ಗದಗ- ಪ್ರಧಾನಿ ನರೇಂದ್ರ ಮೋದಿಜೀ ರವರು ಜನಸಾಮಾನ್ಯರಿಗೆ ಭರ್ಜರಿ ಜಿಎಸ್ಟಿ ಬಂಪರ್ ಘೋಷಣೆ ಮಾಡುವುದರ ಮೂಲಕ ದಸರಾ ಹಾಗು ದೀಪಾವಳಿ ಹಬ್ಬಕ್ಕೆ ದೇಶದ ಜನರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಜಿಎಸ್ಟಿ ಜಿಲ್ಲಾ ಸಂಚಾಲಕರಾದ ಶಶಿಧರ ಎಲ್.ದಿಂಡೂರವರು ಮಾತನಾಡಿ ವಿಶೇಷವಾಗಿ ವಿದ್ಯಾರ್ಥಿಗಳ ನೋಟ್ಬುಕ್, ಪೆನ್ಸಿಲ್ ಹಾಗು ಇನ್ನತರ ದಿನ ಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ಕಡಿತವನ್ನು ಸಂಪೂರ್ಣ ತೆಗೆದುಹಾಕಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಾಯಕಾರಿಯಾಗಿದೆ. ಅದರಂತೆ ದಿನಬಳಕೆ ವಸ್ತುಗಳ ೨೮ರ ಸ್ಲ್ಯಾಬ್ನಲ್ಲಿದ್ದ ಶೇ ೯೦% ಉತ್ಪನ್ನಗಳಿಗೆ ಶೇ ೧೮% ವರೆಗೆ ತೆರಿಗೆಯನ್ನು ಇಳಿಸಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದಾರೆ.
ಇನ್ನು ವೈದ್ಯಕೀಯ ವಿಮೆ ಯನ್ನು ಜೀರೋ ಜಿಎಸ್ಟಿ ವ್ಯಾಪ್ತಿಯೊಳಗೆ ತಂದಿರುವುದರಿಂದ ಮಧ್ಯಮ ವರ್ಗದ ಕುಟುಂಬಕ್ಕೆ ಖಾಸಗಿ ವಿಮೆ ಪಡೆದುಕೊಳ್ಳಲು ಮತ್ತು ಇಡಿ ಕುಟುಂಬವನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗಿದೆ. ಔಷಧಿಗಳ ಮೇಲಿನ ಜಿಎಸ್ಟಿ ಧರಗಳನ್ನು ಶೇ ೧೮ ರಿಂದ ೫% ಗೆ ಕಡಿಮೆಗೊಳಿಸಿದರಿಂದ ಜನಸಾಮಾನ್ಯರು ನಿತ್ಯ ಬಳಸುವ ಔಷಧಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ವೈದ್ಯಕೀಯ ಔಷಧಿಗಳು ಹಾಗು ಉಪಕರಣಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರದಿಂದ ಕೊಡುಗೆ ನೀಡಲಾಗಿದೆ ಎಂದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ರೈತರಿಗೆ ರಸಗೊಬ್ಬರದ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡುವುದರ ಮೂಲಕ ಬಂಪರ್ ಕೊಡುಗೆಯನ್ನು ನೀಡಲಾಗಿದೆ. ಮಧ್ಯಮ ವರ್ಗದ ಜನರಿಗೆ ಕಾರು ಹಾಗು ಬೈಕ್ ಕೊಂಡುಕೊಳ್ಳಲು ೧೦ ಸಾವಿರದಿಂದ ೧.೫೦ ಲಕ್ಷ ದವರೆಗಿನ ಜಿಎಸ್ಟಿ ಕಡಿತದಿಂದ ಜನಸಾಮಾನ್ಯರಿಗೆ ಮೋದಿಜೀರವರು ಬಂಪರ್ ನೀಡುವುದರ ಮೂಲಕ ಜನರ ಜೀವನ ಮಟ್ಟ ಸುಧಾರಿಸಲು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಎಂ.ಎಸ್.ಕರೀಗೌಡ್ರ, ಜಿಎಸ್ಟಿ ಅಭಿಯಾನದ ಪ್ರಮುಖರಾದ ವಸಂತ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಅಧ್ಯಕ್ಷ ಬೂದಪ್ಪ ಹಳ್ಳಿ, ನಗರಸಭಾ ಸದಸ್ಯ ಅನೀಲ ಅಬ್ಬಿಗೇರಿ, ಶಂಕರ ಕಾಕಿ, ರಮೇಶ ಸಜ್ಜಗಾರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.


