ಬೆಂಗಳೂರು, ಸೆಪ್ಟೆಂಬರ್ 27: ಇಂದಿನಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲೂ ಅಕ್ಟೋಬರ್ 1ರಿಂದ ಮಳೆ ಚುರುಕಾಗಲಿದೆ. ದಕ್ಷಿಣ ಒಳನಾಡಿನ ಸಾಕಷ್ಟು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ
ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲೂ ಸಾಧಾರಣ ಮಳೆಯಾಗಲಿದೆ.
ಸಿಂದಗಿ, ಹುಣಸಗಿ, ಕಕ್ಕೇರಿ, ಕೆಂಭಾವಿ, ಚಿಂಚೋಳಿ, ಔರಾದ್, ಭಾಲ್ಕಿ, ದೇವರಹಿಪ್ಪರಗಿ, ಹುಮ್ನಾಬಾದ್, ಇಂಡಿ, ನೆಲೋಗಿ, ಸೈದಾಪುರ, ಭಾಗಮಂಡಲ, ಬೀದರ್, ಗೇರುಸೊಪ್ಪ, ಗುರುಮಿಟ್ಕಲ್, ಕುಣಿಗಲ್, ಲೋಂಡಾ, ಮಾಗಡಿ, ಮಾನ್ವಿ, ನಾಪೋಕ್ಲು, ಪುತ್ತೂರು, ಸೇಡಂ, ಅಫ್ಝಲ್ಪುರ, ಆಗುಂಬೆ, ಅಜ್ಜಂಪುರ, ಬಾದಾಮಿ, ಬಾಳೆಹೊನ್ನೂರು, ಬಂಟವಾಳ, ಬೆಳ್ಳಟ್ಟಿ, ಭದ್ರಾವತಿ, ಗಬ್ಬೂರು, ಹರಪನಹಳ್ಳಿ, ಜಯಪುರ, ಕಲಬುರಗಿ, ಕೊಟ್ಟಿಗೆಹಾರ, ಕುಂದಾಪುರ, ಮುದ್ದೇಬಿಹಾಳ, ಮೈಸೂರು, ನಾರಾಯಣಪುರ, ಶಾಹಪುರ, ಶೃಂಗೇರಿ, ತ್ಯಾಗರ್ತಿ, ಝಲ್ಕಿಯಲ್ಲಿ ಮಳೆಯಾಗಿದೆ.


