ವಿಜಯಪುರ: ಸರ್ಕಾರದಿಂದ ನಡೆಸಲಾಗುತ್ತಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಡಾ ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ತಮ್ಮ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನಜಾಗೃತಿ ಮೂಡಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ ವಗ್ಯಾನವರ ಅವರು ಸಲಹೆ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ಬೌದ್ಧ ಸಂಘಸAಸ್ಥೆಗಳ ಪದಾಧಿಕಾರಿಗಳು, ಬೌದ್ಧ ಉಪಸಕರು, ಎಲ್ಲಾ ದಲಿತ ಸಂಘಟನೆಗಳ ನಾಯಕರು ಮತ್ತು ಎಲ್ಲಾ ಸಮಾಜದ ಮುಖಂಡರು ಜಾಗೃತ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ತಮ್ಮ ಧರ್ಮ (ಕಾಲಂ ನಂ.೮) ಬೌದ್ಧ (ಕ್ರಮ ಸಂಖ್ಯೆ ೬) ಎಂದು ತಮ್ಮ ಜಾತಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ತಮ್ಮ ಮೂಲ ಜಾತಿ ಹೊಲೆಯ, ಛಲವಾದಿ, ಮಾದಿಗ ಇತ್ಯಾದಿ (ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ೧೦೧ ಜಾತಿಗಳಲ್ಲಿ ತಮ್ಮ ಮೂಲ ಜಾತಿ) ದಾಖಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಬಾಬಾಸಾಹೇಬರು ನಮಗೂ ಮನುಷ್ಯರಂತೆ ಬದುಕಲು ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟು ಕೊನೆಗೆ ಬುದ್ಧ ಮಾರ್ಗ ತೊರಿದ್ದಾರೆ ಅದಕ್ಕಾಗಿ ನಾವೆಲ್ಲ ಅವರು ತೊರಿದ ಮಾರ್ಗದಂತೆ ಬೌದ್ಧರಾಗಬೇಕಾಗಿದೆ ಅದಕ್ಕಾಗಿ ನಾವು ಧರ್ಮದ ಕಾಲಂನಲ್ಲಿ ಖಡ್ಡಾಯವಾಗಿ ಬೌದ್ಧ ಎಂದು ಬರೆಸುವಂತೆ ಎಲ್ಲಾ ಮನವಿ ಮಾಡಿದ್ದಾರೆ.
ಧರ್ಮ ‘ಬೌದ್ಧ’ಎಂದು ಜಾತಿ ಹೊಲೆಯ, ಛಲವಾದಿ, ಮಾದಿಗ ಎಂದು ದಾಖಲಿಸಿದರೆ ದಲಿತರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯಗಳು ರದ್ದಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ೧೯೯೦ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರೆ ಅವರ ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ರದ್ದಾಗದೇ ಯಥಾವತ್ತಾಗಿ ಮುಂದುವರೆಯುತ್ತದೆ.
ಕೇಂದ್ರ ಸರ್ಕಾರದ ಈ ಆದೇಶಕ್ಕೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಮರು ಆದೇಶ ಹೊರಡಿಸಿ, ಪರಿಶಿಷ್ಟ ಜಾತಿಯ ಬೌದ್ಧರಿಗೆ ಮೀಸಲಾತಿ ಸೌಲಭ್ಯ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿ ದಲಿತರು ಗೊಂದಲಕ್ಕೆ ಒಳಗಾಗದೆ, ಭಯ ಬಿಟ್ಟು, ತಮ್ಮ ಧರ್ಮ ಬೌದ್ಧ ಎಂದು ಜಾತಿ ಹೊಲೆಯ, ಮಾದಿಗ ಎಂದು ಕಡ್ಡಾಯವಾಗಿ ದಾಖಲಿಸಬೇಕೆಂದು ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಜನರಿಗೆ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನಜಾಗೃತಿ ಮೂಡಿಸಿ: ವೆಂಕಟೇಶ ವಗ್ಯಾನವರ


