ಪ್ರಾಣಿಗಳ ಕಡಿತಕ್ಕೆ ವೈದ್ಯರ ಸಲಹೆ ಪಡೆದು ತಪ್ಪದೇ ಲಸಿಕೆ ಹಾಕಿಸಿ: ಡಾ.ಮರಿಯಂಬಿ.ವಿ.ಕೆ

Ravi Talawar
ಪ್ರಾಣಿಗಳ ಕಡಿತಕ್ಕೆ ವೈದ್ಯರ ಸಲಹೆ ಪಡೆದು ತಪ್ಪದೇ ಲಸಿಕೆ ಹಾಕಿಸಿ: ಡಾ.ಮರಿಯಂಬಿ.ವಿ.ಕೆ
WhatsApp Group Join Now
Telegram Group Join Now
ಬಳ್ಳಾರಿ: ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಮತ್ತು ವಿಶ್ವ ರೇಬಿಸ್ ದಿನಾಚರಣೆ

ಬಳ್ಳಾರಿ,ಸೆ.25: ಹಾವು ಮತ್ತು ನಾಯಿ, ಇತರೆ ಪ್ರಾಣಿ ಕಡಿತ ಸಂಭವಿಸಿದಾಗ ರೋಗಿಯನ್ನು ಭಯಬೀತರಾಗದಂತೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರಾಷ್ಟಿçÃಯ ಹಾವು ಕಡಿತ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟಿçÃಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿ ‘ಈಗಲೇ ಕಾರ್ಯನಿರ್ವಹಿಸಿ: ನೀವು, ನಾನು, ಸಮುದಾಯ’ ಎಂಬ ಘೋಷವಾಕ್ಯದಡಿ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ  ಆಯೋಜಿಸಿದ್ದ “ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ” ಮತ್ತು “ವಿಶ್ವ ರೇಬಿಸ್ ದಿನಾಚರಣೆ” ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೇಬಿಸ್ ಕಾಯಿಲೆಯ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾಯಿ ಕಡಿತದ ಮೂಲಕ ಹರಡುವ ರೇಬಿಸ್ ಖಾಯಿಲೆಯನ್ನು 2030 ರ ವೇಳೆಗೆ ಸಂಭವಿಸುವ ಸಾವಿನ ಸಂಖ್ಯೆಯನ್ನು ಶೂನ್ಯ ಪ್ರಮಾಣಕ್ಕಿಳಿಸುವ ಗುರಿ ಹೊಂದಲಾಗಿದೆ ಎಂದರು.
ರೇಬಿಸ್ ಒಂದು ಮಾರಾಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಚ್ಚಿದ ನಂತರ ಗಾಯವನ್ನು ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್ ಕಾಯಿಲೆಗೆ ತುತ್ತಾಗುವುದನ್ನು ತಡೆಯಬಹುದು. ನಂತರ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು, ಪೋಸ್ಟ್ ಎಕ್ಸೊ÷್ಪÃಸರ್ ಎಂಬ ರೋಗನಿರೋಧಕವನ್ನು ಸಂಪೂರ್ಣವಾಗಿ 5 ಡೋಸ್‌ಗಳ ಕ್ರಮವಾಗಿ 1, 3, 7, 14 ಮತ್ತು 28 ನಿಗದಿಪಡಿಸಿದ ದಿನಗಳಂದು ಹಾಕಿಸಬೇಕು ಎಂದು ತಿಳಿಸಿದರು.

ಹಾವು ಕಡಿತ ಉಂಟಾದ ಸಂದರ್ಭದಲ್ಲಿ ರೋಗಿಯನ್ನು ಭಯಬೀತರಾಗದಂತೆ ನೋಡಿಕೊಳ್ಳಬೇಕು. ಹಾವು ಕಡಿತದ ಜಾಗದಲ್ಲಿ ಸಾಧ್ಯವಾದಷ್ಟು ಕಚ್ಚಿದ ಜಾಗದಿಂದ ಕಾಲು ಅಲುಗಾಡುದಂತೆ ಕಾಲಿನ ಮೇಲ್ಭಾಗದವರೆಗೆ ಗಟ್ಟಿಯಾಗಿ ಚೆಕ್ಕೆಯಿಂದ ಕಟ್ಟಿ, ಚಿಕಿತ್ಸೆಗೆ ಹತ್ತಿರದ ಆಸ್ಪತ್ರ‍್ರೆಗೆ ತೆರಳಿ ತಪ್ಪದೇ ಎ.ಎಸ್.ವಿ ಇಂಜೆಕ್ಷನ್ ಹಾಕಿಸಬೇಕು ಎಂದು ತಿಳಿಸಿದರು.
ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಹ್ಲಾದ್ ಚೌದ್ರಿ ಅವರು ಮಾತನಾಡಿ, ಜಾಗೃತಿ ಕಾರ್ಯಕ್ರಮಗಳನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ತುಂಬಾ ಸಂತಸ ತಂದಿದ್ದು, ಕಾರ್ಯಕ್ರಮದಲ್ಲಿ ತಿಳಿಸಲಾದ ಮುಂಜಾಗ್ರತಾ ಕ್ರಮಗಳನ್ವಯ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಹಾವು, ನಾಯಿ ಮತ್ತು ಇತರೇ ಪ್ರಾಣಿ ಕಡಿತ ಪ್ರಕರಣಗಳು ಕಂಡುಬAದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಜೊತೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆಯನ್ನು ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ.ವಿಶಾಲಾಕ್ಷಿ ಅವರು ಮಾತನಾಡಿ, ಪಿ.ಪಿ.ಟಿ ಮುಖಾಂತರ ವಿದ್ಯಾರ್ಥಿಗಳಿಗೆ ನಾಯಿ ಕಡಿತದ ತೀವ್ರತೆಯ ಬಗ್ಗೆ ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಸಹಾಯಕ ಪ್ರಾಧ್ಯಾಪಕಿ ಡಾ.ಪಲ್ಲವಿ, ಎನ್.ಸಿ.ಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ.ಜಬೀನ್‌ತಾಜ್, ಜಿಲ್ಲಾ ಮೈಕ್ರೋಬಯಾಲಾಜಿಸ್ಟ್ ಶರತ್ ಬಾಬು, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಐ.ಇ.ಸಿ ವಿಭಾಗದ ಪ್ರಶಾಂತ್, ಜಿಲ್ಲಾ ತಂಬಾಕು ಸಲಹೆಗಾರರು, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು, ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article