ನೇಸರಗಿ. ಜೀವನದಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಶ್ರದ್ದೆ, ಶಿಸ್ತು, ವಿನಯ, ಗೌರವ, ವಿಶ್ವಾಸ, ಸಹನೆ,ಒಳ್ಳೆಯ ಆಹಾರ, ಇನ್ನೂ ಅನೇಕ ವಿಷಯಗಳಲ್ಲಿ ವಿಶ್ವಾಸದಿಂದ ವ್ಯಾಸಂಗ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮವಾಗಿ ನಡೆದು ಸಮಾಜಪರ, ಮನೆ ಕೆಲಸಗಳಲ್ಲಿ ಪಾಲ್ಗೊಂಡು ಮುನ್ನಡೆದರೆ ಮುಂದಿನ ಜೀವನದಲ್ಲಿ ಖಂಡಿತ ವಿದ್ಯಾರ್ಥಿಗಳಾದ ತಾವು ಜೀವನದಲ್ಲಿ ಯಶಸ್ವೀಯಾಗುತ್ತೀರಿ ಎಂದು ಬೆಳಗಾವಿಯ ಎಮ್ ಎಮ್ ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಡಾ. ಶಾಮಲಾಬಾಯಿ ಭೀಮರಾಯಪ್ಪ ದಾಸೋಗ ಹೇಳಿದರು.
ಅವರು ಶನಿವಾರದಂದು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೇಸರಗಿ ಇದರ 2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಮತ್ತು ಎನ್ ಎಸ್ ಎಸ್, ಗೈಡ್ಸ್ ಘಟಕದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ ಹೆಚ್ಚಿನ ಅಂಕ ಪಡೆದರು ಅದರೊಂದಿಗೆ ಸಾಮಾನ್ಯ ಜ್ಞಾನ ಮುಖ್ಯ,ಎಲ್ಲ ವಿಭಾಗಗಳಲ್ಲಿ ಗುರುತಿಸಿಕೊಳ್ಳಿ, ಒಳ್ಳೆಯ ವ್ಯಕ್ತಿತ್ವ, ಹಿತವಾದ, ಮಿತವಾದ ಆಹಾರ, ಮನೆ ಊಟಕ್ಕೆ ಪ್ರಶಸ್ತ್ಯ,ಸಾಂದರ್ಭಿಕ ಹೊಂದಾಣಿಕೆ, ದೇವರ ಮೇಲೆ ನಂಬಿಕೆ ಬಗ್ಗೆ ರಾಮಕೃಷ್ಣ ಪರಮಹಂಸ ಹೇಳಿದ್ದಾರೆ. ಮಾನವೀಯ ಮೌಲ್ಯ ಅರಿಯಿರಿ, ಹಿರಿಯರ ಪ್ರೇರಣೆ ಪಡೆಯಿರಿ, ಅಹಂ ಭಾವನೆ ಬೇಡ, ದ್ವೇಷ ಹೊರಹಾಕಿ, ಅತಿಯಾದ ಮನೋರಂಜನೆ ಬೇಡ,ಪಾಠದ ಜೊತೆ ಆಟದಲ್ಲಿ ಪಾಲ್ಗೊಳ್ಳಿ, ಯಾವುದೇ ಭಾಷೆಯ ಮೇಲೆ ದ್ವೇಷ ಬೇಡ, ಎಲ್ಲ ಭಾಷೆ ಕಲಿಕೆಯಿಂದ ಉತ್ತಮ ಭವಿಷ್ಯ, ಮನೆಯಲ್ಲಿ ತಾಯಿ ಮಾಡಿದ ಚಪಾತಿ ಬಿಟ್ಟು, ನಗು ಮುಖದಿಂದ ಪಿಜ್ಜಾ, ಬರ್ಗರ ಸೇವಿಸುತ್ತಿರಿ .ತಂದೆ, ತಾಯಿ, ಗುರುಗಳಿಗೆ ಗೌರವ ಕೊಡಿ, ಒಳ್ಳೆಯವರ ಮಾರ್ಗದರ್ಶನ, ಅನೇಕ ಮಹಾತ್ಮರ ಆದರ್ಶ ಪಾಲನೆ ಮಾಡಿ ತಮ್ಮ ವಿದ್ಯಾರ್ಥಿ ಜೀವನ ಯಶಸ್ವಿಯಾಗಿ ಮುಗಿಸಿ ಜೀವನದಲ್ಲಿ ಮುಂದೆ ಬನ್ನಿ ಎಂದರು.
ಕಾಲೇಜು ಪ್ರಾಂನ್ಸುಪಾಲರಾದ ಡಾ. ಫಕ್ಕಿರಗೌಡ ದುಂ. ಗದ್ದಿಗೌಡರ ಮಾತನಾಡಿ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಶಿಕ್ಷಣ ಪ್ರೇಮದಿಂದ ನಮ್ಮ ಕಾಲೇಜಿಗೆ ಅನೇಕ ಕೆಲಸ ಕಾರ್ಯಗಳು ಆಗುತ್ತಿದ್ದು,ಕಾಲೇಜಿನ 2 ಹೈಟೆಕ್ ಕ್ಲಾಸ ರೂಮ್ , ಸಮಾರಂಭ ನಡೆಸಲು ಡಿಜಿಟಲ್ ಸಭಾ ಭವನ ನಿರ್ಮಿಸಲು ಶಾಸಕರು 1 ಕೋಟಿ 60 ಲಕ್ಷ ರೂಪಾಯಿಗಳ ಅನುಧಾನ ಒದಗಿಸಿದ್ದು ಇನ್ನೇನು ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಕಾಲೇಜು ಸುಧಾರಣಾ ಸಮಿತಿ ಸದಸ್ಯರ ಸಹಕಾರ, ಸಹಾಯ ಬಹಳ ಇದ್ದು ಅದಕ್ಕೆ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಮ್ಮ ಕರೆಗೆ ಓಗೊಟ್ಟು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ನೀತಿ, ತತ್ವ ಪಾಠ ಅರ್ಥಗರ್ಭಿತವಾಗಿ ತಿಳಿಹೇಲಿರುವ ಹಿರಿಯರಾದ ಡಾ. ಶಾಮಲಾಭಾಯಿ ದಾಸೋಗ ಅವರು ಹೇಳಿದ್ದು, ಅವರು ಹೇಳಿದ ಆದರ್ಶಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣಾ ಸಮಿತಿ ಸದಸ್ಯರಾದ ನಜೀರ್ ಅಹಮ್ಮದ ತಹಶೀಲ್ದಾರ, ಚನಗೌಡ ಪಾಟೀಲ, ಹಾಗೂ ಭೋಧಕ, ಭೋಧಕೇತ್ತರ ಸಿಬ್ಬಂದಿ, ವಿದ್ಯಾರ್ಥ ಮುಖಂಡರು, ವಿದ್ಯಾರ್ಥಿಗಳು, ವಿದ್ಯಾರ್ಥಿನೀಯರು ಭಾಗವಹಿಸಿದ್ದರು. ಪರಿಚಯ ಭಾಷಣವನ್ನು ಪ್ರೋ. ಶೋಭಾ ಸಿದ್ನಾಳ, ಪ್ರಸ್ತವಿಕ ಭಾಷಣವನ್ನು ಪ್ರೋ. ಸುರೇಖಾ ಶೆಟ್ಟಿ, ಕಾರ್ಯಕ್ರಮದ ನಿರೂಪಣೆಯನ್ನು ಪ್ರೋ. ಎಸ್ ಬಿ ಚವತ್ರಿಮಠ ನೆರವೇರಿಸಿದರು.ಸ್ವಾಗತವನ್ನು ಪ್ರೋ. ವಿನಾಯಕ ಹೊನ್ನಪ್ಪನವರ, ವಂದನೆಯನ್ನು ಪ್ರೋ. ಹರೀಶ ಎಚ್ ಆರ್ ನೆರವೇರಿಸಿದರು.


