ಭೀಮೆ ಅಬ್ಬರಕ್ಕೆ ನಲುಗಿದ ಕಲಬುರಗಿ, ಯಾದಗಿರಿ

Ravi Talawar
ಭೀಮೆ ಅಬ್ಬರಕ್ಕೆ ನಲುಗಿದ ಕಲಬುರಗಿ, ಯಾದಗಿರಿ
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್​ 29: ಭಾರಿ ಮಳೆ ಹಿನ್ನಲೆ ಉಜನಿ ಮತ್ತು ಸಿನಾ ಡ್ಯಾಂಗಳು ಸೇರಿ ಮಹಾರಾಷ್ಟ್ರ ಭಾಗದಿಂದ ಭೀಮಾ ನದಿಗೆ ಭಾರಿ ನೀರು ಹರಿಬಿಟ್ಟಿರುವ ಕಾರಣ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಕರ್ನಾಟಕದ ಕಲಬುರಗಿ, ಬೀದರ್​ ಮತ್ತು ಯಾದಗಿರಿಯ ಬಹುತೇಕ ಪ್ರದೇಶಗಳಲ್ಲಿ ಜನರ ಬದುಕು ಬೀದಿಗೆ ಬಂದಿದ್ದು, ಹಳ್ಳಿಗೆ ಹಳ್ಳಿಯೇ ದ್ವೀಪವಾಗಿ ಮಾರ್ಪಟ್ಟಿವೆ. ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಪ್ರವಾಹದಿಂದಾಗಿ ತೊಂದರೆ ಉಂಟಾಗಿದ್ದು, ಗಂಜಿ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ.

WhatsApp Group Join Now
Telegram Group Join Now
Share This Article