ರನ್ನ ಬೆಳಗಲಿ, ಏ.03: ಪಟ್ಟಣದ ವ್ಯಾಪ್ತಿಯಲ್ಲಿ ೨೦೨೪-೨೫ನೇ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಭರಣ ಆರಂಭವಾಗಿದ್ದು, ಏಪ್ರಿಲ್ ಅಂತ್ಯದೊಳಗೆ ಭರಣ/ತೆರಿಗೆ ತುಂಬುವ ಆಸ್ತಿ ತೆರಿಗೆದಾರರಿಗೆ ಶೇ ೫ ರಷ್ಟು ರಿಯಾಯಿತಿ ಘೋಷಿಸಲಾಗಿದೆ ಎಂದು ಪ.ಪಂ ಪ್ರಕಟಣೆ ತಿಳಿಸಿದೆ.
ಮೇ ಹಾಗೂ ಜೂನ್ ಅಂತ್ಯದವರಿಗೆ ರಿಯಾಯಿತಿ ರಹಿತ ಅವಧಿಯಾಗಿದ್ದು, ಜು.೧ರಿಂದ ಆಸ್ತಿ ತೆರಿಗೆ ಪಾವತಿಸುವವರು ಶೇ.೨ ರಷ್ಟನ್ನು ಆಸ್ತಿ ತೆರಿಗೆಯೊಂದಿಗೆ ಭರಣ ಮಾಡಬೇಕಾಗುತ್ತದೆ. ಆದ್ದರಿಂದ ಏ.೩೦ ರೊಳಗೆ ಆಸ್ತಿ ತೆರೆಗೆ ಶೇ.೫ರಷ್ಟು ರಿಯಾಯಿತಿ ಇದೆ.
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು. ಇದರೊಂದಿಗೆ ನೀರಿನ ಕರ ಮತ್ತು ಲೈಸೆನ್ಸ್ ಕರವನ್ನು ಏಪ್ರಿಲ್ ೩೦ರ ಒಳಗಾಗಿ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ನಾಮದೇವ ಲಮಾಣಿ, ಆಡಳಿತಾಧಿಕಾರಿಗಳಾದ ವಿನೋದ ಹತ್ತಳ್ಳಿ ರವರು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸಿದ್ದಾರೆ.