ಮಫ್ತಿ ಪೊಲೀಸ್ ಟೀಸರ್ ರಿಲೀಸ್ 

Ravi Talawar
 ಮಫ್ತಿ ಪೊಲೀಸ್ ಟೀಸರ್ ರಿಲೀಸ್ 
WhatsApp Group Join Now
Telegram Group Join Now
      ಆಕ್ಷನ್ ಕಿಂಗ್ ಅರ್ಜುನ್ ಮತ್ತು ಐಶ್ವರ್ಯ ರಾಜೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಫ್ತಿ’ ಪೊಲೀಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.  ಜಿ.ಎಸ್. ಆರ್ಟ್ಸ್ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕ ಜಿ. ಅರುಲ್ ಕುಮಾರ್ ಪ್ರಸ್ತುತಪಡಿಸಿದ್ದಾರೆ.  ದಿನೇಶ್ ಲೆಟ್ಚುಮನನ್ ನಿರ್ದೇಶನದ ಚೊಚ್ಚಲ  ಚಿತ್ರ ಇದಾಗಿದೆ.
     ‘ಮಫ್ತಿ‌’ ಪೊಲೀಸ್ ಕ್ರೈ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದ ಮೂಲಕ ಕಾನೂನನ್ನು ನ್ಯಾಯದಿಂದ ಮೀರಿಸಬಹುದು, ನ್ಯಾಯವನ್ನು ನೀತಿಯಿಂದ ಮೀರಿಸಬಹುದು. ಆದರೆ ಅಂತಿಮ ಲೆಕ್ಕಾಚಾರದಲ್ಲಿ ನೀತಿ ಮಾತ್ರ ಗೆಲ್ಲುತ್ತದೆ ಎಂಬ ಎಳೆ ಇಟ್ಟು ಸಿನಿಮಾ ಮಾಡಲಾಗಿದೆ‌.
     ಪವರ್ ಪ್ಯಾಕ್ಡ್ ಟೀಸರ್ ನಲ್ಲಿ ಅರ್ಜುನ್ ಸರ್ಜಾ ಭರ್ಜರಿ ಆಕ್ಷನ್ಸ್ ಮೂಲಕ ಅಬ್ಬರಿಸಿದ್ದಾರೆ. ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಭಿರಾಮಿ, ರಾಮ್‌ಕುಮಾರ್, ಜಿ.ಕೆ. ರೆಡ್ಡಿ, ಪಿ.ಎಲ್. ತೇನಪ್ಪನ್, ಲೋಗು, ಬರಹಗಾರ-ನಟ ವೇಲಾ ರಾಮಮೂರ್ತಿ, ತಂಗದುರೈ, ಪ್ರಾಂಕ್‌ಸ್ಟರ್ ರಾಹುಲ್, ಒ.ಎ.ಕೆ. ಸುಂದರ್ ಸೇರಿದಂತೆ ಹಲವರು ನಟಿಸಿದ್ದಾರೆ.
    ಸರವಣನ್ ಅಭಿಮನ್ಯು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಆಶಿವಗನ್ ಸಂಗೀತ ನೀಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನ ಚಿತ್ರಕ್ಕಿದೆ.
     ಚಿತ್ರದ ಆಡಿಯೋ, ಟ್ರೇಲರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕವನ್ನು  ಶೀಘ್ರದಲ್ಲೇ ಚಿತ್ರತಂಡ ಘೋಷಿಸಲಿದೆ. ‘ಮಫ್ತಿ’ ಪೊಲೀಸ್ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ
WhatsApp Group Join Now
Telegram Group Join Now
Share This Article