ಖಾನಾಪುರ: ವಿಧಾನ ಪರಿಷತ್ ಸದಸ್ಯ, ಮಲಪ್ರಭಾ ಸಕ್ಕರೆ ಕಾರ್ಖಾನೆಯ ನೂತನ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಅವರು
ಮಹಾನವಮಿಯ ಪ್ರಯುಕ್ತ ಮನೆಯ ಆರಾಧ್ಯದೈವ ಚಿಕ್ಕಹಟ್ಟಿಹೊಳಿಯ ವೀರಭದ್ರ ದೇವರ ಸನ್ನಿಧಿಗೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ, ಮೊನ್ನೆ ನಡೆದ ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪುನಶ್ಚೇತನ ರೈತರ ಪ್ಯಾನಲ್ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಜಿಕನೂರ್, ಹಿರೇ ಹಟ್ಟಿಹೊಳಿ, ಪಾರಿಶ್ವಾಡ್, ಗಾಡಿಕೊಪ್ಪ ಗ್ರಾಮಗಳ ರೈತರು, ಹಿರಿಯರು ಸೇರಿದಂತೆ ಅನೇಕರು ಸನ್ಮಾನಿಸಿದರು.
ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲರ ಸಹಕಾರ ಬೇಕು. ಕಾರ್ಖಾನೆ ಉಳಿಯಬೇಕು, ರೈತರ, ಕಾರ್ಮಿಕರ ಹಿತ ಕಾಪಾಡಬೇಕು. ಈ ಬಗ್ಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
.


