ಹುಕ್ಕೇರಿ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಹಿರಿಯರಾದ ಡಾ. ಪ್ರಭಾಕರ ಕೋರೆ, ರಮೇಶ ಅಣ್ಣಾ ಕತ್ತಿ ಸೇರಿದಂತೆ ಅನೇಕರ ಪೈಪೋಟಿ ಇದ್ದಾಗ ಹೈಕಮಾಂಡ್ ನನ್ನ ಹೆಸರನ್ನು ಸಿಫಾರಸ್ಸು ಮಾಡಿದಾಗ ನನಗೆ ದಿ. ಉಮೇಶ ಕತ್ತಿ ಅವರು ಸಂಪರ್ಕ ಮಾಡಿ ಒಳ್ಳೇದು ಆಯ್ತು ಏನೇ ಆಗಲಿ ಒಟ್ಟು ಬೆಳಗಾವಿ ಜಿಲ್ಲೆಯವರು ಆಯ್ಕೆ ಅದೆವು. ನಿನಗೆ ಏನು ಬೇಕು ಎಲ್ಲ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಸಂಪೂರ್ಣ ಜವಾಬ್ದಾರಿ ತಗೆದುಕೊಂಡು ಎಲ್ಲ ಕೆಲಸವನ್ನು ಅಣ್ಣನಂತೆ ನಿಂತು ನಾನು ರಾಜ್ಯಸಭಾ ಸದಸ್ಯ ಆಗಲು ಸಹಕರಿಸಿದರು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನಾನು ರಾಜ್ಯಸಭಾ ಸದಸ್ಯ ಆದಾಗ ಹಿರಿಯ ಅಣ್ಣನಂತೆ ಎಲ್ಲ ಕೆಲಸ ಮಾಡಿದರು ಉಮೇಶ ಕತ್ತಿ:ಈರಣ್ಣ ಕಡಾಡಿ

ಅವರು ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ ಶುಗರ್ಸ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮಾಜಿ ಸಚಿವ, ಉತ್ತರ ಕರ್ನಾಟಕ ಹೋರಾಟಗಾರ ದಿ. ಉಮೇಶ ಕತ್ತಿ ಅವರ ಜೀವನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸಣ್ಣ ಪುಟ್ಟ ಕಾರ್ಯಗಳಿಗೆ ತಲೆ ಕೆಡಿಕೊಳ್ಳದ ಉಮೇಶ ಅಣ್ಣಾ ಅವರು ನಮ್ಮ ಭಾಗದ ಜನ ಮೈಸೂರು ಕೆ ಆರ್ ಎಸ್ ಮತ್ತು ಆಲಮಟ್ಟಿ ಡ್ಯಾಮ್ ವೀಕ್ಷಣೆಗೆ ಹೋಗುತ್ತಾರೆ ಅದರ ಬದಲಿಗೆ ನಮ್ಮ ಹೆಮ್ಮೆಯ ರಜಾ ಲಕ್ಕಮಗೌಡ ಹಿಡಕಲ್ ಜಲಾಶಯದಲ್ಲಿ ವಿನೂತನ ಮಾದರಿ ಡ್ಯಾಮ್ ಮಾಡಲು ನನ್ನೊಂದಿಗೆ ಚರ್ಚಿಸಿ ಅದರ ಸಾಕಾರಕ್ಕೆ ಶ್ರಮಿಸಿದ್ದರು, ಅದರ ಕೆಲಸ ಈಗ ಹಂತ ಹಂತವಾಗಿ ನಡೆದಿದೆ ಆದರೆ ಇಂದು ಅವರಿಲ್ಲ , ಅವರು ಅನೇಕರು ನಾಯಕರಗಳು ಸಹಾಯ, ಸಹಕಾರ ನೀಡಿದ್ದಾರೆ. ಜಾತಿ ರಾಜಕಾರಣ ಮಾಡಿದವರಲ್ಲ, ಈಗಿನ ಜಿಲ್ಲಾ ರಾಜಕಾರಣ ಜನರಿಗೆ ಮಾರಕ ಆಗುತ್ತಿದೆ ಎಂದರು.

