ಕಾಗವಾಡ:ಅಥಣಿ ವಲಯದ ಸರ್ಕಾರಕ್ಕೆ ಮುಟ್ಟಗೋಲು ಹಾಕಿಕೊಂಡ ವಿವಿಧ ನಮೂನೆಯ ವಾಹಗಳನ್ನು ಟೆಂಡರ್ ಕಂ ಬಹಿರಂಗ ಹರಾಜು ಮೂಲಕ ವಿಲೇವಾರಿಯನ್ನು ಅಥಣಿ ಅಬಕಾರಿ ಕಛೇರಿಯಲ್ಲಿ ಮಂಗಳವಾರ ದಿ.30-09-2025 ನಡೆಯಲಿದೆ ಎಂದು ಅಬಕಾರಿ ಇಲಾಖೆ ಇನ್ಸಪೆಕ್ಟರ್ ಮಹಾಂತೇಶ ಬಂಡಗರ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಅಬಕಾರಿ ಪ್ರಕರಣಗಳಲ್ಲಿ ಸರ್ಕಾರ ಮುಟ್ಟಗೋಲು ಹಾಕಿಕೊಂಡ ವಾಹನಗಳನ್ನು ಷರತ್ತಿಗೊಳಪಟ್ಟು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅಬಕಾರಿ ನಿರೀಕ್ಷಕರ ಕಛೇರಿಯಲ್ಲಿ ಟೆಂಟರ್ ವ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವದು.ಇಚ್ಚೆಯುಳ್ಳ ಸವಾಲುದಾರರು ಷರತ್ತಿಗೊಳಪಟ್ಟು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೆಕೆಂದು ಹೇಳಿದ್ದಾರೆ.


