ಬೆಳಗಾವಿ.ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದ ಜಿಲ್ಲಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಮಾತನಾಡಿ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಕೋನದ ವಿಸ್ತರಣೆಯಾಗಿದ್ದು ಭಾರತವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಆತ್ಮ ನಿರ್ಭರಗೊಳಿಸುವ ಗುರಿ ಹೊಂದಿದ್ದು ಈ ಅಭಿಯಾನವು ಸಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ದಿನದಿಂದ ಡಿಸೆಂಬರ್ 25 ಭಾರತ ರತ್ನ ಶ್ರದ್ಧೆಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ದಿನದವರೆಗೆ ನಡೆಯಲಿದೆ
ಹರ್ ಘರ್ ಸ್ವದೇಶಿ, ಘರ್ ಘರ್ ಸ್ವದೇಶಿ ಎಂಬ ಮನೋಭಾವದೊಂದಿಗೆ ಆತ್ಮ ನಿರ್ಭರ ಭಾರತ ಸಂಕಲ್ಪ ಸಮ್ಮೇಳನ ಮತ್ತು ಆತ್ಮ ನಿರ್ಭರ ಭಾರತ ಸಂಕಲ್ಪ ರಥಯಾತ್ರೆಯಂತಹ ಹಲವಾರು ಚಟುವಟಿಕೆಗಳನ್ನು ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ ಯೋಜನೆ ರೂಪಿಸಲಾಗಿದೆ ಭಾರತಾದ್ಯಂತ ವೋಕಲ್ ಫಾರ್ ಲೋಕಲ್ ಎಂಬ ಸಂದೇಶ ಹರಡುವುದು ಆ ಮೂಲಕ ರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕ ಗುರುತಿಗೆ ಶಕ್ತಿ ತುಂಬುವುದೇ ಈ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಓ.ಬಿ.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಅವರು ಅಭಿಯಾನದ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಶ್ರೀ ದೇಸಾಯಿ,
ಅಭಿಯಾನದ ಜಿಲ್ಲಾ ಸಂಚಾಲಕರಾದ ಮಹೇಶ ಮೋಹಿತೆ, ಸಹ ಸಂಚಾಲಕರಾದ ಯಲ್ಲೇಶ ಕೋಲಕಾರ ,ವಿಜಯ ಗುಡದರಿ, ಶಾಲಿನಿ ಇಳೆಗೇರ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೋನಾಲಿ ಸರ್ನೋಭತ ಅವರು ವೇದಿಕೆ ಮೇಲಿದ್ದರು ಕಾರ್ಯಾಗಾರದಲ್ಲಿ ಪ್ರಮುಖ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


