ಎನ್‌ಎಸ್‌ಎಸ್‌ನ ಧ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆ: ಡಾ.ಸೌಮ್ಯಾ ಪಾಟೀಲ

Ravi Talawar
ಎನ್‌ಎಸ್‌ಎಸ್‌ನ  ಧ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆ: ಡಾ.ಸೌಮ್ಯಾ ಪಾಟೀಲ
WhatsApp Group Join Now
Telegram Group Join Now
ಕಾಗವಾಡ:  ಸಮಾಜ ಸೇವೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಕರ್ತವ್ಯ. ಕೇವಲ ಹಣದಿಂದ ಎಲ್ಲವನ್ನು ಕೊಂಡುಕೊಳ್ಳಬಹುದೆAಬ ಭ್ರಮೆ ಸ್ವಾಸ್ಥö್ಯ ಸಮಾಜದ ನಿರ್ಮಾಣಕ್ಕೆ ಅತಿ ದೊಡ್ಡ ಸವಾಲಾಗಿದೆ ಎಂದು ನಿವೃತ್ತ ಪ್ರಾಚಾರ್ಯರಾದ ಪ್ರೊ.ಕುಮಾರ ಮಾಲಗಾಂವೆ ನುಡಿದರು. ಅವರು ಸ್ಥಳೀಯ ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಎನ್‌ಎಸ್‌ಎಸ್ ಘಟಕ ೧ ಮತ್ತು ೨, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವೈಆರ್‌ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ೫೬ನೇ ರಾಷ್ಟಿçÃಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ತಪಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಯುಷ್ಯ ವಿಭಾಗದ ವೈದ್ಯರಾದ ಡಾ.ಸೌಮ್ಯಾ ಪಾಟೀಲ ಅವರು ಯುವಜನತೆ ಆರೋಗ್ಯದ ಸ್ವಾಸ್ಥö್ಯತೆಯನ್ನು ಕಾಪಾಡಿಕೊಳ್ಳಬೇಕು. ತನ್ಮೂಲಕ ರಾಷ್ಟç ನಿರ್ಮಾಣದ ಪ್ರಕ್ರಿಯೆಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
 ಎನ್‌ಎಸ್‌ಎಸ್‌ನ ಅತೀ ಮುಖ್ಯವಾದ ಧ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವAತೆ ಮಾಡುವುದು ಎಂದು ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಪ್ರೊ.ಬಿ.ಎ.ಪಾಟೀಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎನ್‌ಎಸ್‌ಎಸ್ ಮುಖಾಂತರ ವಿದ್ಯಾರ್ಥಿಗಳು ಮತ್ತು ಸಮುದಾಯದ ಜನರು ಒಂದೆಡೆ ಸೇರಿ ಒಂದೆ ವೇದಿಕೆಯಲ್ಲಿ ತಮ್ಮಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಹಾಯ ಮಾಡಿ ಆ ಮೂಲಕ ರಾಷ್ಟçದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಪಿ.ತಳವಾರ ಮಾತನಾಡಿದರು. ಆರಂಭದಲ್ಲಿ ಪ್ರೊ.ಜೆ.ಎನ್.ನಾಯಿಕ ಹಾಗೂ ಸಂಗಡಿಗರು ಎನ್‌ಎಸ್‌ಎಸ್ ಗೀತೆ ಹಾಡಿದರು. ಎನ್‌ಎಸ್‌ಎಸ್ ಘಟಕ-೧ ರ ಅಧಿಕಾರಿಗಳಾದ ಡಾ.ಚಂದ್ರಶೇಖರ ವೈ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರೊ.ಜೆ.ಕೆ.ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಅಧಿಕಾರಿಗಳಾದ ಪ್ರೊ.ಆರ್.ಎಸ್.ನಾಗರಡ್ಡಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಸಾಧಕ ವಿದ್ಯಾರ್ಥಿಗಳಾದ ಶುಭಂ ಬೋರಗಾಂವೆ ಮತ್ತು ಸಮೀಕ್ಷಾ ಸಲಗರೆ ಅವರನ್ನು ಸನ್ಮಾನಿಸಲಾಯಿತು. ಎನ್‌ಎಸ್‌ಎಸ್ ಘಟಕ-೨ ರ ಅಧಿಕಾರಿಗಳಾದ ಪ್ರೊ.ಎ.ಎ.ಪಾಟೀಲ ವಂದಿಸಿದರು. ವೈಆರ್‌ಸಿ ಘಟಕದ ಅಧಿಕಾರಿಗಳಾದ ಮಿಸ್.ಎಸ್.ಎಸ್.ಫಡತರೆ ನಿರೂಪಣೆ ಮಾಡಿದರು.
 ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಮೇಜರ್ ವಿ.ಎಸ್.ತುಗಶೆಟ್ಟಿ, ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ, ಕಾಗವಾಡ ಆರೋಗ್ಯ ಸಮುದಾಯ ಕೇಂದ್ರದ ವೈದ್ಯರಾದ ಡಾ.ಪ್ರತಿಭಾ, ಡಾ.ಕಾವೇರಿ ಮಿರ್ಜಿ ಸೇರಿದಂತೆ ಮಹಾವಿದ್ಯಾಲಯ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article