ಸುತಗಟ್ಟಿ: ಬೆಳಗಾವಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು,ಸುತಗಟ್ಟಿ ಗ್ರಾಮದ ಹಿರಿಯ ಮುಖಂಡರು, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ ಇವರ ಧರ್ಮಪತ್ನಿಯಾದ ಶ್ರೀಮತಿ ಕಸ್ತೂರಿ ಮಲ್ಲಿಕಾರ್ಜುನ ತುಬಾಕಿ (70) ಇವರು ಬುಧವಾರ ದಿ. 24-09-2025 ರಂದು ನಿಧನರಾದರು.ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಶೋಕ : ಮೃತರ ನಿಧನಕ್ಕೆ ಸುತಗಟ್ಟಿ ಹಿರೇಮಠದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಮಾಜಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ, ಮುಖಂಡರಾದ ಅಡಿವಪ್ಪ ಮಾಳನ್ನವರ, ಯುವ ಮುಖಂಡ ಸಚಿನ ಪಾಟೀಲ, ಡಾ ಪ್ರಕಾಶ ಹಾಳ್ಯಾಳ, ಶ್ರೀಶೈಲ ಕಮತಗಿ, ದೀಪಕಗೌಡ ಪಾಟೀಲ, ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ, ಮಹಾಂತೇಶ್ ಮೋಹರೆ, ಅಡಿವಪ್ಪ ಹೊಸಮನಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.