ಐರಿಸ್ ಫ್ಲೋರೈಟ್ಸ್ ಶಾಲೆಯಲ್ಲಿ ಬೊಂಬೆ ಹಬ್ಬ ವಿಜಯ ದಶಮಿ ಸಂಭ್ರಮ 

Ravi Talawar
ಐರಿಸ್ ಫ್ಲೋರೈಟ್ಸ್ ಶಾಲೆಯಲ್ಲಿ ಬೊಂಬೆ ಹಬ್ಬ ವಿಜಯ ದಶಮಿ ಸಂಭ್ರಮ 
WhatsApp Group Join Now
Telegram Group Join Now
ಬಳ್ಳಾರಿ. ಸೆ. 26: ಮಕ್ಕಳಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ವಿಜಯದಶಮಿ ದಸರಾ ಹಬ್ಬದ ಪ್ರಯುಕ್ತ ಐರಿಸ್ ಫ್ಲೋರೈಟ್ಸ್ ಶಾಲೆಯಲ್ಲಿ  ಈ ಬೊಂಬೆ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.
 ಈ ಬೊಂಬೆ ಹಬ್ಬದಲ್ಲಿ ಒಂಬತ್ತು ಮಕ್ಕಳಿಗೆ ನವ ದುರ್ಗೆಯರ ವೇಷವನ್ನು ಧರಿಸಿ ಸಂಸ್ಕೃತಿಯನ್ನು ಪರಿಚಯಿಸಲಾಯಿತು ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಲ್ಲಾ ಕಲ್ಯಾಣಿ ತಿಳಿಸಿದರು.
   ಮರಿಸ್ವಾಮಿ ರೆಡ್ಡಿ ಮಾತನಾಡಿ, ಈ ರೀತಿಯಾಗಿ ಮಕ್ಕಳಲ್ಲಿ ಈಗಿನಿಂದಲೇ ಸಂಸ್ಕೃತಿ ಧಾರ್ಮಿಕತೆ ಮಹತ್ವವನ್ನು ತಿಳಿಸುವುದರಿಂದ ಅವರಲ್ಲಿ ಧಾರ್ಮಿಕವಾದ ಮನೋಭಾವನೆಯನ್ನು ಬೆಳೆಸಬಹುದು ಐರಿಸ್ ಶಾಲೆ ಉತ್ತಮವಾದ  ಕಾರ್ಯಕ್ರಮವನ್ನು ಹಮ್ಮಿಕೊಂದಿದೆ ಎಂದು ಶ್ಲಾಘಿಸಿದರು.
 ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಚಲ್ಲಾ ಶಿವಪ್ರಸಾದ್, ಕೊತ್ತಪಲ್ಲಿ ಕಿರಣ್ ಕುಮಾರ್,
ಪ್ರಿನ್ಸಿಪಲ್ ಶೈಲಜಾ,  ಕೊ- ಆರ್ಡಿನೇಟರ್ ಎಪ್ಸಿಪಾ, ಶಿಕ್ಷಕಿಯರಾದ, ದೀಪ, ಶಾಂತ ಜೈನಬ್, ನಗ್ಮಾ, ಮೆಗಾಜೈನ್, ಇಂದು, ತಸ್ಲೀಮ್, ಮುಸ್ಕಾನ್, ತಸ್ಲೀಮಾ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article