ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ  ಲಕ್ಷಾಂತರ ಬೆಲೆ ಬಾಳುವ ಸಾಮಗ್ರಿ ವಶಕ್ಕೆ

Ravi Talawar
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ  ಲಕ್ಷಾಂತರ ಬೆಲೆ ಬಾಳುವ ಸಾಮಗ್ರಿ ವಶಕ್ಕೆ
WhatsApp Group Join Now
Telegram Group Join Now
ಬಳ್ಳಾರಿ ಸೆ 25. ಎರ್‌ಟೇಲ್ ಮತ್ತು ಜಿಯೋ ಟೆಲಿ ಕಮ್ಯುನಿಕೇಷನ್ ಟವರ್‌ಗಳ ಬ್ಯಾಟರಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಮಾಡಿದ ಮೂವರು ಆರೋಪಿತರ ಬಂಧನ. ಆರೋಪಿತರಿಂದ 30.49,000/-ರೂ.ಗಳ ಮೌಲ್ಯದ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋ ವಶಪಡಿಸಿಕೊಂಡ  ಗ್ರಾಮೀಣ ಪೊಲೀಸ್ ಠಾಣೆಯಾ,ಸತೀಶ್. (ಶಿವಮಣಿ ) ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಪಕ್ಕದ ನೆರೆಯ ರಾಜ್ಯವಾದ ಆಂಧ್ರದಲ್ಲಿ ಇತ್ತೀಚಿಗೆ ಟವರ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರಿಂದ ಸದರಿ ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಡಾ॥ ಶೋಭಾ ರಾಣಿ ವಿ.ಜೆ., ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರ ನಿರ್ದೇಶನ, ನವೀನ್ ಕುಮಾರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಬಳ್ಳಾರಿ ರವರ ಮಾರ್ಗದರ್ಶನದಲ್ಲಿ  ಸಂತೋಷ ಚೌವಾಣ್ ಪೊಲೀಸ್ ಉಪಾಧೀಕ್ಷರು, ಸಿರುಗುಪ್ಪ ಉಪ-ವಿಭಾಗ, ಸಿರುಗುಪ್ಪ, ರವರ ನೇತೃತ್ವದಲ್ಲಿ ಎನ್.ಸತೀಶ್. ಪೊಲೀಸ್ ಇನ್ಸ್‌ಪೆಕ್ಟರ್, ಬಳ್ಳಾರಿ ಗ್ರಾಮೀಣ ಠಾಣೆ,  ವಿ.ಹೊನ್ನಪ್ಪ ಪಿ.ಎಸ್.ಐ. (ತನಿಖೆ), ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ.  ಶ್ರೀನಿವಾಸಲು ಎಂ. ಎ.ಎಸ್.ಐ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ  ಶ್ರೀನಿವಾಸ ಸಿ.ಹೆಚ್.ಪಿ.-213.  ಕೆ.ಬೀರಪ್ಪ ಸಿ.ಹೆಚ್.ಸಿ.-264.  ಉಮಾಶಂಕರ ಸಿ.ಹೆಚ್.ಸಿ. 48,  ರಮೇಶ್ ಬಾಬು ಪಿ.ಸಿ 428. ಮಂಜುನಾಥ ಸಿ.ಪಿ.ಸಿ 366.  ಮಾರ್ಕ್ ಸಿ.ಪಿ.ಸಿ 229.  ಫಕ್ಕಿರೇಶ ಸಿ.ಪಿ.ಸಿ.412, ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು, ಅದರಂತೆ ದಿನಾಂಕ: 25-09-2024 ರಂದು ಬೆಳಿಗ್ಗೆ ಸದರಿ ತಂಡ ಕಾರ್ಯಚರಣೆ ಮಾಡಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ-05. ಪಿ.ಡಿ.ಹಳ್ಳಿ-04, ಕುಡಿತಿನಿ-01 ಆಂಧ್ರದಲ್ಲಿ-05 ಒಟ್ಟು 15 ಕಡೆಗಳಲ್ಲಿ ಟವರ್‌ನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಪ್ರಕಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಾದ 11 ಅನಾಸ್ ತಂದೆ ನವಾಬುದ್ದೀನ್, ವಯಸ್ಸು: 25 ವರ್ಷ, ಮುಸ್ಲಿಂ ಜನಾಂಗ, ಗುಜರಿ `ಕೆಲಸ. ವಾಪ ಕೈಸ್ತಾ ಬದ್ಲಾ ಗ್ರಾಮ. ಮನ್ನಾ ತಾಲೂಕು, ಮಿರತ್ ಜಿಲ್ಲೆ, ಉತ್ತರಪ್ರದೇಶ ರಾಜ್ಯ, 2] ಇಕ್ರಾರ್, 3) ವಿಲ್ಸ್ ನವಾಜ್ ತಂದೆ ಗುಲ್ದಾರ್, ವಯಸ್ಸು: 22, ಮುಸ್ಲಿಂ ಜನಾಂಗ, ಗುಜರಿ ಕೆಲಸ. ವಾಸ॥ ಮುಜಫರ್ ನಗರ, ಉತ್ತರಪ್ರದೇಶ ರಾಜ್ಯ, 4) ಅನಾಸ್ @ ಅರ್‌ಹಾನ್ ತಂದೆ ಉಫ್ರಾನ್, ವಯಸ್ಸು: 19 ವರ್ಷ, ಮುಸ್ಲಿಂ ಜನಾಂಗ, ಗುಜರಿ ಕೆಲಸ. ವಾಸ।। ಮುಜಪರ್ ನಗರ, ಉತ್ತರಪ್ರದೇಶ ರಾಜ್ಯ ರವರನ್ನು ವಶಕ್ಕೆ ಪಡೆದು. ಆರೋಪಿತರಿಂದ ಅಂದಾಜು 30.49,000/- ರೂ ಮೌಲ್ಯದ 26 ಬ್ಯಾಟರಿಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಗೂ ಸುಮಾರು 05 ಲಕ್ಷ ಮೌಲ್ಯದ ಒಂದು ಇಂದ್ರಾ ಕಂಪನಿಯ ಲಗೇಜ್ ಪಿಕಪ್ ಆಟೋವನ್ನು ಮತ್ತು ಕೃತ್ಯ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತು ಮಾಡಿರುತ್ತಾರೆ.
 ಡಾ|| ಶೋಭಾ ರಾಣಿ ವಿ.ಜೆ., ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಬಳ್ಳಾರಿ. ರವರು ಟವರ್ ಕಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡ ಮೇಲ್ಕಂಡ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.IG.SP. ಕಾರ್ಯ ಬಗ್ಗೆ ಇಡೀ ಜಿಲ್ಲೆ, ಕರ್ನಾಟಕ, ಅಭಿನಂದನೆಗಳು ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article