಮ ಮನಸೋ ಇಚ್ಛೆಯಂತೆ ಟ್ರಸ್ಟ್ ಕಮಿಟಿ ಅಧ್ಯಕ್ಷರು, ರಾಜಕಾರಣಿಗಳು ಲಿಂಗಾಯತ ಪೀಠಾಧೀಶರನ್ನು ಉಚ್ಚಾಟನೆ ಮಾಡುವ ಹಾಗೂ ಹೊರಗೆ ಹಾಕುವ ಪದ್ಧತಿ ಬೆಳೆದು ಬರುತ್ತಿರುವುದು ಖಂಡನೀಯ ಇದು ಲಿಂಗಾಯತ ಸಮಾಜಕ್ಕೆ ಅವಮಾನ ಹಾಗೂ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ವಿಜಯಾನಂದ ಕಾಶಪ್ಪನವರು ಹಾಗೂ ಅವರ ಸಂಗಡಿಗರು ಜಯ ಮೃತ್ಯುಂಜಯ ಸ್ವಾಮೀಜಿಗಳ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮಾಪಣೆ ಕೇಳಿ ಅವರನ್ನು ಗೌರವ ಪೂರ್ವಕವಾಗಿ ಸಂಗಮ ಪೀಠಕ್ಕೆ ಕರೆದುಕೊಂಡು ಪೀಠಾರೋಹಣ ಮಾಡಿಸದಿದ್ದರೆ ವಿಜಯಾನಂದ ಕಾಶಪ್ಪನವರ ವಿರುದ್ಧ ನಾವು ಉಗ್ರ ಹೋರಾಟ  ಹಮ್ಮಿಕೊಳ್ಳಬೇಕಾಗುತ್ತದೆ ಮತ್ತು ಪರ್ಯಾಯ ಪೀಠವನ್ನು ಸ್ಥಾಪಿಸಿಕೊಳ್ಳಲು
ವಿದ್ಯಾನಂದ ಕಾಶಪ್ಪನವರ ಹಾಗೂ ಟ್ರಸ್ಟ್ ಇದಕ್ಕೆ ದಾರಿ ಮಾಡಿ ಕೊಡಬಾರದು ಎಂದು ಅಖಿಲ ಕರ್ನಾಟಕ ಲಿಂಗಾಯತ ಕಂಬಾ‌ರ ಹಾಗೂ ಬಡಿಗೇರ ಸಂಘಟನೆ ಒತ್ತಾಯಿಸಿದೆ.
 ಈ  ಸಂದರ್ಭದಲ್ಲಿ ಅಖಿಲ ಕರ್ನಾಟಕ ಲಿಂಗಾಯತ್ ಕಂಬಾರ್ ಮತ್ತು ಬಡಿಗೇರ್ ಸಂಘದ ಉಪಾಧ್ಯಕ್ಷರಾದ ಮಹಾಂತೇಶ್ ಕಂಬಾರ್ ಖಜಾಂಚಿಯಾದ ಈಶ್ವರ್ ಕಂಬಾರ್ ನಿರ್ದೇಶಕರಾದ ಬಸ್ಸಂತಪ್ಪ ಬಡಿಗೇರ್ ಬಸವರಾಜ್ ಬಡಿಗೇರ್ ಬಸವರಾಜ್ ಕಂಬಾರ್ ಜಗದೀಶ್ ಕಮ್ಮಾರ್ ಭೀಮಪ್ಪ ಬಡಿಗೇರ್ ಕಾಳಪ್ಪ ಬಡಿಗೇರ್ ಶಂಕರ್ ಬಡಿಗೇರ್ ಮಲ್ಲಿಕಾರ್ಜುನ್ ಬಡಿಗೇರ್ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು,
WhatsApp Group Join Now
Telegram Group Join Now
Share This Article