ಸರ್ಕಾರದ ಯೋಜನೆಗಳು ಬಡವರಿಗೆ ಬೇಗ ಮುಟ್ಟುವಂತೆ ಮಾಡಿ : ಸವದಿ

Pratibha Boi
ಸರ್ಕಾರದ ಯೋಜನೆಗಳು ಬಡವರಿಗೆ ಬೇಗ ಮುಟ್ಟುವಂತೆ ಮಾಡಿ : ಸವದಿ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 4194304;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
WhatsApp Group Join Now
Telegram Group Join Now

ಮಹಾಲಿಂಗಪುರ,ಸೆ.೩೦ : ಸರ್ಕಾರದಿಂದ ಬಂದಿ ವಿವಿದ ಯೋಜನೆಗಳ ಫಲಾನುಭವಿಗಳಿಗೆ ಅವರಿಗೆ ಬಂದ ಸಾಮಗ್ರಿಗಳನ್ನು ಆದಷ್ಟುಬೇಗನೆ ಹಂಚಿಕೆ ಮಾಡಿ ಇಟ್ಟುಕೊಂಡು ಕೂಡಬೇಡಿ ಎಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. ಪುರಸಭೆಯಲ್ಲಿ ೨೦೨೩-೨೪.೨೪-೨೫ ನೇ ಸಾಲೀನ ಸ್ಥಳೀಯ ನಿಧಿ ಶೇ ೨೪.೧೦ ಯೋಜನೆಯಡಿ ಬಂದ ಯಂತ್ರಗಳನ್ನು ಮತ್ತು ೨೪-೨೫ ನೇ ಸಾಲೀನ ಸ್ಥಳೀಯ ನಿಧಿ ೨೪.೧೦ ನಲ್ಲಿ ಸೋಲಾರ ಲೈಟ್‌ಗಳನ್ನು ಆಯ್ದ ಹಿಂದೂಳಿದ ಮತ್ತು ಎಸ್,ಸಿ.ಎಸ್.ಟಿ ಫಲಾನುಭವಿಗಳಿಗೆ ಆದಷ್ಟು ಬೇಗನೇ ನೀಡಿ ಸಹಕರಿಸಿದ, ಮತ್ತು ಎಲ್ಲ ಕುಟುಂಬಗಳಿಗೆ ಸರ್ಕಾರ ಯೋಜನೆಗಳು ಸಿಗುವಂತೆ ಮಾಡಿ ಕೊಟ್ಟವರಿಗೆ ಮತ್ತೆ ಮತ್ತೆ ಕೊಡುವ ಬದಲು ಬೇರೆ ಬೇರೆ ಬಡವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು,ಮತ್ತು ನಗರೋತ್ತಾನ ಯೋಜನೆಯಲ್ಲಿ ಸುಮಾರು ೨-೩ ಕೋಟಿ ರೂಗಳ ಪೌರಕಾರ್ಮಿಕರಿಗೆ,ಎಸ್.ಸಿ.ಎಸ್.ಟಿಗಳಿಗೆ ಸೌಲತ್ತುಗಳ ಬರುತ್ತಿವೆ. ಎಸ್.ಎಫ್.ಸಿ ಯೋಜನೆಯಲ್ಲಿ ೧೦ ರೂ ಮಂಜೂರಿಯಾಗಿದೆ ಆದರೆ ಕೆಲಸ ಮಾತ್ರ ನಿಧಾನಗತಿಯಲ್ಲಿ ನಡೆದಿದೆ.ಯಾರು ಕೆಲಸ ಮಾಡಿಲ್ಲ ಅವುಗಳನ್ನು ರಂದು ಮಾಡಿ ರೀ ಟೆಂಡರ ಕರೆಯಿರಿ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ,
ಈ ಹಿಂದೆ ೫ ನೂರು ಮನೆಗಳನ್ನು ಸಹ ತರಲಾಗಿದೆ, ಅವುಗಳ ವಿತರಣೆ ಕೂಡಾ ತಡವಾಗಿದೆ, ಕಾರಣ ಎಲ್ಲ ಮನೆಗಳನ್ನು ಮನೆ ಇಲ್ಲದಿರುವವರಿಗೆ ಹಂಚಿಕೆ ಮಾಡಿ, ಬಂದ ಸೌಲಭ್ಯಗಳನ್ನು ಬೇಗ ಬೇಗ ನೀಡಿದರೆ ನೆಮ್ಮಯಿಂದ ಜೀವನ ಸಾಗಿಸುತ್ತಾರೆ ಎಂದರು. ಒಟ್ಟು ೬ ಲಕ್ಷ ೧೧ ಸವೀರ ವೆಚ್ಚದಲ್ಲಿ ೭೨ ಹೋಲಿಗೆ ಯಂತ್ರ , ಮತ್ತು ೪ ಲಕ್ಷ ೯೨ ಸಾವೀರ ರೂಗಳಲ್ಲಿ ೪೭ ಸೋಲಾರ ಲೈಟ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಸ್ಥಾಯಿ ಸಮೀತಿ ಚೇರಮನ್ ಅಬ್ದುಲ್ ಬಾಗವಾನ ಮುಖ್ಯಾಧಿಕಾರಿ ನಾಮದೇವ ಲಮಾಣಿ ವೇದಿಕೆ ಮೇಲಿದ್ದರು. ಈ ಸಂದರ್ಭದಲ್ಲಿ ಪುರಸಭೇ ಸದಸ್ಯರಾದ ಶೇಖರ ಅಂಗಡಿ, ಮುಸ್ಥಾಕ ಚಿಕ್ಕೋಡಿ, ಚನಬಸು ಯರಗಟ್ಟಿ, ಪಾಪಾ ನಾಲಬಂದ, ಡಾ ಸವಿತಾ ಕೋಳಿಗುಡ್ಡ, ಆನಂದ ಬಂಡಿ, ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಜಿ.ಎಸ್ ಗೊಂಬಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ, ಶಿವಾನಂದ ಅಂಗಡಿ, ಲಕ್ಷ್ಮಣ ಮಾಂಗ, ಗುರುಪಾದ ಅಂಬಿ, ಅರ್ಜುನ ಮೋಪಗಾರ, ದಾದಾ ಸನದಿ, ಬಸವರಾಜ ಹುಕ್ಕೆರಿ, ಬಸವರಾಜ ಮಡಿವಾಳ, ಭೀಮಶಿ ಗೌಂಡಿ, ವಿಜಯ ಸಬಕಾಳೆ, ಶಿವಬಸು ಗೌಂಡಿ, ಮಲ್ಲಪ್ಪ ದಲಾಲ, ಮಾನಿಂಗ ಕಂಠಿ, ಜಗಧೀಶ ಜಕ್ಕನ್ನವರ, ವಿರೇಶ ಮುಂಡಗನೂರ, ಪುರಸಭೆ ಅಧಿಕಾರಿಗಳಾದ ಪಿ.ವಾಯ್ ಸೊನ್ನದ, ಸಿ.ಎಸ್. ಮಠಪತಿ, ಎಸ್.ಎನ್ ಪಾಟೀಲ, ರಾಮು ಮಾಂಗ, ಲಕ್ಷ್ಮೀ ಪರೀಟ ಇದ್ದರು.

 

WhatsApp Group Join Now
Telegram Group Join Now
Share This Article