ಬೆಂಗಳೂರು, ಅಕ್ಟೋಬರ್ 03: ಕರ್ನಾಟಕದಾದ್ಯಂತ ಮತ್ತೆ ಮಳೆಚುರುಕಾಗಿದೆ. ಬೆಂಗಳೂರಿನಲ್ಲೂ ಗುರುವಾರ ಸಂಜೆ ಮಳೆಯಾಗಿದೆ. ಹಾಗೆಯೇ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್ 9ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿಯಲ್ಲಿ ಮಳೆಯಾಗಲಿದೆ.
ಯಲ್ಲಾಪುರ, ಕಾರವಾರ, ಆಗುಂಬೆ, ಮಂಗಳೂರು, ಕಮ್ಮರಡಿ, ಕೋಟಾ, ಮುಲ್ಕಿ, ಸಿದ್ದಾಪುರ, ಝಲ್ಕಿ, ಅಂಕೋಲಾ, ಬೆಳ್ತಂಗಡಿ, ಧರ್ಮಸ್ಥಳ, ಗೋಕರ್ಣ, ಹೊನ್ನಾವರ, ಕದ್ರಾ, ಕಾರ್ಕಳ, ಕೊಪ್ಪ, ಕುಮಟಾ, ಮಂಗಳೂರು, ಪುತ್ತೂರು, ಎನ್ಆರ್ಪುರ, ಶಕ್ತಿನಗರ, ಶೃಂಗೇರಿ, ತ್ಯಾಗರ್ತಿ, ಉಡುಪಿ, ಉಪ್ಪಿನಂಗಡಿ, ವಿಜಯಪುರ, ಬೆಂಗಳೂರಿನಲ್ಲಿ ಮಳೆಯಾಗಿದೆ.


