ಬುದ್ಧರು ಸಾರಿದ ಶಾಂತಿ ಸಂದೇಶವನ್ನು  ಪಾಲನೆ ಮಾಡಬೇಕು: ರವಿಂದ್ರ ಗಡಾದಿ

Pratibha Boi
ಬುದ್ಧರು ಸಾರಿದ ಶಾಂತಿ ಸಂದೇಶವನ್ನು  ಪಾಲನೆ ಮಾಡಬೇಕು: ರವಿಂದ್ರ ಗಡಾದಿ
WhatsApp Group Join Now
Telegram Group Join Now
ಅಥಣಿ : ಗೌತಮ ಬುದ್ಧರು ಸಾರಿದ ಶಾಂತಿ ಸಂದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿ ವಲಯದ ಪೊಲೀಸ್ ವರಿಷ್ಟಾಧಿಕಾರಿ ರವೀಂದ್ರ ಗಡಾದಿ ಹೇಳಿದರು
   ಅವರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗೂಗವಾಡ ಗ್ರಾಮದಲ್ಲಿ ದಮ್ಮ ಭೂಮಿಗೆ ಬೇಟಿ ನೀಡಿ ಮಾತನಾಡಿದ ಅವರು ಗೌತಮ್ಮ ಬುದ್ಧರು ಹೇಳಿದ ಹಾಗೆ ಕರುಣೆ, ಅಹಿಂಸೆ, ಸಮತೆ ಮತ್ತು ಶಾಂತಿಯಂತಹ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದುಃಖವನ್ನು ನಿವಾರಿಸಿ ಹಾಗೂ ನಿರ್ವಾಣವನ್ನು ತಲುಪಲು ಅಷ್ಟಾಂಗ ಮಾರ್ಗದ ಅನುಸರಣೆಯನ್ನು ಬುದ್ಧರು ಒತ್ತಿ ಹೇಳಿದರು ಕಠಿಣ ಪರಿಶ್ರಮದಿಂದ ಜ್ಞಾನವನ್ನು ಪಡೆಯುವ ಮೂಲಕ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು ಹಾಗೂ
 ಎಲ್ಲರೂ ಶಾಂತವಾಗಿದ್ದರೆ ಯಾವುದೇ ಗಲಾಟೆಗಳು ಆಗುವುದಿಲ್ಲ ಎಂದರು.
            ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲೂಕಾ ಸಂಚಾಲಕರಾದ ರವಿ ಕಾಂಬಳೆ,ರಾಜು ಪರ್ನಾಕರ, ಮಹಾಂತೇಶ ಬನಸೋಡೆ, ವಿಲಾಸ ಕಾಂಬಳೆ, ಪಾಂಡು ಕಾಂಬಳೆ, ಪಂಡಿತ ಕಾಂಬಳೆ, ಮಂಜು ಬಜಂತ್ರಿ, ಮಹಾಂತೇಶ ಕಾಂಬಳೆ, ದಮ್ಮ ಭೂಮಿ ವ್ಯವಸ್ಥಾಪಕ ರಮೇಶ ಕಾಂಬಳೆ, ವಿಜಯ ಕಾಂಬಳೆ, ಲಕ್ಕಪ್ಪ ಕಾಂಬಳೆ, ಶಾಂತಪ್ಪ ಕಾಂಬಳೆ,ಸಂತೋಷ ಹಿಪ್ಪರಗಿ ಸೇರಿದಂತೆ ಮುಂತಾದವರು ಇದ್ದರು.
WhatsApp Group Join Now
Telegram Group Join Now
Share This Article