ರಮೇಶ ಕತ್ತಿ ಕುಟುಂಬ, ಎ.ಬಿ.ಪಾಟೀಲ ಸ್ವಾಭಿಮಾನ ಪೆನಲಗೆ ಭಂಪರ ಕೊಡುಗೆ ನೀಡಿದ ಹುಕ್ಕೇರಿ ಜನತೆ

Ravi Talawar
ರಮೇಶ ಕತ್ತಿ ಕುಟುಂಬ, ಎ.ಬಿ.ಪಾಟೀಲ ಸ್ವಾಭಿಮಾನ ಪೆನಲಗೆ ಭಂಪರ ಕೊಡುಗೆ ನೀಡಿದ ಹುಕ್ಕೇರಿ ಜನತೆ
WhatsApp Group Join Now
Telegram Group Join Now

ಘಟಪ್ರಭಾ : ತೀವ್ರ ಕುತೂಹಲ ಕೆರಳಿಸಿದ್ದ ಮತ್ತು ಎಮ್ ಪಿ, ಎಮ್ ಎಲ್ ಎ ಚುನಾವಣೆಗಿಂತ ಹೆಚ್ಚಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮತ್ತು ರಾಜ್ಯದ ಗಮನ ಸೆಳೆದ ಪ್ರತಿಷ್ಠಿತ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ ಕತ್ತಿ, ಎ ಬಿ ಪಾಟೀಲರ ಸ್ವಾಭಿಮಾನ ಪೆನಾಲ್ ಭರ್ಜರಿಯಾಗಿ ಜಯಗಳಿಸುವ ಮುಖಾಂತರ ಹುಕ್ಕೇರಿ ತಾಲೂಕಿನ ಮತದಾರರು ಸ್ವಾಭಿಮಾನದ ಬಹು ದೊಡ್ಡ ಭಂಪರ ಕೊಡುಗೆ ನೀಡುವ ಮೂಲಕ ರಮೇಶ ಕತ್ತಿ ಕುಟುಂಬ ಮತ್ತು ಎ ಬಿ ಪಾಟೀಲ ಕುಟುಂಬಕ್ಕೆ ಜೈ ಹೊ ಎಂದಿದ್ದಾರೆ. ಈ ಮೂಲಕ ಕತ್ತಿ ಕುಟುಂಬದ ಶಕ್ತಿ ಏನು ಎಂಬುವದನ್ನು ಹುಕ್ಕೇರಿ ತಾಲೂಕಿನ ಜನತೆ ತೋರಿಸಿ ಕೊಟ್ಟಿದ್ದಾರೆ.

ಈ ಚುನಾವಣೆಗೆ ಬೆಳಗಾವಿ ಜಿಲ್ಲೆಯ ಪ್ರಭಲ ಜಾರಕಿಹೊಳಿ ಮತ್ತು ಜೊಲ್ಲೆ ಕುಟುಂಬ ವರ್ಸಸ್ ರಮೇಶ ಕತ್ತಿ ಮತ್ತು ಎ ಬಿ ಪಾಟೀಲ ಕುಟುಂಬ ಆಗಿತ್ತು. ಈ ಚುನಾವಣೆಯು ಜಾರಕಿಹೊಳಿ ಕುಟುಂಬ ಮತ್ತು ರಮೇಶ ಕತ್ತಿ ಕುಟುಂಬಗಳ ನೇರ ನೇರ ಯುದ್ಧ ಭೂಮಿಯಾಗಿ ಮಾರ್ಪಟ್ಟಿತ್ತು. ಅವರವರ ನೇರ ವಾಗ್ದಾಳಿ ಅತ್ಯಂತ ವೈಯಕ್ತಿಕ ಟಿಕೆಗಳು, ಸವಾಲಿಗೆ ಸವಾಲು, ಜವಾಬಗೆ ಜವಾಬು, ಸೇಡು, ಮೀಸೆ ತಿರುವದು, ಹುಕ್ಕೇರಿ ಕ್ಷೇತ್ರಕ್ಕೆ ಕೋಟಿ ಅನುಧಾನ ಬಿಡುಗಡೆ, ಹೀಗೆ ಹಲವರು ರೋಚಕ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಯಿತು.

ಅತ್ಯಂತ ಶಾಂತಿಯಿಂದ ಜರುಗಿದ ಈ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಜೊತೆ ಕತ್ತಿ ಕುಟುಂಬದ ಶಕ್ತಿ ಮತ್ತು ಜಿಲ್ಲೆಯಲ್ಲಿ ಬಿಗಿಹಿಡಿತ ಇದೆ ಎಂಬುದನ್ನು ಹುಕ್ಕೇರಿ ತಾಲೂಕಾ ಮತದಾರರು ತೋರಿಸಿದ್ದಾರೆ. ರಮೇಶ ಕತ್ತಿ ಅವರು ಭಾಷಣದಲ್ಲಿ ಪದೇ ಪದೇ ಹೇಳುತ್ತಿದ್ದ ಹುಕ್ಕೇರಿ ಜನತೆ ಸ್ವಾಭಿಮಾನಿಗಳು ಮತ್ತು ಪ್ರಜ್ಞಾವಂತರು ಎಂಬ ಹೇಳಿಕೆಯನ್ನು ಸಾಭಿತುಪಡಿಸಿದ್ದಾರೆ. ಈ ಚುನಾವಣೆ ಡಿ ಸಿ ಸಿ ಬ್ಯಾಂಕ ಚುನಾವಣೆಗೆ ದಿಕ್ಸುಚಿ ಆಗಲಿದೆ ಎಂಬ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಗೆಲುವು ಸಾಧಿಸಿದ ಸ್ವಾಭಿಮಾನಿ ಪ್ಯಾನೆಲ್: ಲವ ರಮೇಶ್ ಕತ್ತಿ, ಕಲಗೌಡ ಬಸಗೌಡ ಪಾಟೀಲ್, ವಿನಯ್ ಅಡ್ಡಯ್ಯಗೌಡ ಪಾಟೀಲ್, ಶಿವನಗೌಡ ಸತ್ಯಪ್ಪ ಮದುವಾಲ್, ವಸಂತ ಮಹಾವೀರ್ ನೀಲಜಗಿ, ಶಿವಾನಂದ ಶಿವಪುತ್ರ ಮೂಡಿಸಿ, ಲಕ್ಷ್ಮಣ್ ಬಸವರಾಜ್ ಮುನ್ನೊಳ್ಳಿ, ಕೆಂಪಣ್ಣಾ ಸಾತಪ್ಪ ವಾಸೇದಾರ್, ಮಹಾದೇವ ಬಾಬು ಕ್ಷೀರಸಾಗರ ಸಾಮಾನ್ಯ ವರ್ಗದಲ್ಲಿ ಜಯ ಗಳಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಹಜಲಾಬಿ ಗೌಸಾಜಂ ನಾಯಿಕವಾಡಿ, ಮಂಗಲ ಗುರುಸಿದ್ದಪ್ಪ ಮೂಡಲಗಿ, ಹಿಂದುಳಿದ ವರ್ಗ ಬ ಕ್ಷೇತ್ರದಲ್ಲಿ ಸತ್ಯಪ್ಪ ಬರಮಣ್ಣ ನಾಯಿಕ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಶ್ರೀಮಂತ ಗಂಗಪ್ಪ ಸನ್ನಾಯಿಕ , ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಬಸವಣ್ಣಿ ಸಣ್ಣಪ್ಪ ಲಂಕೆಪ್ಪಗೋಳ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ದೇಶದ ಮೊಟ್ಟ ಮೊದಲ ಮತ್ತು ಕರ್ನಾಟಕದ ಏಕೈಕ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ. ಕಳೆದ 56 ವರ್ಷಗಳಿಂದ ಸಹಕಾರ ತತ್ವದಡಿ ಸಂಘ ಮುನ್ನಡೆಯುತ್ತಿದೆ. ಸಂಘದಲ್ಲಿ ಸುಮಾರು 97,000 ಶೇರುದಾರರಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಈ ಬಾರಿ 60,934 ಮತದಾರರು 15 ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ.

ಗೆದ್ದವರ ವಿವಿರ ಇಂತಿದೆ:

: ಲವ ರಮೇಶ್ ಕತ್ತಿ -7803

ಕಲಗೌಡ ಬಸಗೌಡ ಪಾಟೀಲ -6737

ವಿನಯ ಅಪ್ಪಯ್ಯಾಗೌಡ ಪಾಟೀಲ -5848

ಶಿವನಗೌಡ ಸತ್ತೆಪ್ಪಾ ಮದವಾಲ  -4461

ಮಹಾವೀರ ವಸಂತ ನಿಲಜಗಿ -4506

ಶಿವಾನಂದ ಮುಡಸಿ 4642

ಲಕ್ಷ್ಮಣ ಬಸವರಾಜ ಮುನ್ನೋಳಿ- 4329

ಕೆಂಪ್ಪಣ್ಣಾ ಸಾತ್ತಪ್ಪ ಮುನ್ನೋಳಿ-3796

ಕ್ಷೀರಸಾಗರ ಮಹಾದೇವ ಬಾಬು-3316

ಮಹಿಳಾ ಮೀಸಲು ಕ್ಷೇತ್ರ

ಮಹಬೂಬಿ. ಗೌಸಾಲಾಜಮ ನಾಯಿಕವಾಡಿ  -6493

ಮಂಗಲ ಗುರುಸಿದ್ದಪ್ಪಾ ಮುಡಲಗಿ – 6098

ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರ ಗಜಾನನ ನಿಂಗಪ್ಪಾ ಕೊಳ್ಳಿ – 12339

ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರ

ದಯಾನಂದ ಮಾರುತಿ ನಾಯಿಕ – 5486

ಪರಿಶಿಷ್ಟ ಜಾತಿ ಮೀಸಲು ಕ್ಷೇತ

ಸನ್ನಾಯಿಕ ಶ್ರೀಮಂತ ಗಂಗಪ್ಪಾ – 7531

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ

ಲಕ್ಕಪ್ಪಗೋಳ ಬಸವಣಿ ಸಣ್ಣಪ್ಪ

3931

ಈ ರೀತಿಯಾಗಿ  ಸ್ವಾಭಿಮಾನಿ ಪೆನಲ್ ಅಭ್ಯರ್ಥಿಗಳು ಮತ ಪಡೆದು  ವಿಜಯ ಸಾಧಿಸಿದ್ದಾರೆ  ಈ ಚುನಾವಣೆಯ ಮೂಲಕ ಹುಕ್ಕೇರಿ ಕ್ಷೇತ್ರದ ಜನತೆ ಒಗ್ಗಟ್ಟಿನ ಮಂತ್ರ ಜಪಿಸಿದು ಕಂಡುಬರುತ್ತದೆ ಈ ಸಂದರ್ಭದಲ್ಲಿ ಶ್ರೀ ರಮೇಶ್ ಕತ್ತಿ ಹಾಗೂ ಎ ಬಿ ಪಾಟೀಲ್ ಜನಪ್ರಿಯ ಶಾಸಕರಾದ ನಿಖಿಲ್ ಕತ್ತಿ ಹಾಗೂ ಸ್ವಾಭಿಮಾನ ಪ್ಯಾನಲ್ ನಿರ್ದೇಶಕರಗಳು ಮತದಾರರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು

 

 

WhatsApp Group Join Now
Telegram Group Join Now
Share This Article