ಬಳ್ಳಾರಿ,ಸೆ.30..: ಬೆಂಗಳೂರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ದಿಂದ ರಾಜ್ಯದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಅ.೧ರಿಂದ ಅ.೯ರವರೆಗೆ ಎಂಟು ದಿನಗಳ ಕಾಲ ನಾನು ವಿಜ್ಞಾನಿ ೨೦೨೫ ಶೀರ್ಷಿಕೆ ಅಡಿಯಲ್ಲಿ ಶಾಲೆಗೊಂದು ಟೆಲಿಸ್ಕೋ ತಯಾರಿಸುವ ತರಬೇತಿಯನ್ನು ನುರಿತ ತಜ್ಞರಿಂದ ನೀಡಲಾಗುವುದು. ಇದೊಂದು ಐತಿಹಾಸಿಕ ಘಟನೆ ಯಾಗಲಿದೆ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸದಾವಕಾಶ ಈ ತರಬೇತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹತ್ತಿರ ಇರುವ ಬ್ಯಾ ಸೆಂಟ್ ಉದ್ಯಾನವನದ ಸ್ಕೌಟ್ ಕ್ಯಾಂಪ್ ನಲ್ಲಿ ನೀಡಲಾಗುತ್ತಿದೆ ಬಳ್ಳಾರಿ ಜಿಲ್ಲೆಯಿಂದ ಎಂಟು ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ.
ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಅಧ್ಯಕ್ಷ ಆರ್‌ಎಚ್‌ಎಮ್ ಚನ್ನಬಸವ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಯು ರಮೇಶ್ ಇತರೆ ಪದಾಧಿಕಾರಿಗಳೊಂದಿಗೆ ತೆರಳಿ ವೈಜ್ಞಾನಿಕ ಚಿಂತನೆ ಮಕ್ಕಳಿಗೆ ಭೌತಿಕ ಪ್ರಜ್ಞೆ ಆಕಾಶಕಾಯಗಳ ಪರಿಚಯ ಗ್ರಹಣ ಮುಂತಾದ ಹಲವಾರು ವಿಷಯಗಳ ಮಂಡನೆ ನಾನು ವಿಜ್ಞಾನಿ ಯಾ ಕಾಗಬೇಕು ಸಂಶೋಧನಾ ಸ್ವರೂಪದ ಬಗ್ಗೆ ತಿಳಿಹೇಳಿ ಮಕ್ಕಳ ಮನವೊಲಿಸಿ , ಈ ಕಾರ್ಯಕ್ರಮದ ಯಶಸ್ವಿಗೆ ಆಡಳಿತ ಮಂಡಳಿ , ಪ್ರಾಚಾರ್ಯರು ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಪಾಲಕ ಪೋಷಕರು ಪ್ರೋತ್ಸಾಹಿಸಿದ ಪರಿಣಾಮ ಎಂಟು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಈ ತರಬೇತಿಯು ಇದೇ ಅಕ್ಟೋಬರ್ ಒಂದರಿAದ ನಡೆಯಲಿದೆ ನಾವೆಲ್ಲರೂ ಸೇರಿ ಆ ವಿದ್ಯಾರ್ಥಿಗಳಿಗೆ ಶುಭ ಕೋರೋಣ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬಳ್ಳಾರಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಯು. ರಮೇಶ್ ತಿಳಿಸಿದ್ದಾರೆ.


