ಇಂಡಿ,ಅ.೦೨ : ಪ್ರತಿಯೊಬ್ಬರೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸರಳತೆಯ ಮೂಲಕ ಆದರ್ಶ ಪ್ರಾಯರಾಗಿದ್ದ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ತತ್ವಾದರ್ಶ ಗಳನ್ನು ಪಾಲಿಸಬೇಕು ಎಂದು ಕಂದಾಯ ಉಪವಿಬಾಘಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಅವರು ಪಟ್ಟಣದ ಆಡಳಿತಸೌಧ ಮತ್ತು ಪುರಸಭೆಯಿಂದ ಮಹಾತ್ಮಾಗಾಂಧಿ ವೃತ್ತದಲ್ಲಿ ನಡೆದ ಗಾಂಧಿಜಿ ಮತ್ತು ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಶಾಸ್ತ್ರೀಜಿ ಅವರ ವ್ಯಕ್ತಿತ್ವ ವಿಚಾರಗಳು, ಇಂದಿಗೂ ಎಂದೆದಿಗೂ ಪ್ರಸ್ತುತ ಯುವ ಸಮೂಹ ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಉಪ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಕ್ಷೇತ್ರಶಿಕ್ಷಣಾಧಿಕಾರಿ ಸಯಿದಾ ಮುಜಾವರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಸಂತೋಷ ಹೊಟಕರ, ಎಸ್.ಜಿ.ನಂದರಗಿ, ಸಂತೋಷ ಹಿರೇಬೇವನೂರ, ಎ.ಡಿ.ಎಲ್.ಆರ್ ಕಾಂಬಳೆ, ಇ.ಓ.ಹೀಗಾರ, ಪ್ರಕಾಶ ಐರೋಡಗಿ, ಎಸ್.ಆರ್.ಮುಜಗೊಂಡ , ಬಿಸಿಎಂ ಅಧಿಕಾರಿ ಗದ್ಯಾಳ, ಅಬಕಾರಿ ನಿರೀಕ್ಷ ರಾಹುಲ್ ನಾಯಕ ಮತ್ತಿತರಿದ್ದರು.
ಗಾಂಧೀಜಿ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಿದ್ರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಹುಚ್ಚಪ್ಪ ಶಿವಶರಣ ಮತ್ತಿತರಿದ್ದರು.


