ಶ್ರೀ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವ ದೇಶಕ್ಕೇ ಮಾದರಿ : ಎಂ.ಬಿ.ಪಾಟೀಲ್

Pratibha Boi
ಶ್ರೀ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವ ದೇಶಕ್ಕೇ ಮಾದರಿ : ಎಂ.ಬಿ.ಪಾಟೀಲ್
WhatsApp Group Join Now
Telegram Group Join Now

ಯರಗಟ್ಟಿ: ಸಮೀಪದ ಶಿರಸಂಗಿ ಗ್ರಾಮದ ಶಿರಸಂಗಿ ಲಿಂಗರಾಜರ ದೇಸಾಯಿ ವಾಡೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಶಿರಸಂಗಿ ತ್ಯಾಗವೀರ ಲಿಂಗರಾಜ ದೇಸಾಯಿ ಅವರ ವಾಡೆ ಸಂರಕ್ಷಿಸಿ, ಅಭಿವೃದ್ಧಿಪಡಿಸಿ, ವಿಶೇ? ಸ್ಮಾರಕವಾಗಿಸುವ ಗುರಿ

ಕರ್ನಾಟಕವನ್ನು ಶೈಕ್ಷಣಿಕವಾಗಿ ಬೆಳಗಿದ ಮಹನೀಯರ ಪೈಕಿ ಪರಮಪೂಜ್ಯ ಸಿರಸಂಗಿ ಲಿಂಗರಾಜ ದೇಸಾಯಿಯವರು ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ನಮ್ಮ ಪೂರ್ವಜರಾದ ಶ್ರೀ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವ ದೇಶಕ್ಕೇ ಮಾದರಿಯಾಗಿದೆ.

ಲಿಂಗರಾಜ ದೇಸಾಯಿ ಅವರು ಲಿಂಗಾಯತ – ವೀರಶೈವ ಸಮಾಜದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಸ್ಥಾಪನೆಗೆ ನೇತೃತ್ವವಹಿಸಿ, ಅಪಾರ ಮೊತ್ತದ ದೇಣಿಗೆ ನೀಡಿದರು. ರಾಜ್ಯದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳ ಹುಟ್ಟಿಗೂ ಅವರು ಕಾರಣಕರ್ತರು.

ತಮ್ಮ ಸಂಸ್ಥಾನದ ಅಪಾರ ಪ್ರಮಾಣದ ಆಸ್ತಿಯನ್ನು ಸಮಾಜ ಸೇವೆಗೆ ಧಾರೆ ಎರೆದು ತ್ಯಾಗವೀರ ಎನಿಸಿಕೊಂಡಿದ್ದು ಇತಿಹಾಸವಾಗಿದೆ.

ಈ ದಿನ ಬೆಳಗಾವಿ ಜಿಲ್ಲೆಯಲ್ಲಿನ ಸಿರಸಂಗಿ ವಾಡೆಗೆ ತೆರಳಿ, ಅವರ ಭಾವಚಿತ್ರಕ್ಕೆ ಪು?ನಮನ ಸಲ್ಲಿಸಿದೆ. ಅವರ ಕಾಲದ ಐತಿಹಾಸಿಕ ಮಹತ್ವದ ಭಾವಚಿತ್ರಗಳನ್ನು, ಪೂಜ್ಯ ಸಿರಸಂಗಿ ಲಿಂಗರಾಜ ದೇಸಾಯಿ ಅವರಿಂದ ನಿರ್ಮಿತವಾಗಿರುವ ಕೋಟೆ ಕೊತ್ತಲಗಳನ್ನು, ಧರ್ಮ ಛತ್ರಗಳನ್ನು ವೀಕ್ಷಿಸಿದೆ.

ರಾಜ್ಯದ ಭವ್ಯ ಇತಿಹಾಸದ ಅವಿಭಾಜ್ಯ ಭಾಗವಾಗಿರುವ ಲಿಂಗರಾಜ ದೇಸಾಯಿ ಅವರ ವಾಡೆಯನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ, ವಿಶೇ? ಸ್ಮಾರಕವನ್ನಾಗಿ ರೂಪಿಸಿ, ಮುಂದಿನ ಪೀಳಿಗೆಗೂ ಅವರ ಮಾದರಿ ಕಾರ್ಯಗಳನ್ನು ಪರಿಚಯಿಸುವುದು ನಮ್ಮ ಘನ ಉದ್ದೇಶ. ಈ ಸಂಬಂಧ ಅಲ್ಲಿನ ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದೇನೆ. ಜೊತೆಗೆ ಪುರಾತತ್ವ ಶಾಸ್ತ್ರಜ್ಞರ ಮಾರ್ಗದರ್ಶನವನ್ನೂ ಪಡೆದುಕೊಳ್ಳಲಾಗುವುದು.

ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಸಿರಸಂಗಿ ವಾಡೆ ರಾಜ್ಯದ ಐತಿಹಾಸಿಕ ಹೆಮ್ಮೆ ಹಾಗೂ ಸಾಂಸ್ಕೃತಿಕ ಆಸ್ತಿಯಾಗಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಹೋನಕೇರಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗನ್ನವರ, ಅಶ್ವಥ್ ವೈದ್ಯ, ಸುರೇಶ ಬಡಗಿಗೌಡರ, ಮಹಾರಾಜ ಕಣವಿ, ಮಲ್ಲು ಜಕಾತಿ, ಬಿ. ಎಸ್. ಪಾಟೀಲ, ಚಂದ್ರರಡ್ಡಿ ಲಿಂಗರಡ್ಡಿ, ಶಿವಪ್ಪ ಮಾಸ್ತಿ, ಸಿದ್ದು ಪಟ್ಟೇದ, ಗದಿಗೆಪ್ಪ ಶಿರಸಂಗಿ, ಗುಡದೆಪ್ಪ ಕುರಡನ್ನವರ ಸೇರಿದಂತೆ ಅನೇಕರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಹೇಳಿಕೆ: ಮಾನ್ಯರು ಸವದತ್ತಿ ಮಾರ್ಗವಾಗಿ ಶಿರಸಂಗಿ ಗ್ರಾಮದ ಶ್ರೀ ಕಾಳಿಕಾ ದೇವಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಬಾಬುಡನಗಿರಿ ಹಾಗೂ ರಾಮಮಂದಿರಕ್ಕೆ ಬೇಟಿ ನೀಡಿದರು. ಟ್ರಸ್ಟ್ ನ ಆಸ್ತಿಗಳ ಕುರಿತು ಮಾಹಿತಿ ಪಡೆದುಕೊಂಡರು. ಅದರ ಪಕ್ಕದಲ್ಲಿರುವ ಹೊಂಡವನ್ನು ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿದರು.
ಲಿಂಗರಾಜ ದೇಸಾಯಿಯವರ ಸ್ಮಾರಕ ಮತ್ತು ವಾಡೆಗಳಿರುವ ಸ್ಥಳಕ್ಕೆ ಬೇಟಿ ನೀಡಿದರು. ವಾಡೆಯನ್ನು ನವೀಕರಿಸುವ ಕುರಿತು ಮಾಹಿತಿ ಪಡೆದುಕೊಂಡರು. ಸದ್ಯಯ ವಾಡೆಯನ್ನು ಸಿಮೆಂಟನಿಂದ ರಿಸ್ಕೋರ್ ಮಾಡುವ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲು ಸೂಚನೆ ನೀಡಿದರು.
ಲಿಂಗರಾಜ ದೇಸಾಯಿಯವರ ವಾಡೆಯನ್ನು ಅದರ ಮೂಲ ಸಂರಚಣೆಗೆ ದಕ್ಕೆಯಾಗದಂತೆ
ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು. ಇದಕ್ಕಾಗಿ ಹೈದರಾಬಾದ ಮೂಲದ ಆರ್ಕಿಟೆಕ್ಕ ರಾದಂತಹ ಅನುರಾಧ ಮೇಡಂ ರವರ ಜೊತೆಗೆ ದೂರವಾಣಿಯ ಮೂಲಕ ಮಾತನಾಡಿದರು. ಅವರು ಅಕ್ಟೋಬರ ೦೭ ಅಥವಾ ಅಕ್ಟೋಬರ ೦೮ ಕ್ಕೆ ಬಂದು ವಾಡೆಯನ್ನು ಪರಿಶೀಲನ ಮಾಡುವುದಾಗಿ ತಿಳಿಸಿದರು. ವಾಡೆಯ ಹಳೆಯ ಫೋಟೋಗಳನ್ನು ಮಾನ್ಯ ಸಚಿವರ ಕಾರ್ಯಾಲಯಕ್ಕೆ ಕಳುಹಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಅಲ್ಲಿಯವರೆಗೆ ಸದ್ಯ ನಡೆಯುತ್ತಿರುವಂತಹ ನವೀಕರಣ ಕಾರ್ಯವನ್ನು ತಕ್ಷಣವೇ ಸ್ಥಗಿತಗೊಳಿಸಲು ತಿಳಿಸಿದರು.
ಲಿಂಗರಾಜ ದೇಸಾಯಿ ಟ್ರಸ್ಟ್ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಎಲ್ಲ ಆಸ್ತಿಗಳ ಸ್ಯಾಟಲೈಟ ಇಮೇಜಗಳ ಮೂಲಕ ಸರ್ವೇ ಮಾಡಿಸಿ ಗಡಿ ಗುರುತು ಮಾಡಲು ಸೂಚನೆ ನೀಡಿದರು.
ವಾಡೆಯ ಹತ್ತಿರದಲ್ಲಿ ಟ್ರಸ್ಟ ಆಸ್ತಿಯಲ್ಲಿ ರೂ ೫೦ ಲಕ್ಷ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಮಾಡಿರುವ ಕಲ್ಯಾಣ ಮಂಟಪದ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಲಿಂಗರಾಜ ದೇಸಾಯಿ ಟ್ರಸ್ಟ್‌ಗೆ ಸಂಬಂಧಿಸಿದ ೩೪ ಗುಂಟೆಯ ಆಸ್ತಿಯಲ್ಲಿ ಬಂಡಿವಡ್ಡರ ಹಾಗೂ ಇತರರು ಮನೆ ನಿರ್ಮಿಸಿಕೊಂಡಿರುವ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ಶಿರಸಂಗಿ ಗ್ರಾಮದ ಸ್ಥಳೀಯರಿಂದ ಅವರ ಸಮಸ್ಯೆ ಹಾಗೂ ಅವಹಾಲುಗಳನ್ನು ಸ್ವೀಕರಿಸಿದರು.
ಸವದತ್ತಿ ಕೋಟೆಯ ಅಭಿವೃದ್ಧಿ ಪಡಿಸುವ ಕುರಿತು ಸ್ಥಳಿಯರು ಮಾನ್ಯ ಸಚಿವರ ಗಮನಕ್ಕೆ ತಂದರು.
ಮಲ್ಲಿಕಾರ್ಜುನ ಹೆಗನ್ನವರ, ತಹಶೀಲ್ದಾರ ಸವದತ್ತಿ

 

WhatsApp Group Join Now
Telegram Group Join Now
Share This Article