ಜಮಖಂಡಿ: ತಾಲೂಕಿನ ಕಲಹಳ್ಳಿಯ ಹಿರಿಯ ಸಾಹಿತಿ ಸತ್ಯಕಾಮರ ಸುಮ್ಮನೆಯಲ್ಲಿ ಅ.೫ ರಂದು ಸನ್ ೨೦೨೪-೨೫ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ವಾರ್ಷಿಕ ಸಾಮಾನ್ಯ ಸಭೆ ಜರುಗಲಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ನಗರದ ರಮಾನಿವಾಸ ಸಭಾಭವನದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ- ಸಂಸ್ಕೃತಿ, ಸಂಪ್ರದಾಯ ಬೆಳೆಸುವುದು ಉಳಿಸುವುದು ಸಮ್ಮೆಳನದ ಉದ್ದೇಶ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ ವಾರ್ಷಿಕ ಸಾಮಾನ್ಯ ಸಭೆ ಕೆಲವರ ಕುಂತತ್ರಗದಿAದ ಆಧಾರರಹಿತ ಮತ್ತು ಸುಳ್ಳು ಮಾಹಿತಿಗಳನ್ನು ನೀಡಿ ರದ್ದಾಗುವುಂತೆ ಮಾಡಿದ ಜಾಣಗೆರೆ ವೆಂಕಟರಾಮಯ್ಯ ಮತ್ತು ಡಾ.ವಸುಂಧರಾ ಭೂಪತಿ ಸದಸ್ಯತ್ವವನ್ನು ವಿಚಾರಣೆ ಕಾಯ್ದಿರಿಸಿ, ಅಮಾನತ್ತಿನಲ್ಲಿ ಇರಿಸಿದ್ದು ಇವರು ಈ ಬಾರಿಯ ಸಭೆಯನ್ನು ತಡೆಗಟ್ಟಲು ಪ್ರಯತ್ನಿಸಿರುವುದರಿಂದ ಕಾರ್ಯಕ್ರಮಕ್ಕೆ ಬಂದರೆ ಬಹಿಷ್ಕಾರ ಹಾಕುವುದಾಗಿ ಹೇಳಿದರು.
ಉಚ್ಚ ನ್ಯಾಯಾಲದ ಆದೇಶದಂತೆ ಕರ್ನಾಟಕದ ಯಾವುದೇ ಭಾಗದಲ್ಲಿ ಕಸಾಪ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲು ಅಧಿಕಾರವಿರುತ್ತದೆ ಹೀಗಾಗಿ ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದೂರುದಾರರು ಬೆದರಿಕೆ ಒಡ್ಡುವ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ದೂರು ಅರ್ಜಿದಾರರಲ್ಲಿ ಓರ್ವ ಆರ್.ಜಿ. ನಾಗರಾಜ್ ಬಾಗಲಕೋಟೆ ಬಳಿಯ ಒಂದು ಅಜ್ಞಾತ ಸ್ಥಳದಲ್ಲಿ ಸರ್ವ ಸದಸ್ಯರ ಸಭೆ ಕರೆದಿದ್ದೇ ತಪ್ಪು ಅ.೫ ರಂದು ಕಲ್ಲಹಳ್ಳಿಯ ಕೊಂಪೆಯಲ್ಲಿ ಸರ್ವ ಸದಸ್ಯರ ಸಭೆ ನಡೆದರೆ ತಾನೆ? ಎಂಬ ಸಂದೇಶವನ್ನು ಖಂಡಿಸುತ್ತೇವೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ಕನ್ನಡದ ಕಂಪು ಹಳ್ಳಿಹಳ್ಳಿಗೂ ತಲುಪಬೇಕು. ಕರ್ನಾಟಕದಲ್ಲಿ ಮೈಸೂರು ಬಿಟ್ಟರೆ ೨ನೇ ಕನ್ನಡಶಾಲೆ ಪ್ರಾರಂಭಗೊAಡಿದ್ದು ಜಮಖಂಡಿ ನಗರದಲ್ಲಿ. ಸಾಹಿತಿ ಸತ್ಯಕಾಮರ ಅಗೌರವ ತೋರಿದ ಆರ್.ಜಿ.ನಾಗರಾಜ ಹೇಳಿಕೆಯನ್ನು ಖಂಡಿಸುವ ಮೂಲಕ ಅವರು ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಅವರ ವಿರುದ್ಧ ರಾಜ್ಯಾದ್ಯಂಥ ಉಗ್ರ ಹೋರಾಟ ಕೈಗೊಳ್ಳಲಾಗುವದು. ಅವರು ಕ್ಷಮೆ ಕೇಳದಿದ್ದಲ್ಲಿ ಅವರು ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದರು.
ಬಾಗಲಕೋಟ ಕಸಾಪ ಜಿಲ್ಲಾದ್ಯಕ್ಷ ಶಿವಾನಂದ ಶೇಲ್ಲಿಕೇರಿ, ವಿಜಯಪೂರ ಜಿಲ್ಲೆ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲಿಕಾರ, ಡಾ.ಸಿ.ಎಂ.ಜೋಶಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ಬಿ.ಎಂ.ಪಟೇಲಪಾAಡು, ಪ್ರಾಥಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನ್ನವರ, ಕಸಾಪ ಪದಾಧಿಕಾರಿಗಳಾದ ಜಿ.ಕೆ.ತಳವಾರ, ಶ್ರೀನಿವಾಸ ಅಪರಂಜಿ ಇದ್ದರು.


