ಅಕ್ಟೋಬರ್ 1ರಿಂದ ಕೇಂದ್ರ ಲೋಕಸೇವಾ ಆಯೋಗದ ಶತಮಾನೋತ್ಸವ

Ravi Talawar
ಅಕ್ಟೋಬರ್ 1ರಿಂದ ಕೇಂದ್ರ ಲೋಕಸೇವಾ ಆಯೋಗದ ಶತಮಾನೋತ್ಸವ
WhatsApp Group Join Now
Telegram Group Join Now

ನವದೆಹಲಿ, ಸೆಪ್ಟೆಂಬರ್ 29: ಭಾರತದ ಸಾಂವಿಧಾನಿಕ ಪ್ರಾಧಿಕಾರವಾದ ಯೂನಿಯನ್ ಲೋಕಸೇವಾ ಆಯೋಗ 00 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಯುಪಿಎಸ್​ಸಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಈ ಶತಮಾನೋತ್ಸವ ವರ್ಷಾಚರಣೆಯು ಈ ವರ್ಷ ಅಕ್ಟೋಬರ್ 1ರಂದು ಪ್ರಾರಂಭವಾಗಿ ಅಕ್ಟೋಬರ್ 1, 2026ರವರೆಗೆ ನಡೆಯಲಿದೆ. ಈ ಬಗ್ಗೆ ಯುಪಿಎಸ್‌ಸಿ ಅಧ್ಯಕ್ಷ ಅಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯೋಗದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ಪ್ರಾರಂಭದಿಂದಲೂ, ಯುಪಿಎಸ್ಸಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಅರ್ಹತೆಯ ಸಂಕೇತವಾಗಿದೆ. ಸರ್ಕಾರಿ ಸೇವೆಗಳಲ್ಲಿ ಹಿರಿಯ ಮಟ್ಟದ ಹುದ್ದೆಗಳಿಗೆ ಕಠಿಣ ಮತ್ತು ನಿಷ್ಪಕ್ಷಪಾತ ಪ್ರಕ್ರಿಯೆಯ ಮೂಲಕ ಅತ್ಯಂತ ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತಿದೆ” ಎಂದು ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article