ಹುನಗುಂದ; ತಾಲೂಕಿನಲ್ಲಿ ೨೦೨೫ರ ಸಪ್ಟೆಂಬರ್ ೨೨ರಿಂದ ಪ್ರಾರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಡಾಟಾ ತೊಂದರೆಯಿಂದ ಶಿಕ್ಷಕರು ಅನುಭವಿಸುತ್ತಿರುವ ತೀವ್ರ ತೊಂದರೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಗಣತಿ ಶಿಕ್ಷಕರು ಒತ್ತಾಯಿಸಿ ಗ್ರೇಡ್-೨ ತಹಶೀಲ್ದಾರ ಶ್ರವಣ ಮುಂಡೇವಾಡಿ ಅವರಿಗೆ ಮನವಿ ಸಲ್ಲಿಸಿದರು. ಗುರುವಾರ ಮದ್ಯಾಹ್ನ ಗಣತಿದಾರ ಶಿಕ್ಷಕರೆಲ್ಲರೂ ಸಮೀಕ್ಷೆಗೆ ತೊಂದರೆಯಾಗುವ ಸಮಸ್ಯೆಗಳನ್ನು ಚರ್ಚಿಸಿ ತಾಊಕಾ ಆಡಳಿತಕ್ಕೆ ಮನವಿ ಸಲ್ಲಿಸಿ ಗಣತಿ ಶಿಕ್ಷಕ ಎಂ.ಟಿ. ನಡುವಿನಮನಿ ಮಾತನಾಡಿ ಸಮಸ್ತ ತಾಂತ್ರಿಕ ಸಹಾಯಕರು ಶಿಕ್ಷಕರ ಸವಾಲುಗಳನ್ನು ಪರಿಹರಿಸಬೇಕೆಂದು ಅವರು ಒತ್ತಾಯಿಸುತ್ತಾ, ಜಿಯೋ ಟ್ಯಾಗನ್ನು ಅಂಟಿಸಿದ ಮನೆಯ ಸಮೀಕ್ಷೆಯನ್ನು ಲೊಕೇಶನ್ ಮೂಲಕ ಸರ್ಚ್ ಮಾಡಲು ಶಿಕ್ಷಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕಳೆದ ಸಾಲಿನ ಪರಿಶಿ? ಜಾತಿಯ ಸಮಗ್ರ ಸಮೀಕ್ಷೆಯಂತೆ ಶಿಕ್ಷಕರಿಗೆ ನಿಗದಿಪಡಿಸಿದ ಮನೆಗಳ ಸಂಪೂರ್ಣ ವಿಳಾಸವನ್ನು ಗಣತಿದಾರರಿಗೆ ನೀಡಬೇಕು. ಒಬ್ಬ ಗಣತಿ ದಾರರಿಗೆ ಒಂದು ಊರಿನಲ್ಲಿ ಸ್ವಲ್ಪ ಮನೆ ಇನ್ನೊಂದು ಊರಿನಲ್ಲಿ ಇನ್ನ? ಮನೆ ಹೀಗೆ ಎರಡು, ಮೂರು ಮತ್ತು ನಾಲ್ಕು ಊರುಗಳಲ್ಲಿ ಗಣತಿ ಕಾರ್ಯ ಮಾಡಬೇಕಾಗಿದೆ. ಒಂದು ಮನೆಯಿಂದ ಇನ್ನೊಂದು ಮನೆಗೆ ೮ ರಿಂದ ೧೦ ಕಿಲೋ ಮೀಟರ್ ದೂರ ಇರುವುದರಿಂದ ಹೇಗೆ ಗಣತಿ ಕಾರ್ಯ ನಿರ್ವಹಿಸಬೇಕೆಂದು ಗಣತಿದಾರರು ಜಟಿಲಸಮಸ್ಯೆನ್ನು ಅನುಭವಿಸುತ್ತಿದ್ದಾರೆ ಎಂದರು.
ಸಿಕ್ಷಕ ಎಸ್.ಜಿ. ಹುದ್ದಾರ ಮಾತನಾಡಿ ಈಗಾಗಲೇ ೨೦೨೫ನೇ ಸಪ್ಟೆಂಬರ ೨೨ ರಿಂದ ನಮ್ಮ ತಾಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಲಾಗಿದ್ದು ಇಲ್ಲಿಯವರೆಗೂ ಕೂಡ ಸುಲಭವಾಗಿ ಗಣತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಗಣತಿ ಕಾರ್ಯವನ್ನು ಪೂರೈಸಲು ಶಿಕ್ಷಕರು ಇಂದಿನ ವ್ಯವಸ್ಥೆಯಲ್ಲಿ ಹರಸಾಹಸ ಪಡುತ್ತಿದ್ದಾರೆ. ಶಿಕ್ಷಕರು ಯಾವ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೋ ಅದೇ ಗ್ರಾಮಗಳಲ್ಲಿಯೇ ಶಿಕ್ಷಕರನ್ನು ಗಣತಿದಾರರನ್ನಾಗಿ ನಿಯೋಜಿಸಬೇಕೆಂದು ಒತ್ತಾಯಿಸುತ್ತ, ೫೫ ವ?ಕ್ಕಿಂತ ಮೇಲ್ಪಟ್ಟ ಶಿಕ್ಷಕರಿಗೆ, ದೈಹಿಕ ಅಂಗವಿಕಲ, ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರಿಗೆ ಶಿಕ್ಷಕ ದಂಪತಿಗಳಲ್ಲಿ ಒಬ್ಬರಿಗೆ ಮತ್ರ ಗಣತಿ ಕಾಯ ನಿರ್ವಹಿಸಬೇಕೆಂದು ಅವರು ಒತ್ತಾಯಿಸಿದರು. ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಮನವಿ ಓದಿದರು. ಡಿ.ಬಿ. ಕಾಂಬಳೆ, ಬಿ.ಎಚ್. ಕರಡಿ, ಎಸ್.ಎಸ್. ಚಿತ್ತವಾಡಗಿ, ಎಸ್.ಎಚ್. ಮೇಟಿ, ಎಂ.ಎ. ಕೆಸರಭಾವಿ, ಆರ್.ಎ. ಕರ್ಣಿ, ವೀಣಾ ಜಿ, ಎಸ್.ಎಂ. ಇಲಕಲ್ಲ, ಎಸ್.ಎಸ್. ವಾಗ್ಮೋರೆ, ಎಸ್.ಎಂ ಹೂಲಗೇರಿ, ಎಸ್.ಎ. ಲೆಕ್ಕಿಹಾಳ, ಎಂ.ಸಿ ಮ್ಯಾಗೇರಿ, ಬಿ.ಎಸ್. ತೋಟಗೇರ್, ಎಸ್.ಎಸ್. ದರಗಾದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಬಾಕ್ಸ್; ಹಲವಾರು ಸಮಸ್ಯೆಗಳ ರೀತಿಯಲ್ಲಿರುವ ಎಲ್ಲ ಅಂಶಗಳನ್ನು ಪರಿಗಣಿಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಗಣತಿ ಕಾರ್ಯವನ್ನು ಸುಲಲಿತವಾಗಿ ಮಾಡಲು ಅನುಕೂಲ ಮಾಡಿಕೊಡಬೇಕು. ಸಮೀಕ್ಷೆಯ ಮನೆಗಳ ಸರಿಯಾದ ಜೋಡಣೆ ಇಲ್ಲದಿರುವುದು, ಯು ಎಚ್ ಐ ಡಿ ಮೂಲಕ ಮನೆಗಳನ್ನು ಹುಡುಕುವುದರಲ್ಲಿ ತೊಂದರೆ. ಆನ್ಲೈನ್ ನಲ್ಲಿ ಇರುವುದರಿಂದ ನೆಟ್ವರ್ಕ್ ಸಮಸ್ಯೆ., ಗಣಿತಿದಾರರ ಮತ್ತು ಸಮೀಕ್ಷೆ ಮನೆಯ ಮಾಹಿತಿದಾರರ ಓಟಿಪಿ ಸಮಸ್ಯೆ., ಪ್ರತಿಯೊಂದು ಮನೆಯ ಸಮೀಕ್ಷೆಗೆ ೬೦ ಪ್ರಶ್ನೆಗಳನ್ನು ಮ್ಯಾಂಡಿಟರಿ ಮಾಡಿರೋದು, ಸಮೀಕ್ಷೆಯ ಗಣಿತಿದಾರರಿಗೆ ಕಾರ್ಯನಿರ್ವಹಿಸುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಮೀಕ್ಷೆಗೆ ಆಯೋಜನೆ ಮಾಡಿರುವುದು, ಆಧಾರ್ ಓಟಿಪಿ ಸಮಸ್ಯೆ, ಸಮೀಕ್ಷೆಯ ಮನೆಗಳ ವಿಳಾಸ ಪಟ್ಟಿ ನೀಡದೆ ಇರುವುದು, ಸದಸ್ಯರನ್ನ ಸೇರ್ಪಡಿಸುವಲ್ಲಿ ಮತ್ತು ಸದಸ್ಯರನ್ನು ತೆಗೆದು ಹಾಕಲಿಕ್ಕೆ ಆಯ್ಕೆಗಳು ಇಲ್ಲದೆ ಇರೋದು, ಸಮೀಕ್ಷೆಯ ಮನೆಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವುದರಲ್ಲಿ ವಿಳಂಬ., ಹೊಸ ಸೇರ್ಪಡೆ ಆಧಾರ್ ಕಾರ್ಡ್ ಈ ಕೆವಿಸಿ ಸಮಸ್ಯೆ, ಒಂದು ಗಂಟೆಗಳ ಕಾಲ ಮಾಹಿತಿ ತುಂಬಿದ ನಂತರ , ಸಮೀಕ್ಷೆ ಮಾಹಿತಿದಾರರ ದೃಢೀಕರಣ ಅಪ್ಲೋಡ್ ನಾಟ್ ಸಕ್ಸಸ್, ಸುಮಾರು ಐದರಿಂದ ಆರು ತಾಸು ಮೊಬೈಲ್ ಬಳಕೆಯಿಂದ ಕಣ್ಣಿಗೆ ತೊಂದರೆ, ಮಾನಸಿಕ ಹಿಂಸೆ, ಪ್ರತಿ ದಿನ ಂPP ಗಳನ್ನು ಡಿಲೀಟ್ ಮಾಡುವುದು ಮತ್ತೊಂದು ಹೊಸ ಆಪ್ ಬಳಸದೆ ಹೇಳುವುದು., ಹೊಸ ಂPP ಇನ್ಸ್ಟಾಲ್ ಆದ ಮೇಲೆ,ಕ? ಬಿದ್ದು ಮಾಡಿದ ಐದು ಆರು ಮನೆ ಸಮೀಕ್ಷೆಗಳು ಶೂನ್ಯ ತೋರ್ಸುವುದು., ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ದೂರದ ಊರುಗಳಿಂದ ಬೆಳಗ್ಗೆ ಏಳು ಗಂಟೆಗೆ ಬಂದು ಉತ್ಸಾಹದಿಂದ ಸಮೀಕ್ಷೆ ಮಾಡಲು ಹೋದರೆ ತಾಂತ್ರಿಕ ತೊಂದರೆ.. ಕನಿ? ಪಕ್ಷ ಪ್ರತಿದಿನ ೧೦ ರಿಂದ ೧೫ ಮನೆ ಸಮೀಕ್ಷೆಗಳ ಮಾಡುವ ಹಾಗೆ ಚಿಠಿಠಿ ಬಿಟ್ರೆ ಉತ್ತಮ., ಈ ಶೈಕ್ಷಣಿಕ ವ?ದಲ್ಲಿ , ಸೇತುಬಂಧ ಸಾಪಲ್ಯ, ಈಐಓ,ಐಃಂ, Sಂ ೧ ಪರೀಕ್ಷೆ, ಮೌಲ್ಯಮಾಪನ ಮುಗೀತು ಅನ್ನೋ?ಲ್ಲೇ, ಸಮೀಕ್ಷೆಗೆ ಹಾಕಿರುವುದರಿಂದ , ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಇಲ್ಲದೆ ಇರೋದು……*
ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷೆ ಗಣಿತಿ ಕಾರ್ಯದಲ್ಲಿ ಮುಜುಗರಕ್ಕೆ ಉಂಟಾಗುತ್ತಿದ್ದಾರೆ., ದೈಹಿಕ ನ್ಯೂನ್ಯತೆ ಉಳ್ಳ, ಅನಾರೋಗ್ಯ, ಮತ್ತು ವಯಸ್ಸಾದ ಹಿರಿಯ ಶಿಕ್ಷಕರಿಗೆ ತೊಂದರೆ., ಕೆಲವ? ಶಿಕ್ಷಕರಿಗೆ ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ತಾಂತ್ರಿಕ ಜ್ಞಾನ ಇಲ್ಲದೇ ಇರುವುದು.., ಮನೆಗಳ ಹಂಚಿಕೆಯಲ್ಲಿ ಸಮಾನ ರೀತಿಯಲ್ಲಿ ಆಗದೇ ಇರುವುದು., ಆನ್ಲೈನ್ ಬಿಟ್ಟು ೬೦ ಅಂಶಗಳ ಪ್ರಶ್ನಾವಳಿಯನ್ನು ಗಣಿತಿದಾರರು ಸ್ವಯಂ ದಾಖಲಿಸಲು ಅನುವು ಮಾಡಿಕೊಡಬೇಕು. ಎಸ್.ಎಸ್. ದರಗಾದ ಶಿಕ್ಷಕ.


