ವತಿಯಿಂದ ಕನ್ನಡ ಸಿನಿಮಾಗಳಿಗೆ ಒಟಿಟಿ ಯೋಜನೆ; ಚಂದನವನಕ್ಕೆ ಸಿಎಂ ಅಭಯ

Ravi Talawar
ವತಿಯಿಂದ ಕನ್ನಡ ಸಿನಿಮಾಗಳಿಗೆ ಒಟಿಟಿ ಯೋಜನೆ; ಚಂದನವನಕ್ಕೆ ಸಿಎಂ ಅಭಯ
WhatsApp Group Join Now
Telegram Group Join Now

ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷ್ಯ ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿಯೇ ಮಾಡುತ್ತಿಲ್ಲ ಎಂಬ ದೂರುಗಳು ಹಲವು ವರ್ಷಗಳಿಂದಲೂ ಕೇಳುತ್ತಲೇ ಬರುತ್ತಿದೆ. ಸ್ಟಾರ್ ನಟರ ಸಿನಿಮಾಗಳನ್ನು ಸಹ ಒಟಿಟಿಗಳು ಒಳ್ಳೆಯ ಬೆಲೆಗಳಿಗೆ ಖರೀದಿ ಮಾಡುತ್ತಿಲ್ಲ ಎಂಬ ದೂರು ಮೊದಲಿನಿಂದಲೂ ಇದೆ. ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರುಗಳು ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರ ಚಿತ್ರರಂಗದ ನೆರವಿಗೆ ಬಂದಿದೆ. ಸ್ವತಃ ರಾಜ್ಯ ಸರ್ಕಾರವೇ ಹೊಸದೊಂದು ಒಟಿಟಿ ಪ್ರಾರಂಭಕ್ಕೆ ಮುಂದಾಗಿದೆ.

ಅಸಲಿಗೆ ಸರ್ಕಾರದ ವತಿಯಿಂದ ಒಟಿಟಿ ಪ್ರಾರಂಭ ಯೋಜನೆ ಹೊಸದೇನಲ್ಲ. ಈ ಹಿಂದಿನ ಬಜೆಟ್​​ನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಒಟಿಟಿ ಸ್ಥಾಪನೆ ಬಗ್ಗೆ ಉಲ್ಲೇಖಿಸಿದ್ದರು. ಇದೀಗ ಒಟಿಟಿ ಸ್ಥಾಪನೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಒಟಿಟಿ ನಿರ್ಮಾಣ ಅದರ ಕಾರ್ಯವೈಖರಿ ಇನ್ನಿತರೆಗಳ ಬಗ್ಗೆ ವಿವರವಾದ ನೀಲನಕ್ಷೆಯನ್ನು ತಯಾರು ಮಾಡುತ್ತಿದೆ. ಒಟಿಟಿ ನಿರ್ಮಾಣಕ್ಕೆ ತಗಲುವ ವೆಚ್ಚ, ಸರ್ಕಾರದಿಂದ ಬೇಕಾಗುವ ಅನುದಾನ ಇನ್ನಿತರೆಗಳ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಈ ಸಮಿತಿಯಲ್ಲಿ ಕಂಠೀರವ ಸ್ಟುಡಿಯೋದ ಚೇರ್​​ಮ್ಯಾನ್ ಮೆಹಬೂಬ್ ಪಾಷಾ, ನಟ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಸಿನಿಮಾ ನಿರ್ಮಾಪಕ ಕೆಪಿ ಶ್ರೀಕಾಂತ್, ರಾಕ್​​ಲೈನ್ ವೆಂಕಟೇಶ್, ಸಿನಿಮಾ ನಟ, ನಿರ್ದೇಶಕ ದುನಿಯಾ ವಿಜಯ್, ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸೋಜಾ ಇನ್ನೂ ಕೆಲವರು ಇದ್ದಾರೆ.

2024 ರಲ್ಲಿ ನೆರೆಯ ಕೇರಳದಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಒಟಿಟಿ ಫ್ಲ್ಯಾಟ್​​ಪಾರ್ಮ್ ನಿರ್ಮಾಣ ಮಾಡಿತು. ಸಿ ಸ್ಪೇಸ್ ಹೆಸರಿನ ಈ ಒಟಿಟಿ ಪ್ಲ್ಯಾಟ್​​ಫಾರ್ಮ್ ಕೇವಲ ಮಲಯಾಳಂ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದು, ಚಿತ್ರರಂಗಕ್ಕೆ ನೆರವು ನೀಡಲೆಂದು ಪ್ರಾರಂಭವಾದ ಒಟಿಟಿ ಇದಾಗಿದೆ. ಈ ಒಟಿಟಿಯಿಂದಾಗಿ ಕಡಿಮೆ ದರಕ್ಕೆ ಮಲಯಾಳಂ ಸಿನಿಮಾಗಳನ್ನು ಪ್ರೇಕ್ಷಕರು ನೋಡುವಂತಾಗಿದೆ. ಇ ಒಟಿಟಿಯು ಪೇ-ಪರ್-ವೀವ್ ಮಾಡೆಲ್​​​ ಮೇಲೆ ಕೆಲಸ ಮಾಡುತ್ತಿದೆ. ಎಷ್ಟು ಹಣ ಬರುತ್ತದೆಯೋ ಅದರಲ್ಲಿ 50% ಅನ್ನು ನಿರ್ಮಾಪಕರಿಗೆ ನೀಡಲಾಗುತ್ತದೆ. ಇದೇ ಮಾದರಿಯ ಒಟಿಟಿ ಕನ್ನಡಕ್ಕಾಗಿಯೂ ನಿರ್ಮಾಣ ಆಗಲಿದೆ.

WhatsApp Group Join Now
Telegram Group Join Now
Share This Article