ಹುನಗುಂದ: ತಾಲ್ಲೂಕಿನಾದ್ಯಂತ ಕಳೆದ ೫-೬ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆಗಳು ಕೊಳೆಯುತ್ತಿದ್ದು. ರೈತರನ್ನೂ ಮತ್ತ? ಸಂಕ?ಕ್ಕೆ ದೂಡಿದಂತಾಗಿದೆ.
ತಾಲ್ಲೂಕಿನಲ್ಲಿ ಬೆಳೆಗಳಾದ ತೊಗರಿ ಬೆಳೆ ೧೮,೫೭೦ ಹೆಕ್ಟೇರ್, ಗೋವಿನ ಜೋಳ ೩೬೪೬ ಹೆಕ್ಟೇರ್, ಸೂರ್ಯಕಾಂತಿ ೧೦೫೬ ಹೆಕ್ಟೇರ್, ತೋಟಗಾರಿಕೆ ಬೆಳೆಗಳಾದ ಈರುಳ್ಳಿ ೪೨೫೦ ಹೆಕ್ಟೇರ್ ಮತ್ತು ಮೆಣಸಿನಕಾಯಿ ೧೫೭೨ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬಹುತೇಕ ಬೆಳೆ ಕಟಾವಿಗೆ ಬಂದಿದ್ದು, ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕಟಾವು ಮಾಡಲಾಗಿದೆ. ಇನ್ನುಳಿದ ಭಾಗದಲ್ಲಿ ನಿರಂತರ ಮಳೆಯಿಂದ ಬೆಳೆ ಕಟಾವು ಮಾಡಲು ಸಾಧ್ಯವಾಗದೆ ಹೊಲದಲ್ಲಿ ಕೊಳೆಯುತ್ತಿದೆ.
ತಿಂಗಳ ಹಿಂದೆ ಸುರಿದ ಮಳೆಗೆ ತೊಗರಿ ಬೆಳೆ ಹಾಳಾಗಿತ್ತು. ಈಗ ಸುರಿದ ಮಳೆಗೆ ಮತ್ತ? ಹಾಳಾಗಿದೆ. ಬಹುತೇಕ ತೊಗರಿ ಹೂವು ಬಿಡುವ ಸಮಯವಾಗಿದೆ. ಆದರೆ ನಿರಂತರ ಮಳೆಯಿಂದ ತೊಗರಿ ಹೊಲಗಳು ಕೆಸರು ಗದ್ದೆಯಂತೆ ಬಾಸವಾಗುತ್ತಿವೆ. ಬಾಕ್ಸ್; ಇನ್ನು ಸ್ವಲ್ಪ ದಿನ ಕಳೆದರೆ ಬೆಳೆಯಲ್ಲಿನ ಕೀಟಗಳ ಹಾಯಂತ್ರಣಕ್ಕೆ ಔ?ಧಿ ಸಿಂಪಡಿಸಬೇಕು. ಆದರೆ ಹೆಚ್ಚಿನ ತೇವಾಂಶದಿಂದ ಹೊಲಗಳಲ್ಲಿ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಳಲಾಗಿದೆ. ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಅಧಿಕ ಪ್ರಮಾಣದಲ್ಲಿ ಹಾನಿಯಾಗಿದ್ದು, ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸುಭಾ? ಸುಲ್ಫಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಹುನಗುಂದ
ಪ್ರಮುಖ ತೋಟಗಾರಿಕೆ ಬೆಳೆಯಾದ ಈರುಳ್ಳಿ ಸಹ ನಿರಂತರ ಮಳೆಗೆ ನೆಲೆ ಕಚ್ಚಿದೆ. ಕಿತ್ತು ಹಾಕಿದ ಈರುಳ್ಳಿ ಬಿಸಲು ಕಾಣದೆ ಒಣಗುತ್ತಿಲ್ಲ. ಕಟಾವಿಗೆ ಬಂದ ಈರುಳ್ಳಿ ಭೂಮಿಯಲ್ಲಿ ಕೊಳೆಯುತ್ತಿದೆ. ನಿರಂತರ ಮಳೆ ರೈತರಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ. ನಿರಂತರ
ಮೆಣಸಿನಕಾಯಿ ಬೆಳೆಯೂ ಸಹ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡಿಲ್ಲ. ಏಳು ಎಕರೆಯಲ್ಲಿ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಲಾಗಿತ್ತು. ತಿಂಗಳ ಹಿಂದೆ ಸುರಿದ ಮಳೆಗೆ ಎರಡೂವರೆ ಎಕೆರೆ ಬೆಳೆ ಹಾಳಾಗಿದ್ದು, ಈಗ ಮತ್ತೆ ಸುರಿಯುತ್ತಿರುವ ಮಳೆಗೆ ಮತ್ತ? ಬೆಳೆ ಹಾಳಾಗಿದೆ ಮಲ್ಲಪ್ಪ ಹುಬ್ಬಳ್ಳಿ, ಹೊನ್ನರಹಳ್ಳಿ ಗ್ರಾಮದ ೦೩ ಮಳೆಯಿಂದ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿಹಳದಿರೋಗಕ್ಕೆ ತುತ್ತಾಗಿದೆ.
ಮಳೆ ಬಿಡುವು ನೀಡದಿರುವು-ದರಿಂದ ಕೆಲವು ಬೆಳೆಗಳು ಕಟಾವು ಸಾಧ್ಯವಾಗುತ್ತಿಲ್ಲ. ಹೊಲಗಳನ್ನು ಕಸ ಕಡ್ಡಿಯಿಂದ ಸ್ವಚ್ಛಗೊಳಿಸಲು ಸಾಧ್ಯವಾ-ಗುತ್ತಿಲ್ಲ. ಹೀಗಾದರೆ ಹಿಂಗಾರು ಬಿತ್ತನೆ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.


