ಕಾಗವಾಡ ಪಟ್ಟಣದಲ್ಲಿ ಯಮನಂತಹವಾದ ರಸ್ತೆ ಗುಂಡಿಗಳು

Pratibha Boi
ಕಾಗವಾಡ ಪಟ್ಟಣದಲ್ಲಿ ಯಮನಂತಹವಾದ ರಸ್ತೆ ಗುಂಡಿಗಳು
WhatsApp Group Join Now
Telegram Group Join Now
ಕಾಗವಾಡ: ಶುಕ್ರವಾರ ಸಂಜೆಯಿಂದ ಕಾಗವಾಡ ಪಟ್ಟಣ ಸೇರಿದಂತೆ  ತಾಲೂಕಾದಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ಇದರಿಂದ ಜನರು ಕೆಲಸಕ್ಕೆ ,ಮಕ್ಕಳು ಶಾಲೆಗೆ, ವ್ಯಾಪ್ತರಸ್ತರಿಗೆ ಮಾರುಕಟ್ಟೆಗೆ ಹೋಗಲು ತೊಂದರೆ  ಉಂಟಾಗಿದೆ. ಈ ಎಲ್ಲಾ ಆತುರತೆಯಲ್ಲಿ ಬೈಕ ಸವರಾರು ಎಷ್ಟೆ ನಿಧಾನದಿಂದ ಬೈಕ ಚಲಾವಣೆ ಮಾಡಿದ್ದರು  ಬೀಳುವುದು ಮಾತ್ರ ತಪ್ಪಿದ್ದಲ್ಲಾ.
ಕಳೆದ ತಿಂಗಳು  ಕರವೇ  ಮನವಿಗೆ ತಾಲೂಡಾಳಿತ ರಸ್ತೆಗಳ ಗುಂಡಿಗಳನ್ನ ತಾತ್ಕಾಲಿಕವಾಗಿ ಮುಚ್ಚಿ   ಜಾರಿಕೊಂಡಿದ್ದರು. ಇದೀಗ ಮತ್ತೆ ದೊಡ್ಡ ದೊಡ್ಡ ಜೀವ ಕಿತ್ತುಕೊಳ್ಳುವ ಗುಂಡಿ  ಇದೀಗ ನಿರ್ಮಾಣವಾಗಿದ್ದಾವೆ. ಇಂದು ಮುಂಜಾನೆ ಬೈಕ ಸವಾರರೊಬ್ಬರು ತಮ್ಮ  ಮಾರ್ಕೇಟ್ನಲ್ಲಿ ಹೋಗುವ  ನೀರು ನಿಂತ ಗುಂಡಿಯ ಆಳ ಗೊತ್ತಿಲ್ಲದೇ  ಬೈಕ್ ಚಲಾಯಿಸಿ ಕೆಳಗೆ ಬಿದ್ದಿದ್ದಾರೆ. ಇನ್ನಾದರೂ ಈ ಸಮಸ್ಯೆ ಯನ್ನು ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಿ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
WhatsApp Group Join Now
Telegram Group Join Now
Share This Article