ವಿಜಯಪುರ,ಏಪ್ರಿಲ್ 03: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಇಂಡಿ ತಾಲೂಕಿನ ಗೂಗಿಹಾಳ ಕೆರೆಯಿಂದ ಕಡೆಹಳ್ಳಿ ಮಿರಗಿ ಗ್ರಾಮದ ಹೊಳೆಯವರೆಗೆ ನೀರು ಹರಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ಜಗದೇವ ಸೂರ್ಯವಂಶಿ ಮಾತನಾಡಿ, ಮಿರಗಿ, ಗೊಳಸಾರ &ಚಿmಠಿ; ನಾದ ಗ್ರಾಮದ ರೈತರರೆಲ್ಲರೂ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಮ್ಮ ಭಾಗವಲ್ಲಿ ಧನ ಕರಗಳಿಗೂ ಸಹ ಕೂಡಿಯಲು ನೀರಿಲ್ಲದೆ ಧನ ಕರಗಳು ಸಾವನಪ್ಪುತ್ತಿದ್ದು. ರೈತರೆಲ್ಲರೂ ಈಗಾಗಲೇ ಅಲ್ಲಿನ ಅಧಿಕಾರಿಗಳಿಗೆ ಈ ವಿಷಯ ಮನವರಿಕೆ ಮಾಡಿದರು ಮಿರಗಿಯವರೆಗೆ ನೀರು ಹರಿಸಿಲ್ಲ. ಆದ್ದರಿಂದ ನಮ್ಮ ಎಲ್ಲರ ರೈತರ ಭಾಗದಲ್ಲಿ ಕೂಡಿಯಲು ಸಹ ಸುಮಾರು ೩-೪ ಕೀ.ಮಿ ದಿಂದ ತಂದು ನೀರು ಕೂಡಿಯುವ ಪರಸ್ಥಿತಿ ನಮ್ಮದಾಗಿದ್ದು ಇಂತಹ ಸಂದರ್ಭದಲ್ಲಿ ಅಲ್ಲಿನ ಜನಜಾನುವಾರಗಳ ಬದುಕು ಬಹಳ ತೊಂದರೆ ಆಗುತ್ತಿದ್ದು. ಇಲ್ಲಿನ ಜಾನುವಾರುಗಳು ಜೀವನ ಉಳಿಸಲು ಗೂಗಿಹಾಳ ಕೆರೆಯಿಂದ ಮಿರಗಿ ಭೀಮಾನದಿಯ ಹೊಳೆಯವರೆಗೆ ನೀರು ಬರುವ ತನಕ ನೀರು ಹರಿಸಬೇಕಾಗಿ ಎಲ್ಲ ಆ ಭಾಗದ ರೈತರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾರೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಈಗಾಗಲೇ ನೀರು ಬಿಟ್ಟಿದ್ದೇವೆ ಅನ್ನುತ್ತಿದ್ದಾರೆ.
ಆದರೆ ನಾದ ಮತ್ತು ಗೊಳಸಾರ ಜನ ಗೇಟ ಬಂದು ಮಾಡಿ ನೀರು ಮುಂದು ಹೋಗಲು ಬಿಟ್ಟಿರುವದಿಲ್ಲ. ನೀರು ಅವರಿಗೆ ತಲುಪಿಲ್ಲ ಅಂತಾ ಹೇಳುತ್ತಿದ್ದಾರೆ. ಆದ್ದರಿಂದ ಹೊಳೆಯವರೆಗೆ ನೀರು ಮುಟ್ಟುವ ತನಕ ನೀರು ಹರೆಸುವ ಜವಾಬ್ದಾರಿ ಅಲ್ಲಿನ ಅಧಿಕಾರಿಗಳು ವಹಿಸುಕೊಂಡು ದಯಮಾಡಿ ಇಂತಹ ಬೇಸಿಗೆಯಲ್ಲಿ ಜನ ಮತ್ತು ಜಾನುವಾರಗಳ ಜೀವ ಅತ್ಯಮುಲ್ಯವಾದದ್ದು ದಯಮಾಡಿ ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳ ಜೋತೆ ಚರ್ಚಿಸಿ ಈ ಎಲ್ಲ ರೈತರ ಕಷ್ಟ ತೊಂದರೆ ತಪ್ಪಿಸಬೇಕಾಗಿ ತಮ್ಮಲ್ಲಿ
ವಿನಂತಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜುಕುಮಾರ ಕುಂಬಾರ, ಅರವಿಂದ ಕುಲಕರ್ಣಿ, ವಿಠೋಭಾ ಅಂಬಾಲೆ, ಲಿಂಗರಾಜ ಬಿದರಕುಂದಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ವಿರೇಶ ಬಾಗೇವಾಡಿ, ಶಿವಪ್ಪ ಕುಂಬಾರ, ಮಲ್ಲಿಕಾರ್ಜುನ ಮಠಪತಿ, ರಾಘವೇಂದ್ರ ಹಡಪದ, ಪ್ರಭು ಮಂಖನಿ, ಸಿದ್ರಾಮ ಹಳ್ಳೂರ, ರಾಜು ಕಾಂಬಳೆ, ಬಸವರಾಜ ಕಿಸಕಿ, ಶಂಕರ ಯಾದವಾಡ ಮತ್ತಿತರರು ಉಪಸ್ಥಿತರಿದ್ದರು.