ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಬೆಂಗಳೂರು 3ನೇ ಸ್ಥಾನ

Ravi Talawar
ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಬೆಂಗಳೂರು 3ನೇ ಸ್ಥಾನ
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್ 3: ಬೆಂಗಳೂರಿನಲ್ಲಿ ಅಪಘಾತಗಳು, ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಜನರ ಸಾವಿನ ಸಂಖ್ಯೆ ಏರುತ್ತಲೇ ಇದೆ. 2023ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ ವರದಿಯ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ರಾಷ್ಟ್ರದಲ್ಲೇ 3 ನೇ ಸ್ಥಾನಕ್ಕೇರಿದೆ. 2023ರಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 4,414 ಸಾವುಗಳು ಸಂಭವಿಸಿದ್ದು, ಮುಂಬೈ ಮತ್ತು ಪುಣೆಯ ಬಳಿಕ ಬೆಂಗಳೂರು ಅತಿಹೆಚ್ಚು ಸಾವಿನ ಸಂಖ್ಯೆ ಹೊಂದಿದ ನಗರವಾಗಿದೆ ಎಂದು NCRB ವರದಿ ಮಾಡಿದೆ.

ಕಳೆದ ವರ್ಷ ಇಡೀ ಭಾರತದಲ್ಲಿ 65,897 ಆಕಸ್ಮಿಕ ಸಾವುಗಳು ಸಂಭವಿಸಿದ್ದು, ಮುಂಬೈನಲ್ಲಿ 8,974 ಪ್ರಕರಣ, ಪುಣೆಯಲ್ಲಿ 5,054 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 4,414 ಆಕಸ್ಮಿಕ ಸಾವು ಸಂಭವಿಸಿದೆ. ಇದರಿಂದಾಗಿ ಸಾವಿನ ಸಂಖ್ಯೆಯಲ್ಲಿ ಮುಂಬೈ ಮತ್ತು ಪುಣೆಯ ನಂತರ ಬೆಂಗಳೂರು 3ನೇ ಸ್ಥಾನದಲ್ಲಿದೆ. ಈ ಎಲ್ಲಾ ಸಾವುಗಳು ರಸ್ತೆ ಅಪಘಾತ, ವಿದ್ಯುತ್ ಶಾಕ್ ಇನ್ನಿತರ ಕಾರಣಗಳಿಂದ ಸಂಭವಿಸಿವೆಯೆಂದು NCRB ವರದಿ ಮಾಡಿದೆ.

2023ರಲ್ಲಿ ಸುಮಾರು 4,980 ಅಪಘಾತಗಳು ವರದಿಯಾಗಿತ್ತು.ಅದರಲ್ಲಿ 915 ಸಾವುಗಳು ಸಂಭವಿಸಿತ್ತು. ದೆಹಲಿಯಲ್ಲಿ 1,457, ಜೈಪುರದಲ್ಲಿ 1,017 ಸಾವುಗಳು ಸಂಭವಿಸಿದ್ದವು. NCRB ವರದಿಯ ಪ್ರಕಾರ ಬೆಂಗಳೂರು ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೇರಿತ್ತು. ಕೇವಲ ರಸ್ತೆ ಅಪಘಾತದಿಂದಾದ ಸಾವಿನ ಪ್ರಕರಣಗಳೇ 97.3 ಪ್ರತಿಶತದಷ್ಟಿತ್ತು.

WhatsApp Group Join Now
Telegram Group Join Now
Share This Article