ಗೆಳತಿ ಅತ್ಯಾಚಾರ ಆರೋಪ; ಮನನೊಂದ ಟೆಕ್ಕಿ ಸೂಸೈಡ್‌

Ravi Talawar
ಗೆಳತಿ ಅತ್ಯಾಚಾರ ಆರೋಪ; ಮನನೊಂದ ಟೆಕ್ಕಿ ಸೂಸೈಡ್‌
WhatsApp Group Join Now
Telegram Group Join Now

ಬಿಲಾಸ್​ಪುರ್, ಸೆಪ್ಟೆಂಬರ್ 30: ಗೆಳತಿ ಅತ್ಯಾಚಾರ ಆರೋಪ ಮಾಡಿದ್ದಕ್ಕಾಗಿ ಮನನೊಂದು ಟೆಕ್ಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. 29 ವರ್ಷದ ಎಂಜಿನಿಯರ್ ಗೆಳತಿಯೇ ತನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಕ್ಕೆ ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಪ್ರೀತಿ ಹೆಸರಿನಲ್ಲಿ ದ್ರೋಹ ಬಗೆದಿದ್ದಾರೆ ಎಂದು ಆತ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ.

ಪ್ರಕರಣದ ನಂತರ, ಗೌರವ್ ಅವರನ್ನು ಬಂಧಿಸಲಾಗಿತ್ತು ಮತ್ತು ಜೈಲಿನಲ್ಲಿ ಕೆಲವು ಸಮಯ ಕಳೆದಿದ್ದರು ಮತ್ತು ಅವರ ಸಾವಿಗೆ ಸುಮಾರು 15 ದಿನಗಳ ಮೊದಲು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಮನೆಗೆ ಹಿಂದಿರುಗಿದ ನಂತರ, ಗೌರವ್ ಯಾವಾಗಲೂ ದುಃಖದಲ್ಲೇ ಇರುತ್ತಿದ್ದರು, ಖಿನ್ನತೆ ಆವರಿಸಿತ್ತು, ಎಲ್ಲರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ಯಾವಾಗಲೂ ಅಸಮಾಧಾನದಲ್ಲೇ ಇರುತ್ತಿದ್ದರು.

WhatsApp Group Join Now
Telegram Group Join Now
Share This Article