ಬೆಳಗಾವಿ: ನಗರದ ಅನಸೂರಕರ ಗಲ್ಲಿಯಲ್ಲಿರುವ ದಿ. ಬೆಳಗಾಂವ ಮರ್ಚಂಟ್ಟ ಕೋ-ಆಪ ಕ್ರೆಡಿಟ ಸೋಸಾಯಟಿಯು ಪ್ರಸಕ್ತ ವರ್ಷದಲ್ಲಿ 16 ಲಕ್ಷ 68 ಸಾವಿರದ 534 ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಸೊಸೈಟಿಯ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶವನ್ನು ನೀಡಲು ಅನುಮೋದಿಸಲಾಗಿದೆ ಎಂದು ಅಧ್ಯಕ್ಷನಾರಾಯಣ ಚೌಗುಲೆ ತಿಳಿಸಿದರು.ಇತ್ತೀಚೆಗೆ ಸೋಸಾಯಟಿಯ 27ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಚೌಗುಲೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ 21 ತಿಂಗಳ ಮುದ್ದತ್ತು ಠೇವಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ.ಈ ಯೋಜನೆಯು ಅಕ್ಟೋಬರ್ 31ರವರೆಗೆ ಇರುತ್ತದೆ.ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಾಖೆಯ ಚೆರಮನ್ ನಾರಾಯಣ ಕಿಟವಾಡಕರ ಸೊಸಾಯಟಿಯ ಹಾಗೂ ಸಾಂಪತ್ತಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡುವಾಗ ಸೊಸಾಯಟಿಯ ಒಟ್ಟು ಬಂಡವಾಳ ರೂ.68.91.600/- ಡಿಪಾಜಿಟ್ ರೂ 34,02,38,907/- ಸಾಲ ವಿತರಣೆ ರೂ 33.48.22.699/-. ಗುಂತಾವಣೆಗಳು do.5.58,68,368/- ರೂ.40,45,69,050/-, ವಾರ್ಷಿಕ ವ್ಯವಹಾರ ರೂ. 92,10,73,074/- ಆಗಿರುತ್ತದೆ ಎಂದು ತಿಳಿಸಿದರು.ಆಂಭದಲ್ಲಿ ಜನರಲ್ ಮ್ಯಾನೇಜರ್ ಲಕ್ಷ್ಮೀಕಾಂತ ಮಕವಾನ ಹಿಂದಿನ ವರ್ಷದ ಸರ್ವಸಾಧಾರಣ ಸಭೆಯ ವರದಿ ಮಂಡಿಸಿದರು. ನಂತರ ಪ್ರಸಕ್ತ ವರ್ಷದಲ್ಲಿ ಅಗಲಿದ ಸೊಸೈಟಿಯ ಸದಸ್ಯರು ಹಾಗೂ ಹಿತಚಿಂತಕರಿಗೆ 2 ನಿಮಿಷಗಳವರೆಗೆ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸರ್ವಸಾಧಾರಣ ಸಭೆಗೆ ಸೊಸಾಯಿಟಿಯ ಕುಮುದ ಭಾಟಿಯಾ, ಶಾಖೆಯ ಚೇರಮನರಾದ ನಾರಾಯಣ ಕಿಟವಾಡಕರ, ಹಿರಿಯ ಸಂಚಾಲಕರಾದ ಆಡ, ಅಶೋಕ ಬೋಳಗುಂಡಿ, ಅಶೋಕ ಯರಕರ, ಶಿವಾಜಿ ಚವ್ಹಾಣ, ನಿತಿನ ಪವಾರ, ಮಿಲಿಂದ ಶಿಂಧೆ, ಪ್ರಣಯ ಶೆಟ್ಟಿ, ಸಂಚಾಲಕಿ, ರೇಖಾ ಅತ್ತೀಮರದ ಸಲಹೆಗಾರರಾದ ಅಜಿತ ಮಾನೆ, ಸಂಜಯ ಓಝಾ, ಅಪರ್ಣಾ ನಿತಿನ ಪವಾರ, ಸಭಾಸದರಾದ ಡಾ. ಶಿವಾಜಿ ಅನಗೋಳಕರ, ಲಕ್ಷ್ಮಣ ಯಳ್ಳೂರಕರ, ದಿಲಿಪ ಜೋಶಿ, ಮಸೂರಜ ಪರೀಟ, ಧನರಾಜ ಜಾಧವ, ಮಹಾಂತೇಶ ದೇಸಾಯಿ, ಪಾಪಾಲಾಲ ಓಝಾ, ಸತೀಶ ಅತ್ತೀಮರದ, ಪ್ರದೀಪ ವೇರ್ಣೆಕರ, ಪರಮಾನಂದ ಅಮಾಶಿ, ಸೊಸಾಯಟಿಯ ಕಾನೂನು ಸಲಹೆಗಾರರಾದ ಮಂಜಯ್ಯಾ ಶೆಟ್ಟಿ, ಆಡ, ಉಮೇಶ ಯರದಾಳ, ಆಡ, ಸೌ. ಶಕುಂತಲಾ ಜಾಧವ, ಅದೇ ರೀತಿ ಹಿಂದಿನ ನಗರ ಸೇವಿಕೆಯಾದ ಕಿಟವಾಡಕರ, ಶ್ರೀಮತಿ ಶಾರದಾ ಮಠವಾನ, ಶೋಭಾ ಶೇಖದಾರ, ಆನೀತಾ ಪಾಟೀಲ, ಸೊಸಾಯಟಿಯ ಸಿಬ್ಬಂದಿ ವರ್ಗ, ಪಿಗ್ಗಿ ಸಂಗ್ರಾಹಕರು, ಸಭಾಸದರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


