ಧಾರವಾಡ: ಮಹಾನವಮಿ ಹಾಗೂ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀಗೌರಿ ರಾಷ್ಟ್ರ ಸೇವಿಕಾ ಸಂಘದ ಸದಸ್ಯರು ಶ್ರೀಲಲಿತಾ ಅಷ್ಟೋತ್ತರ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಧಾರವಾಡ ನಗರದ ಹೂಸ ಬಸ್ ನಿಲ್ದಾಣ ಹತ್ತಿರವಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ರೀಗೌರಿ ರಾಷ್ಟ್ರ ಸೇವಿಕಾ ಸಂಘದ ಸದಸ್ಯರಿಂದ ಶ್ರೀ ಲಲಿತಾ ಅಷ್ಟೋತ್ತರ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಿತು .ಗೌರಿ ಮೂರ್ತಿ ಪ್ರತಿಷ್ಟಾಪಸಿ ಪೂಜೆ ಸಲ್ಲಿಸಲಾಯಿತು ಮಹಿಳೆಯರಿಂದ ಶ್ರೀ ಲಲಿತಾ ಅಷ್ಟೋತ್ತರ ಪಠಣ ನಡೆಯಿತು.ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ದೇವರ ಅನುಗ್ರಹ ಪಡೆದರು.


