ಬೆಳಗಾವಿ: ರಾಮತೀರ್ಥ ನಗರದ ಶ್ರೀ ವಿರಭದ್ರೇಶ್ವರ್ ದೇವಸ್ಥಾನದಲ್ಲಿ ಸುರೇಶ ಯಾದವ ಪೌಂಡೇಶನ ಹಾಗೂ ರಾಮತೀರ್ಥ ನಗರದ ರಹವಾಸಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ದಸರಾ ಹಬ್ಬದ ದಾಂಡಿಯಾ ಕಾರ್ಯಕ್ರಮದ ಉತ್ಸವದಲ್ಲಿ ನಗರದ ಮಹಿಳೆಯರು, ಮಕ್ಕಳು ದಾಂಡಿಯಾ ನೃತ್ಯ ಮಾಡಿ ಸಂಭ್ರಮಪಟ್ಟರು.
ಸಂಸದ ಜಗದೀಶ್ ಶೆಟ್ಟರ ಅವರು ಮಾತನಾಡಿ, ‘ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿವರ್ಷ ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೃತ್ಯವು ಜೀವನ ಮತ್ತು ಬ್ರಹ್ಮಾಂಡದ ಚಕ್ರವನ್ನು ಪ್ರತಿನಿಧಿಸುತ್ತದೆ ಇದು ಸಮುದಾಯದಲ್ಲಿ ಪ್ರೀತಿ ಮತ್ತು
ಐಕ್ಯತೆಯ ಸಂದೇಶವನ್ನು ಹರುಡುತ್ತದೆ. ಹಿಂದೂ ಸಂಪ್ರದಾಯದ ಈ ಆಚರಣೆಗಳನ್ನು ಆಯೋಜಿಸುತ್ತಿರುವ ಸುರೇಶ ಯಾದವ ಪೌಂಡೇಶನದ ಸಮಾಜ ಕಳಕಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ಹಬ್ಬದ ದಾಂಡಿಯಾ ಕಾರ್ಯಕ್ರಮಕ್ಕೆ ಶಿಬಾ ಶ್ರೀನಿವಾಸ ನಾಗಲ್ಲ ಅವರು ಚಾಲನೆ ನೀಡಿ ಮಾತನಾಡಿ, ದಾಂಡಿಯಾ ನೃತ್ಯವು ಶಾರ್ದಿಯ ನವರಾತ್ರಿಯ ಆಚರಣೆಯಾಗಿದೆ. ಇದು, ದೈಹಿಕ ಮಾನಸಿಕ ಮತ್ತು ಆದ್ಯಾತ್ಮಿಕ ಪ್ರಯೋಜನಗಳನ್ನು ಹೊಂದಿದೆ. ಈ ನೃತ್ಯವು ದೇವಿ ದುರ್ಗೆಯನ್ನು ಆರಾಧಿಸಲು, ಸಾಮಾಜಿಕ ಸಂಬಂಧಗಳನ್ನು ಬಲಪಡಿಸಲು ದೇಹಕ್ಕೆ ಉತ್ತಮ ವ್ಯಾಯಾಮ ನೀಡಲು ಹಾಗೂ ಹೃದಯವನ್ನು ಬಲಪಡಿಸಲು ದೇಹದ ತೂಕವನ್ನು ಕಡಿಮೆ ಮಾಡಲು ದೇಹದ ಸಮ್ಯತೆಯನ್ನು ಹೆಚ್ಚಿಸಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷ ಸುರೇಶ ಯಾದವ ಅವರು ಮಾತನಾಡಿ, ಧಾರ್ಮಿಕ ಮತ್ತು ಆದ್ಯಾತ್ಮಿಕ ದಾಂಡಿಯಾ ರಾಸ್ ಗುಜರಾತ್ ನ ಸಾಂಪ್ರದಾಯಿಕ್ ಜಾನಪದ ನೃತ್ಯವಾಗಿದ್ದು. ಇದು ಕೃಷ್ಣ ಮತ್ತು ರಾಧೇಯ ಲೀಲೆಯನ್ನು ಚಿತ್ರಿಸುತ್ತದೆ. ಇದು ದೇವಿಯ ದುರ್ಗೆಯ ಆರಾಧನೆಯ ಒಂದು ಪ್ರಮುಖ ರೂಪವಾಗಿದೆ ಹಾಗೂ ಭಕ್ತಿ ಮತ್ತು ಸಮರ್ಪಣೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ ಎಂದು ತಿಳಿಸಿದರು.
ಈ ವೇಳೆ ಮುರುಘೆoದ್ರ ಪಾಟೀಲ, ಮುಕ್ತಾರ ಪಠಾಣ, ಸಿ. ಪಿ. ಐ, ಕಾಲಿಮಿರ್ಚಿ, ಪೂರ್ಣಿಮಾ ಯಾದವ, ಅನ್ವರಭಾನು, ವೀರನಗೌಡ ಪಾಟೀಲ್, ಬಾಳಪ್ಪ ಹಂಜಿ, ಶಂಕರ್ ಜನರಾಳೆ, ಸಂತೋಷ ಮೆರೆಕಾರ್, ಸ್ನೇಹಲ ಬೆಳ್ಳಿ, ಪವನ ಗುಣಕಿ, ಎಂ, ಎಸ್ ನಾಯಕ ಹಾಗೂ ರಾಮತೀರ್ಥ ನಗರದ ಗಣೇಶ್ ಮಂಡಳಿಯ ಸದಸ್ಯರು ಮತ್ತು ಎಲ್ಲ ರಹವಾಸಿಗಳು ಭಾಗವಸಿದ್ದರು.


